ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಿ
ಗ್ರಾಪಂ ಆಡಳಿತಾಧಿಕಾರಿ ಎಸ್ .ಎಚ್ .ಗೋವಿಂದ ಗೌಡ ಸೂಚನೆ
ವಿಕ ಸುದ್ದಿಲೋಕ ಲಕ್ಕೂರು
ಚಿಕ್ಕತಿರುಪತಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಪ್ರತಿಯೊಂದು ಹಳ್ಳಿಗಳಲ್ಲಿಬೇಸಿಗೆಯ ಸಮಯದಲ್ಲಿಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಮೂಲಸೌಕರ ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಗ್ರಾಪಂ ಆಡಳಿತಾಧಿಕಾರಿ ಎಸ್ .ಎಚ್ .ಗೋವಿಂದ ಗೌಡ ಸೂಚಿಸಿದರು.
ಚಿಕ್ಕತಿರುಪತಿ ಗ್ರಾಮ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿಗ್ರಾಪಂನ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಜಲಗಾರರೊಂದಿಗೆ ಹಮ್ಮಿಕೊಂಡಿದ್ದ ಮೊದಲನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇಸಿಗೆ ಆರಂಭವಾಗಿದ್ದು, ಗ್ರಾಪಂ ವ್ಯಾಪ್ತಿಗೆ 13 ಹಳ್ಳಿಗಳು ಒಳಪಡಲಿದ್ದು, ಪ್ರಸ್ತುತ ಯಾವುದೇ ಗ್ರಾಮದಲ್ಲಿಕುಡಿಯುವ ನೀರಿನ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿಯಾವುದೇ ಒಂದು ಗ್ರಾಮದಲ್ಲಿಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ಕೂಡಲೇ ತಮ್ಮ ಗಮನಕ್ಕೆ ತರಬೇಕು. ಅಲ್ಲದೆ, ಸಮಸ್ಯೆ ನಿವಾರಣೆಯಾಗುವವರೆಗೂ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಗ್ರಾಮದಲ್ಲಿತ್ಯಾಜ್ಯ ಸಂಗ್ರಹಿಸಲು ಸ್ವಚ್ಛವಾಹಿನಿ ವಾಹನಗಳು ಸಂಚರಿಸಬೇಕು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಸೇರಿದಂತೆ ಅಂಗನವಾಡಿ ಕೇಂದ್ರಗಳಲ್ಲೂತ್ಯಾಜ್ಯವನ್ನು ಸಂಗ್ರಹಿಸಿ ಸೂಕ್ತ ರೀತಿಯಲ್ಲಿವಿಲೇವಾರಿ ಮಾಡಬೇಕು ಎಂದು ಪೌರ ಕಾರ್ಮಿಕರಿಗೆ ಸೂಚಿಸಿದರು. ಗ್ರಾಮಗಳ ರಸ್ತೆ ಬದಿಗಳಲ್ಲಿಇಳಿರುವಂತಹ ಕಸದ ರಾಶಿಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದರ ಜತೆಗೆ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಮನೆಗಳಲ್ಲಿಸಂಗ್ರಹವಾಗುವ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿಎಸೆಯದೆ ನೇರವಾಗಿ ಸ್ವಚ್ಛ ವಾಹಿನಿ ವಾಹನದಲ್ಲಿಹಾಕುವಂತೆ ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿಸಹಕಾರ ನೀಡಬೇಕು. ವಿದ್ಯುತ್ ದೀಪಗಳನ್ನು ಪ್ರತಿನಿತ್ಯ ನಿರ್ವಹಣೆ ಮಾಡುವ ರೀತಿಯಲ್ಲಿಯೇ ಚರಂಡಿಗಳ ಸ್ವಚ್ಛತೆಯನ್ನು ಕಾಲಕಾಲಕ್ಕೆ ಮಾಡಲು ಆದ್ಯತೆ ನೀಡಬೇಕು. ಕಾರಣಾಂತರಗಳಿಂದ ತಡೆಯಾಗಿರುವ ಸೇವೆಗಳನ್ನು ಹೊರತುಪಡಿಸಿ ಸಾರ್ವಜನಿಕರಿಗೆ, ಬಾಪೂಜಿ ಸೇವಾ ಕೇಂದ್ರದಲ್ಲಿಲಭ್ಯವಿರುವ ಆನ್ ಲೈನ್ ಸೇವೆಗಳನ್ನು ಒದಗಿಸಲು ಡೇಟಾ ಎಂಟ್ರಿ ಆಪರೇಟರಿಗೆ ಸೂಚಿಸಿದರು. ಗ್ರಾಮ ಪಂಚಾಯಿತಿಯ ಸಾರ್ವಜನಿಕರ ಗ್ರಂಥಾಲಯಕ್ಕೆ ಬರುವ ಓದುವರಿಗೆ ಹೊಸ ಹೊಸ ಪುಸ್ತಕಗಳನ್ನು ಹಾಗೇ ದಿನನಿತ್ಯದ ಸುದ್ದಿ ಪತ್ರಿಕೆಗಳನ್ನು ಒದಗಿಸಬೇಕು ಎಂದು ಗ್ರಂಥ ಪಾಲಕರಿಗೆ ಸೂಚಿಸಿದರು.
ಅಲ್ಲದೆ, ಗ್ರಾಮಗಳಲ್ಲಿನ ಮೂಲಭೂತ ಸಮಸ್ಯೆಗಳ ಬಗ್ಗೆ ಗ್ರಾಪಂಗೆ ಬರುವಂತಹ ದೂರುಗಳಿಗೆ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ವರ್ಗದವರು ಸೂಕ್ತವಾಗಿ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಬೇಕು. ಗ್ರಾಪಂಗೆ ಬರುವಂತಹ ಸಾರ್ವಜನಿಕರ ಕುಂದು ಕೊರತೆಗಳಿಗೆ ಅಧಿಕಾರಿಗಳು ಸೂಕ್ತವಾಗಿ ಸ್ಫಂದಿಸಿ ಸಮಸ್ಯೆ ನಿವಾರಣೆಯಲು ಕ್ರಮಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿಗ್ರಾಪಂ ಪಿಡಿಒ ವಿ.ಹರೀಂದ್ರ ಗೋಪಾಲ್ , ಎಸ್ ಡಿಎ ಎಸ್ .ನಾಗರಾಜಪ್ಪ, ಸಿಬ್ಬಂದಿ ವರ್ಗದವರು, ಜಲಗಾರರು ಹಾಜರಿದ್ದರು.
5 ಲಕ್ಕೂರು ಪೋಟೊ 4. ಮಾಲೂರು ತಾಲೂಕಿನ ಚಿಕ್ಕತಿರುಪತಿ ಗ್ರಾಮ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿಗ್ರಾಪಂ ಆಡಳಿತಾಧಿಕಾರಿ ಎಸ್ .ಎಚ್ .ಗೋವಿಂದ ಗೌಡ ಅಧ್ಯಕ್ಷತೆಯಲ್ಲಿಗ್ರಾಪಂನ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಜಲಗಾರರ ಸಭೆ ನಡೆಯಿತು.

