ಕುತ್ತಿಗೆ ನೋವಿನ ಕಾರಣ
ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ ಅಂದರೆ ಅದು ಕುತ್ತಿಗೆ ನೋವು . ಚಿಕ್ಕ ವಯಸ್ಸಿನಲ್ಲೇ ಬಹಳಷ್ಟು ವ್ಯಕ್ತಿಗಳನ್ನು ಇದು ಕಾಡುತ್ತಿದೆ. ಕತ್ತಿನಲ್ಲಿವಿಪರೀತ ನೋವು, ಭುಜ ಹಾಗೂ ಕೈಗಳಲ್ಲಿಜೋಮು ಮತ್ತು ಸೆಳೆತ ಮುಂತಾದ ಲಕ್ಷಣಗಳು ದೀರ್ಘ ಅವಧಿಯವರೆಗೆ ಕಂಡು ಬಂದಾಗ ಕುತ್ತಿಗೆ ನೋವಿನ ಸಮಸ್ಯೆ ಎಂದು ಪರಿಗಣಿಸಿ ಚಿಕಿತ್ಸೆ ನೀಡುವುದು ಅಗತ್ಯ. ಕತ್ತು ನೋವು ಮಧ್ಯಮ ವಯಸ್ಕರಲ್ಲಿಅಂದರೆ ಸುಮಾರು 30 ರಿಂದ 40 ರ ವಯೋಮಾನದಲ್ಲಿಹೆಚ್ಚಾಗಿ ಕಂಡು ಬರುತ್ತದೆ. ಕೆಲವೊಮ್ಮೆ ಕತ್ತು ನೋವಿನ ಜೊತೆಗೆ ಬೆನ್ನು ನೋವು ಸಹ ಕಾಣಿಸುತ್ತದೆ. ಈ ಸಮಸ್ಯೆಯು ಪುರುಷ ಮತ್ತು ಸ್ತ್ರೀ ಇಬ್ಬರಲ್ಲೂಸಮಾನವಾಗಿ ಕಂಡು ಬರುತ್ತದೆ.
ಕಾರಣ
ಸರ್ವೈಕಲ್ ಸ್ಪಾಂಡಿಲೋಸಿಸ್ ಹೆಚ್ಚು ಜನರಲ್ಲಿಕತ್ತು ನೋವಿಗೆ ಪ್ರಮುಖ ಕಾರಣ. ಕತ್ತಿನ ಮೂಳೆಗಳ ಮಧ್ಯೆ ಇರುವ ಸರ್ವೈಕಲ್ ಡಿÓ್ಕ… ವಯಸ್ಸಾದ ನಂತರ ಮೂಳೆ ಮತ್ತು ಡಿÓ್ಕ… ಸವೆತದಿಂದ ಕ್ರಮೇಣವಾಗಿ ಕತ್ತು ನೋವು ಕಾಣಿಸುತ್ತದೆ. ಈ ಡಿಸ್ಕಿನಲ್ಲಿರುವ ನೀರಿನಾಂಶ ಕಡಿಮೆಯಾಗಿ ಕೊನೆಗೆ ತೀವ್ರ ಸವೆಯುವುದು ಸಾಕಷ್ಟು ಜನರಲ್ಲಿಡಿÓ್ಕ… ಸವೆತಕ್ಕೆ ಮುಖ್ಯ ಕಾರಣ. ಡಿÓ್ಕ… ಸರಿಯುವುದು ಅಂದರೆ ಕತ್ತಿನ ಭಾಗದಲ್ಲಿಸುಮಾರು ಏಳು ಸರ್ವೈಕಲ್ ವರ್ಟಿಬ್ರಾ ಕಾಣಬಹುದು. ಅದರಲ್ಲಿಮುಖ್ಯವಾದ ಭಾಗದಲ್ಲಿಇರುವ ಸಿ4,ಸಿ3,ಸಿ5 ಮತ್ತು ಸಿ6- ಸಿ7 ಮಧ್ಯದಲ್ಲಿಕಾಣುವ ಡಿÓ್ಕ… ಸರಿಯುವುದರಿಂದ ನರಗಳಿಗೆ ಒತ್ತಡ ಉಂಟಾಗಿ ಕತ್ತು ನೋವು ಬರುತ್ತದೆ ಮತ್ತು ನೋವಿನ ತೀವ್ರತೆ ಕ್ರಮೇಣವಾಗಿ ಹೆಚ್ಚಾಗುತ್ತಾ ಹೋಗಿ ಕೈಗಳಿಗೆ ಜೋಮು ಮತ್ತು ಸೆಳೆತ ಉಂಟಾಗುತ್ತದೆ. ಕೆಲವೊಮ್ಮೆ ಬೆರಳುಗಳಿಗೆ ಯಾವುದೋ ವಸ್ತು ಚುಚ್ಚಿದ ರೀತಿಯಲ್ಲಿನೋವು ಕಾಣುತ್ತದೆ. ಕತ್ತನ್ನು ಒಂದೇ ಕಡೆ ಭಾಗಿಸುವುದು ಮತ್ತು ಸರಿಯಾದ ಭಂಗಿಯಲ್ಲಿಕುಳಿತುಕೊಳ್ಳದಿರುವುದು ಕತ್ತು ನೋವಿಗೆ ಪ್ರಮುಖ ಕಾರಣಗಳು ಎನ್ನುತ್ತಾರೆ ಹೋಮಿಯೋಕೇರ್ ಇಂಟರ್ ನ್ಯಾಷನಲ್ ಸಂಸ್ಥೆಯ ತಜ್ಞರು.
ಲಕ್ಷಣ
ದೀರ್ಘಕಾಲದಿಂದ ಕತ್ತಿನಲ್ಲಿನೋವು ಮತ್ತು ಅಲುಗಾಡಿಸುವುದು ಸಹ ಕಷ್ಟವಾಗುವುದು. ತಲೆ ಹಿಂಭಾಗದಲ್ಲಿನೋವು, ಎರಡು ಭುಜಗಳಲ್ಲಿಮತ್ತು ಕೈಗಳಲ್ಲಿಸೆಳೆತ ಉಂಟಾಗುವುದು. ತಲೆ ತಿರುಗುವುದು, ಭಾರವಾದ ವಸ್ತು ಎತ್ತುವುದಕ್ಕೆ ಕಷ್ಟವಾಗುವುದು, ಕತ್ತಿನ ಭಾಗದ ಮಾಂಸಖಂಡದಲ್ಲಿಅತಿಯಾದ ನೋವು ಕಾಣಿಸುವುದು ಪ್ರಮುಖ ಲಕ್ಷಣಗಳು.
ಹೋಮಿಯೋಪತಿ ಚಿಕಿತ್ಸೆಯ ವೈಶಿಷ್ಟ್ಯಗಳು: ಹೋಮಿಯೋಕೇರ್ ಇಂಟರ್ ನ್ಯಾಷನಲ್ ನಲ್ಲಿಯಾವುದೇ ರೋಗಿ ಕತ್ತು ನೋವಿನ ಸಮಸ್ಯೆ ಎಂದು ಬಂದಾಗ ಆ ರೋಗಿಯ ಸಂಪೂರ್ಣ ರೋಗದ ವಿವರ ಪಡೆದು ನಂತರ ಅವಶ್ಯಕ ದೈಹಿಕ ಪರೀಕ್ಷೆಯ ನಂತರ ಚಿಕಿತ್ಸೆ ಆರಂಭಿಸಿ ಕೊನೆಗೆ ಸಂಪೂರ್ಣವಾಗಿ ಗುಣಪಡಿಸುವವರೆಗೂ ಎಚ್ಚರಿಕೆಯಿಂದ ನಿಗಾವಹಿಸುವುದು ಮತ್ತು ರೋಗಿಗೆ ಬೇಕಾಗುವ ಆಹಾರ ಪದ್ಧತಿ ಮತ್ತು ವ್ಯಾಯಾಮದ ಭಂಗಿಗಳನ್ನೊಳಗೊಂಡ ಚಾರ್ಟ್ ನೀಡುವುದು ಮುಖ್ಯ ಉದ್ದೇಶ. ಪ್ರತಿ ಕಾಯಿಲೆಗೂ ನಿರ್ದಿಷ್ಟವಾದ ಕಾರಣ ಹುಡುಕಿ ಮತ್ತು ರೋಗದ ಸಂಪೂರ್ಣ ಲಕ್ಷಣಗಳನ್ನು ಪಡೆದು ವ್ಯಕ್ತಿಗೆ ಸರಿ ಹೊಂದುವ ಕಾನ್ ಸ್ಟಿಟ್ಯೂಷನಲ್ ಮತ್ತು ಆ್ಯಂಟಿಮಿಯಸ್ಮಾ್ಯಟಿಕ್ ಚಿಕಿತ್ಸೆ ನೀಡುವುದರಿಂದ ರೋಗವು ಸಂಪೂರ್ಣವಾಗಿ ಗುಣ ಹೊಂದಿ ಮತ್ತೆ ಮರುಕಳಿಸುವ ಸಾಧ್ಯತೆ ಕಡಿಮೆ.
ಕತ್ತು ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತ ಹೋದಾಗ ಕ್ರಮೇಣವಾಗಿ ಕಡಿಮೆಯಾಗಿ ಮುಂದೆ ಸಂಪೂರ್ಣವಾಗಿ ರೋಗ ಗುಣಮುಖವಾಗುವುದು ಮತ್ತು ನೋವಿಗೆ ಕಾರಣವಾದ ಡಿಸ್ಕನ್ನು ಬಲಗೊಳಿಸುವುದು ಮತ್ತು ಪದೇಪದೆ ಸಮಸ್ಯೆ ಕಾಣದ ರೀತಿಯಲ್ಲಿಶಾಶ್ವತ ಚಿಕಿತ್ಸೆ ನೀಡುವುದು ನಮ್ಮ ಚಿಕಿತ್ಸಾ ಪದ್ಧತಿ. ನಮ್ಮಲ್ಲಿನುರಿತ ವೈದ್ಯರಿಂದ ರೋಗದ ತಪಾಸಣೆ ನಡೆಸಿ ಅದಕ್ಕೆ ಬೇಕಾಗುವ ಔಷಧ ಮತ್ತು ಕ್ಯಾಲ್ಷಿಯಂ ಸಪ್ಲಿಮೆಂಟ್ ಕೊಡುವುದು ಪ್ರಮುಖ ಉದ್ದೇಶ ಎಂದು ಹೋಮಿಯೋಕೇರ್ ತಜ್ಞರು ಹೇಳುತ್ತಾರೆ. ಅತೀ ಹೆಚ್ಚು ಜನರು ಈಗಾಗಲೇ ಚಿಕಿತ್ಸೆ ಪಡೆದು ಪ್ರಯೋಜನ ಹೊಂದಿದ್ದಾರೆ. ಬಹಳಷ್ಟು ಜನರು ಸಂಪೂರ್ಣ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಹೋಮಿಯೋಕೇರ್ ಇಂಟರ್ ನ್ಯಾಷನಲ್
ಶಾಖೆಗಳು: ಬೆಂಗಳೂರು (ಜಯನಗರ, ಮಲ್ಲೇಶ್ವರಂ, ಇಂದಿರಾನಗರ, ಎಚ್ . ಎಸ್ .ಆರ್ . ಲೇಔಟ್ ), ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ಬಿಜಾಪುರ, ಬೀದರ್ , ಕಲ್ಬುರ್ಗಿ, ಶಿವಮೊಗ್ಗ, ತುಮಕೂರು, ಹಾಸನ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಪುದುಚೇರಿ.
ಉಚಿತ ಸಮಾಲೋಚನೆ: 9550001133.
ಉಚಿತ ಕರೆಗೆ: 1800 108 1212

