ದಯಾಮರಣ ನೀಡುವಂತೆ ಮೊರೆ

Contributed byRamesh.Jadhav@timesgroup.com|Vijaya Karnataka

ಕೊಪ್ಪಳದ ಹಿರೇಬಗನಾಳ ಗ್ರಾಮದ ಜನರು ಉಕ್ಕು ಕಾರ್ಖಾನೆಗಳ ವಿಷಾನಿಲದಿಂದಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. 15 ವರ್ಷಗಳಿಂದ ಕಾರ್ಖಾನೆಗಳ ಮಾಲಿನ್ಯದಿಂದ ಆರೋಗ್ಯ, ಕೃಷಿ, ಕುಡಿಯುವ ನೀರು ಹಾಳಾಗಿದೆ. ಬೆಳೆ ಉತ್ಪಾದನೆ ಕುಸಿದಿದೆ, ಜಾನುವಾರುಗಳು ಮೃತಪಡುತ್ತಿವೆ. ಈ ಬಗ್ಗೆ ಶಾಸಕರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಪರಿಸರ ಹಾನಿ ಹಿನ್ನೆಲೆಯಲ್ಲಿ ಐದು ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ.

villagers in hirebaganal protest against industries to save environment and health

ವಿಕ ಸುದ್ದಿಲೋಕ ಕೊಪ್ಪಳ

ನಿತ್ಯ ವಿಷಾನಿಲದಿಂದ ಉಸಿರಾಡಿ ಅನಾರೋಗ್ಯದಿಂದ ಸಾಯುವುದಕ್ಕಿಂತ ಒಂದು ತೊಟ್ಟು ವಿಷ ಕೊಟ್ಟು ದಯಾಮರಣ ನೀಡಿ ಎಂದು ತಾಲೂಕಿನ ಹಿರೇಬಗನಾಳ ಗ್ರಾಮಸ್ಥರು ಶಾಸಕ ರಾಘವೇಂದ್ರ ಹಿಟ್ನಾಳ್ , ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ್ ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ ಅವರ ಎದುರು ಗುರುವಾರ ಅಲವತ್ತುಕೊಂಡರು.

‘‘ಹಿರೇಬಗನಾಳ ಗ್ರಾಮದ ಸುತ್ತ 23 ಉಕ್ಕು ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಕಳೆದ 15 ವರ್ಷಗಳಿಂದ ಕಾರ್ಖಾನೆಗಳ ಧೂಳು ಹಾಗೂ ಮಾಲಿನ್ಯದಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಿರೇಬಗನಾಳ ಸುತ್ತ 10 ದೊಡ್ಡ ಉಕ್ಕು ಕಾರ್ಖಾನೆಗಳು ಇರುವುದರಿಂದ ಪರಿಸರ ಸಂಪೂರ್ಣ ಮಾಲಿನ್ಯಗೊಂಡಿದೆ. ಗ್ರಾಮಸ್ಥರ ಆರೋಗ್ಯ ಹಾಗೂ ಕೃಷಿಗೂ ಹೊಡೆತ ಬಿದ್ದಿದೆ,’’ ಎಂದು ಗ್ರಾಮಕ್ಕೆ ಭೇಟಿ ನೀಡಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

‘‘ಕಾರ್ಖಾನೆಗಳ ಧೂಳಿನಿಂದ ಬೆಳೆಗಳ ಉತ್ಪಾದನೆ ಶೇ.40ರಷ್ಟು ಕುಸಿದಿದೆ. ಜಾನುವಾರುಗಳು ಮೇವು ತಿಂದು ಮೃತಪಡುತ್ತಿರುವ ಘಟನೆಗಳು ಹೆಚ್ಚಾಗಿವೆ. ಕುಡಿಯುವ ನೀರು ಕಲುಷಿತಗೊಂಡಿದ್ದು, ಮಕ್ಕಳಲ್ಲಿಅನಾರೋಗ್ಯ ಹೆಚ್ಚಾಗಿದೆ,’’ ಎಂದು ವಿವರಿಸಿದರು.

..............

*ಐದು ಕಾರ್ಖಾನೆಗಳಿಗೆ ನೋಟಿಸ್

ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ ಮಾತನಾಡಿ, ‘‘ಪರಿಸರಕ್ಕೆ ಹಾನಿ ಉಂಟುಮಾಡಿದ ಹಿನ್ನೆಲೆಯಲ್ಲಿ ಬಿಎನ್ ಎಸ್ ಕಾಯಿದೆಯಡಿ ಐದು ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. ವನ್ಯ ಸ್ಟೀಲ್ , ಬಿಬಿಕೆಎಸ್ , ಎಚ್ ಆರ್ ಜಿ ಇಸ್ಪಾತ್ ಸೇರಿ ಐದು ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಐದು ದಿನಗಳ ಹಿಂದೆ ನೋಟಿಸ್ ನೀಡಲಾಗಿದ್ದು, ಅವರಿಂದ ಉತ್ತರ ಬಂದಿದೆ. ಈಗಾಗಲೇ ಎರಡು ಕಾರ್ಖಾನೆಗಳನ್ನು ಬಂದ್ ಮಾಡಲು ಪರಿಸರ ಇಲಾಖೆಯಿಂದ ವರದಿ ಬಂದಿದೆ. ಇನ್ನೂ ಎರಡು ಕಂಪನಿಗಳ ವರದಿ ಬರಬೇಕಿದೆ. ವರದಿ ಆಧಾರದಲ್ಲಿಮುಂದಿನ ಕ್ರಮ ಕೈಗೊಳ್ಳಲಾಗುವುದು,’’ ಎಂದು ಹೇಳಿದರು.

..............

05ಕೆಪಿಎಲ್ ಫೋಟೋ01

ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮದ ನಿವಾಸಿಗಳು ಶಾಸಕ ಹಾಗೂ ಜಿಲ್ಲಾಧಿಕಾರಿಯ ಮುಂ¨ ಗುರುವಾರ ತಮ್ಮ ಸಂಕಷ್ಟ ತೋಡಿಕೊಂಡರು.