ದ.ಕ.ದಲ್ಲಿ 54677 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ

Contributed byvijaya.poojary@timesgroup.com|Vijaya Karnataka

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 54,677 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳ ನಿರ್ದೇಶನದಂತೆ, ಆಗಸ್ಟ್ 14ರಂದು ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆ ಹಾಗೂ ಸುಳ್ಯ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ನಡೆಯಲಿದೆ. ಚೆಕ್‌ಬೌನ್ಸ್‌, ಮೋಟಾರು ವಾಹನ ವಿಮಾ ಹಕ್ಕು ಪ್ರಕರಣಗಳು ಸೇರಿದಂತೆ ಹಲವು ಪ್ರಕರಣಗಳನ್ನು ಇಲ್ಲಿ ಇತ್ಯರ್ಥಪಡಿಸಲಾಗುವುದು.

54677 pending cases in dakshina kannada information on lok adalat

ವಿಕ ಸುದ್ದಿಲೋಕ ಮಂಗಳೂರು

ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ತ್ವರಿತ ನ್ಯಾಯಕ್ಕಾಗಿ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆ ಹಾಗೂ ಸುಳ್ಯ ನ್ಯಾಯಾಲಯಗಳ ಆವರಣದಲ್ಲಿಆ. 14ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಜಿಲ್ಲಾಪ್ರಧಾನ ನ್ಯಾಯಾಧೀಶ ಬಸವರಾಜು ಹೇಳಿದರು.

ನಗರದ ನ್ಯಾಯಾಲಯದಲ್ಲಿಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿಅವರು ಮಾತನಾಡಿ, ದ.ಕ. ಜಿಲ್ಲೆಯಲ್ಲಿಒಟ್ಟು 54,677 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಲೋಕ ಅದಾಲತ್ ಗಾಗಿ 3000 ರಾಜಿ ಮಾಡಬಹುದಾದ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ. ಇವುಗಳಲ್ಲಿ220 ಪ್ರಕರಣಗಳನ್ನು ಈಗಾಗಲೇ ಇತ್ಯರ್ಥಗೊಳಿಸಲಾಗಿದೆ. ಜನವರಿಯಿಂದ ಮಧ್ಯಸ್ಥಿಕೆ ಅಭಿಯಾನದ ಮೂಲಕ ಇತ್ಯರ್ಥಗೊಳಿಸಲು ಉಲ್ಲೇಖಿಸಲಾಗಿರುವ 931 ಪ್ರಕರಣಗಳಲ್ಲಿ126 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಒಟ್ಟು 29 ಮಧ್ಯಸ್ಥಿಕೆಗಾರರನ್ನು ನೇಮಕ ಮಾಡಲಾಗಿದೆ ಎಂದರು.

2025ರ ಡಿಸೆಂಬರ್ 13ರವರೆಗೆ ಲೋಕ ಅದಾಲತ್ ನಲ್ಲಿಬಾಕಿ ಇದ್ದ ಹಳೆ ಪ್ರಕರಣಗಳಲ್ಲಿ3499 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಈ ಪ್ರಕರಣಗಳ ಒಟ್ಟು ಇತ್ಯರ್ಥ ಮೊತ್ತ 32.54 ಕೋಟಿ ರೂ.ಗಳು. ಪೂರ್ವ ವ್ಯಾಜ್ಯ ಪ್ರಕರಣಗಳಿಗೆ ಸಂಬಂಧಿಸಿ 294167 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಇದರ ಮೊತ್ತ 102.94 ಕೋಟಿ ರೂ. ಗಳಾಗಿವೆ. ಲೋಕ ಅದಾಲತ್ ನಲ್ಲಿಮುಖ್ಯವಾಗಿ ಚೆಕ್ ಬೌನ್ಸ್ , ಮೋಟಾರು ವಾಹನ ವಿಮಾ ಹಕ್ಕು ಪ್ರಕರಣಗಳಿಗೆ ಸಂಬಂಧಿಸಿದ ರಾಜಿ ಮಾಡಬಹುದಾದ ಪ್ರಕರಣಗಳು ಹೆಚ್ಚಿರುತ್ತವೆ. ಕಾನೂನಾತ್ಮಕವಾಗಿ ರಾಜಿಯಾಗುವ ಎಲ್ಲರೀತಿಯ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಲೋಕ ಅದಾಲತ್ ನಲ್ಲಿಕೈಗೆತ್ತಿಕೊಳ್ಳಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿಹಿರಿಯ ಜಿಲ್ಲಾನಾಯಾಧೀಶರು ಮತ್ತು ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ಉಪಸ್ಥಿತರಿದ್ದರು.