ಬೀಳ್ಕೊಡುಗೆ, ತಾಯಂದಿರ ಪಾದಪೂಜೆ ಕಾರ್ಯಕ್ರಮ
ಮಕ್ಕಳಲ್ಲಿಸಂಸ್ಕಾರ ಬೆಳೆಸಿ: ಕುನ್ನೂರ
ವಿಕ ಸುದ್ದಿಲೋಕ ಶಿಗ್ಗಾವಿ
ಶಿಕ್ಷಣವೆಂದರೆ ಕೇವಲ ಪುಸ್ತಕ ಜ್ಞಾನವಲ್ಲ, ಅದು ವ್ಯಕ್ತಿತ್ವ ರೂಪಿಸುವ ಮಹತ್ವದ ಪ್ರಕ್ರಿಯೆ. ಮಕ್ಕಳ ಜೀವನದಲ್ಲಿತಾಯಿಯ ತ್ಯಾಗ, ಪ್ರೀತಿ ಮತ್ತು ಮಾರ್ಗದರ್ಶನವು ಅತ್ಯಂತ ಮಹತ್ವದ್ದಾಗಿದೆ ಎಂದು ಶ್ರೀ ಚನ್ನಬಸವೇಶ್ವರ ಗ್ರಾಮೀಣ ವಿದ್ಯಾ ಸಂಸ್ಥೆ ಕಾರ್ಯದರ್ಶಿ ರಾಜು ಕುನ್ನೂರ ಹೇಳಿದರು.
ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಅಂಗವಾಗಿ ಮಹಾ ಸರಸ್ವತಿ ಪೂಜೆ, ವಿದ್ಯಾರ್ಥಿಗಳ ತಾಯಂದಿರ ಪಾದಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಯಂದಿರಿಗೆ ಕೃತಜ್ಞತೆ ಸಲ್ಲಿಸುವ ಈ ರೀತಿಯ ಕಾರ್ಯಕ್ರಮಗಳು ಮಕ್ಕಳಲ್ಲಿಸಂಸ್ಕಾರ ಬೆಳೆಸುವಲ್ಲಿಪ್ರಮುಖ ಪಾತ್ರವಹಿಸುತ್ತವೆ ಎಂದರು.
ಬಿಇಒ ಎಂ.ಬಿ.ಅಂಬಿಗೇರ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ತಾಯಂದಿರ ಆಶೀರ್ವಾದವೇ ಮಕ್ಕಳ ಯಶಸ್ಸಿನ ಆಧಾರವಾಗಿದೆ ಎಂದರು.
ಪ್ರಾಚಾರ್ಯ ಡಾ.ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ತಾಯಿಯ ಪ್ರೀತಿ, ಮಮತೆ ಮತ್ತು ಮಾರ್ಗದರ್ಶನವು ಮಗುವಿನ ಮೊದಲ ಪಾಠ ಶಾಲೆಯಾಗಿದೆ. ಮಹನೀಯರ ಜೀವನ ಚರಿತ್ರೆಗಳಲ್ಲಿತಾಯಿಯ ಪ್ರೇರಣೆಯ ಮಹತ್ವವನ್ನು ಕಾಣಬಹುದು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿತಾಯಿಯ ಸ್ಥಾನವನ್ನು ಗೌರವಿಸಿ, ಅವರ ಆಶೀರ್ವಾದದೊಂದಿಗೆ ಉತ್ತಮ ಗುರಿಗಳನ್ನು ಸಾಧಿಸಬೇಕು ಎಂದು ಸಲಹೆ ನೀಡಿದರು.
ಉಳವಯ್ಯನವರು ಬಮ್ಮಿಗಟ್ಟಿಮಠ ನೇತೃತ್ವದಲ್ಲಿವಿದ್ಯಾರ್ಥಿಗಳು ತಮ್ಮ ತಾಯಂದಿರ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು. ಮುಖ್ಯ ಗುರು ಎಂ.ಎ.ಗಾಣಿಗೇರ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಮಂಜುನಾಥ ಬ್ಯಾಳಿ, ಜಿ.ಎಂ.ಅರಗೋಳ, ಎಂ.ಬಿ.ನೀರಲಗಿ, ಡಿ.ಎ.ವಡ್ಡರ, ಜೆ.ಎಂ.ದೇವರಮನಿ, ಈಶ್ವರ ತಾಡಪತ್ರಿಮಠ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಇದ್ದರು.
ಫೋಟೊ: 6ಎಸ್ .ಜಿ.ಎನ್ .6
ಶಿಗ್ಗಾವಿ ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಅಂಗವಾಗಿ ಮಹಾ ಸರಸ್ವತಿ ಪೂಜೆ, ವಿದ್ಯಾರ್ಥಿಗಳ ತಾಯಂದಿರ ಪಾದಪೂಜೆ ಕಾರ್ಯಕ್ರಮವನ್ನು ಸಂಸ್ಥೆ ಕಾರ್ಯದರ್ಶಿ ರಾಜು ಕುನ್ನೂರ ಉದ್ಘಾಟಿಸಿದರು.

