ಸಿಂಘ್ವಿಗೆ ಮತ್ತೆ ರಾಧಿಜ್ಯಧಿಸಧಿಭೆ ಟಿಧಿಕೆಧಿಟ್

Contributed byvijay.cheelange@timesgroup.com|Vijaya Karnataka

ಅಮೆರಿಕ ಜಲಾಂತರ್ಗಾಮಿಯೊಂದು ಶ್ರೀಲಂಕಾ ಕರಾವಳಿಯಲ್ಲಿಇರಾನ್‌ನ 'ಐರಿಸ್ ದೇನಾ' ನೌಕೆಯನ್ನು ಮುಳುಗಿಸಿದೆ. ಇದೀಗ ಮತ್ತೊಂದು ಇರಾನ್ ನೌಕೆ ಅಪಾಯದಲ್ಲಿದೆ. ಶ್ರೀಲಂಕಾ ಸಮೀಪದ ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿರುವ ಈ ನೌಕೆ, ಅಮೆರಿಕ ದಾಳಿಯ ಭೀತಿಯಲ್ಲಿ ನೆರವಿಗಾಗಿ ಮೊರೆ ಇಟ್ಟಿದೆ. ಭಾರತದ ಐಎನ್‌ಎಸ್ ತರಂಗಿಣಿ ನೌಕೆ ಸಿಬ್ಬಂದಿ ರಕ್ಷಣೆಗೆ ನಿಯೋಜನೆಗೊಂಡಿದೆ.

serious sea threat damage to iranian vessels from us strikes

ಅಮೆರಿಕ ಜಲಾಂತರ್ಗಾಮಿ ಶ್ರೀಲಂಕಾ ಸಮೀಪದ ಕರಾವಳಿ ತೀರದಲ್ಲಿಇರಾನ್ ‘ಐರಿಸ್ ದೇನಾ’ ನೌಕೆಯನ್ನು ಹೊಡೆದುರುಳಿಸಿದ ಬೆನ್ನಿಗೆ ಮತ್ತೊಂದು ಇರಾನ್ ಯುದ್ಧ ನೌಕೆ ಅಪಾಯಕ್ಕೆ ಸಿಲುಕಿದೆ ಎಂದು ವರದಿಯಾಗಿದೆ. ಲಂಕಾ ಸಮೀಪದ ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿಇರಾನ್ ನ ಮತ್ತೊಂದು ನೌಕೆ ಉಳಿದಿದೆ. ಅಮೆರಿಕ ದಾಳಿ ಭೀತಿಯಲ್ಲಿನೆರವಿಗೆ ಮೊರೆ ಇಟ್ಟಿದೆ ಎಂದು ಶ್ರೀಲಂಕಾ ಆಡಳಿತ ಮಾಹಿತಿ ನೀಡಿದೆ. ‘‘ಹಡಗಿನಲ್ಲಿನೂರಾರು ಸಿಬ್ಬಂದಿಗಳಿದ್ದಾರೆ. ಅಮೆರಿಕ ಜಲಂತರ್ಗಾಮಿ ಭೀತಿಯಲ್ಲಿನೆರವು ಕೋರಿದ್ದಾರೆ. ಜೀವ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ,’’ ಎಂದು ಲಂಕಾ ಸಚಿವ ನಳಿಂದ ಜಯತಿಸ್ಸ ತಿಳಿಸಿದ್ದಾರೆ. ನೆರವಿಗೆ ಧಾವಿಸಿದ್ದ ಭಾರತ: ಅಮೆರಿಕ ದಾಳಿಯಲ್ಲಿಬುಧವಾರ ಮುಳುಗಿದ ಇರಾನ್ ಐರಿಸ್ ದೇನಾ ನೌಕೆಯಲ್ಲಿದ್ದ ಸಿಬ್ಬಂದಿ ರಕ್ಷಣೆಗೆ ಐಎನ್ ಎಸ್ ತರಂಗಿಣಿ ನೌಕೆ ನಿಯೋಜನೆ ಮಾಡಲಾಗಿತ್ತು ಎಂದು ಕೇಂದ್ರ ಸರಕಾರ ತಿಳಿಸಿದೆ.