8 ಮಂಜು 4
ಹಾವೇರಿ ಜಿಲ್ಲಾಮಟ್ಟದ ಯೋಜನಾ ಸಭೆ
ಸಿದ್ಧಾಂತದಲ್ಲಿರಾಜಿ ಆಗಬಾರದು: ಬೊಮ್ಮಾಯಿ
ವಿಕ ಸುದ್ದಿಲೋಕ ಹಾವೇರಿ
ಸಿದ್ಧಾಂತದಲ್ಲಿರಾಜಿ ಆಗಬಾರದು, ಸಿದ್ಧಾಂತ ಶಾಶ್ವತವಾಗಿರುತ್ತದೆ. ದೀನ ದಯಾಳ ಉಪಾಧ್ಯಾಯ ಮತ್ತು ಶಾಮ್ ಪ್ರಸಾದ ಮುಖರ್ಜಿ ಅವರ ಸಿದ್ಧಾಂತಗಳು ಈಗಲೂ ಪ್ರಸ್ತುತ. ಆ ಸಿದ್ಧಾಂತಗಳನ್ನು ಯಾರು ಅರ್ಥ ಮಾಡಿಕೊಂಡು ಮುಂದುವರೆಯುತ್ತಾರೆ ಅವರು ಯಶಸ್ವಿಯಾಗುತ್ತಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ನಗರದ ಬಿಜೆಪಿ ಜಿಲ್ಲಾಕಚೇರಿಯಲ್ಲಿಪಂಡಿತ ದಿನ್ ದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-2026 ಹಾವೇರಿ ಜಿಲ್ಲಾಮಟ್ಟದ ಯೋಜನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಾವೇರಿ ಜಿಲ್ಲೆಯಲ್ಲಿಪಕ್ಷವನ್ನು ತಳಮಟ್ಟದಿಂದ ಶಿಸ್ತಿನಿಂದ ಸಿದ್ಧಾಂತದ ಅಡಿಯಲ್ಲಿಕಟ್ಟಬೇಕೆಂಬ ಕಾರಣದಿಂದ ಪ್ರಶಿಕ್ಷಣ ವರ್ಗ ಇಟ್ಟುಕೊಳ್ಳಲಾಗಿದೆ. ಬಿಜೆಪಿ ದೂರ ದೃಷ್ಟಿ ಇರುವ, ದೇಶವನ್ನು ಸಮಗ್ರ, ಸುರಕ್ಷಿತ, ಸಾಮಾಜಿಕವಾಗಿ ಕಟ್ಟುವ ನೈತಿಕ ಜವಾಬ್ದಾರಿ ತೆಗೆದುಕೊಂಡಿದೆ. ನಮ್ಮ ಕಾರ್ಯ ಪದ್ಧತಿ, ನಮ್ಮ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸುವುದು ಇದರ ಉದ್ದೇಶ ಎಂದು ಹೇಳಿದರು.
ತಳಹಂತದಿಂದ ಹೊಸ ನಾಯಕತ್ವ ಬರಬೇಕು. ನೈತಿಕ ಬಲ ಬಂದರೆ ಯಶಸ್ಸು ಅಪ ಯಶಸ್ಸು, ಸೋಲು ಗೆಲುವು, ಸನ್ಮಾನ, ಅಪಮಾನ ಎಲ್ಲವನ್ನು ಸಮ ಚಿತ್ರದಿಂದ ತೆಗೆದುಕೊಳ್ಳುವ ಮನಸ್ಥಿತಿ ಬರುತ್ತದೆ. ಎಲ್ಲಯುವಕರು ಗಂಭೀರವಾಗಿ ಪರಿಗಣಿಸಿ ತರಬೇತಿ ತೆಗೆದುಕೊಳ್ಳಬೇಕು ಎಂದರು.
ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಶಿವಯೋಗಿ ಸ್ವಾಮಿ, ಭರತ ಬೊಮ್ಮಾಯಿ, ಲಿಂಗರಾಜ ಪಾಟೀಲ್ , ಭೋಜರಾಜ ಕರೂದಿ, ಗವಿಸಿದ್ದಪ್ಪ ದ್ಯಾಮಣ್ಣವರ, ಡಾ.ಬಸವರಾಜ ಕೆಲಗಾರ, ಶ್ರೀಪತಿ ಉಡುಪಿ, ಕಲ್ಯಾಣಕುಮಾರ ಶೆಟ್ಟರ, ನಂಜುಂಡೇಶ ಕಳ್ಳೇರ, ಭಾರತಿ ಅಳವಂಡಿ, ಡಾ.ಶೋಭಾ ನಿಸ್ಸಿಮಗೌಡ್ರ, ಹಲವಾರು ಪ್ರಮುಖರು ಇದ್ದರು.
ಪೋಟೋ 8 ಮಂಜು 4
ಹಾವೇರಿಯ ಬಿಜೆಪಿ ಜಿಲ್ಲಾಕಚೇರಿಯಲ್ಲಿಪಂಡಿತ ದಿನ್ ದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ಜಿಲ್ಲಾಮಟ್ಟದ ಯೋಜನಾ ಸಭೆಯಲ್ಲಿಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು.

