*ಮಂಡ್ಯದಲ್ಲಿ ಲೋಕಾಯುಕ್ತ ದಾಳಿ , ದಾಖಲೆಗಳ ಪರಿಶೀಲನೆ ವಿಕ ಸುದ್ದಿಲೋಕ ಮಂಡ್ಯ ನಗರದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ( ಎಇಇ ) ಎಸ್ .ಸತೀಶ್ ಅವರ ಮನೆ ಮೇಲೆ ಗುರುವಾರ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಸರಕಾರಿ ಎಸ್ ಆರ್ ಮೌಲ್ಯದ ಪ್ರಕಾರ 3.01ಕೋಟಿ ರೂ. ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ಇದು ಮಾರುಕಟ್ಟೆ ಮೌಲ್ಯವು 10 ಕೋಟಿ ರೂ.ಗಳಿಗೂ ಅಧಿಕವಾಗಿದೆ ಎನ್ನಲಾಗಿದೆ. ಮಂಡ್ಯ ಲೋಕಾಯುಕ್ತ ಎಸ್ಪಿ ಎಸ್ .ಸುರೇಶ್ ಬಾಬು ನೇತೃತ್ವದಲ್ಲಿಸತೀಶ್ ಅವರ ಮಂಡ್ಯದಲ್ಲಿನ ಮನೆ, ಲೋಕೋಪಯೋಗಿ ಇಲಾಖೆಯ ಕಚೇರಿ, ಬಿಡದಿಯಲ್ಲಿನ ಅಪಾರ್ಟ್ ಮೆಂಟ್ , ತಂದೆ ಮನೆ, ಅತ್ತೆ ಮನೆ ಸೇರಿದಂತೆ 5 ಪ್ರತ್ಯೇಕ ಸ್ಥಳಗಳಲ್ಲಿಏಕ ಕಾಲದಲ್ಲಿದಾಳಿ ನಡೆಸಿ ಪರಿಶೀಲಿಸಿದರು. ಈ ವೇಳೆ ಆದಾಯಕ್ಕಿಂತ ಶೇ.207.99ರಷ್ಟು ಅಧಿಕ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಪತ್ತೆಯಾಗಿದೆ. ಸತೀಶ್ ಅವರ ಈವರೆಗೆ ಒಟ್ಟು ಆದಾಯ 1.45 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆದರೆ, 2.19 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ 2.26 ಕೋಟಿ ರೂ. ಮೌಲ್ಯದ ಚರಾಸ್ತಿ ಸೇರಿದಂತೆ ಒಟ್ಟು 4.46 ಕೋಟಿ ಆಸ್ತಿಯ ಹೊಂದಿರುವುದು ಪರಿಶೀಲನೆ ವೇಳೆ ದೃಢಪಟ್ಟಿದೆ. ದಾಳಿ ವೇಳೆ ಡಿವೈಎಸ್ ಪಿ ಸುನಿಲ್ ಕುಮಾರ್ , ಇನ್ಸ್ ಪೆಕ್ಟರ್ ಗಳಾದ ಬ್ಯಾಟರಾಯಗೌಡ, ರವಿಕುಮಾರ್ , ಲೇಪಾಕ್ಷಮೂರ್ತಿ, ಸಿಬ್ಬಂದಿಗಳಾದ ಸಿದ್ದಲಿಂಗಸ್ವಾಮಿ, ಶಂಕರ್ , ಶರತ್ , ದಿನೇಶ್ , ಮೋಹನಾಚಾರಿ, ಮನು, ಯೋಗೇಶ್ , ಮಾನಸ, ಶೀಲಾ, ನಂದಿನಿ ಇತರರು ಭಾಗವಹಿಸಿದ್ದರು. *ಫೋಟೊ ಇದೆ ಎಂಡಿವೈ5ಎನ್ 12: ಮಂಡ್ಯದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಎಸ್ .ಸತೀಶ್ ಅವರ ನಿವಾಸದಲ್ಲಿಆಸ್ತಿ ದಾಖಲೆಗಳನ್ನು ಪರಿಶೀಲಿಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು. ಎಂಡಿವೈ5ಎನ್ 13: ಲೋಕಾಯುಕ್ತ ದಾಳಿ ವೇಳೆ ಮಂಡ್ಯದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಎಸ್ .ಸತೀಶ್ ಅವರ ನಿವಾಸದಲ್ಲಿಪತ್ತೆಯಾಗಿರುವ ನಗದು, ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು.

