ಮಹಿಳಾ ದಿನಾಚರಣೆ: ಮಹಿಳಾ ಪೊಲೀಸರಿಗೆ ಸನ್ಮಾನ

Contributed byvkkarkala@gmail.com|Vijaya Karnataka

ಕಾರ್ಕಳದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸರನ್ನು ಸನ್ಮಾನಿಸಲಾಯಿತು. ಜೇಸಿಐ ಕಾರ್ಕಳ ರೂರಲ್‌ನ ಲೇಡಿ ಜೇಸಿ ವಿಭಾಗವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಿಳಾ ಪೊಲೀಸರ ಸೇவையை ಶ್ಲಾಘಿಸಿದರು.

international womens day special felicitation for women police

ವಿಕ ಸುದ್ದಿಲೋಕ ಕಾರ್ಕಳ

ಜೇಸಿಐ ಕಾರ್ಕಳ ರೂರಲ್ ನ ಲೇಡಿ ಜೇಸಿ ವಿಭಾಗದ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಕಾರ್ಕಳ ಪೊಲೀಸ್ ಠಾಣೆಯಲ್ಲಿಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸರನ್ನು ಸನ್ಮಾನಿಸಲಾಯಿತು.

ಸಂಪಾ ಶೆಟ್ಟಿ, ಶೋಭಾ, ಸುಜಯಾ, ಶಶಿಕಲಾ, ಗೀತಾ, ಸುಮಿತ್ರಾ, ಅರ್ಚನಾ, ಲಕ್ಷಿತ್ರ್ಮೕ ಮತ್ತು ಸಂಧ್ಯಾ ಅವರನ್ನು ಸನ್ಮಾನಿಸಲಾಯಿತು.

ನಗರ ಠಾಣೆ ಪಿಎಸ್ ಐ ಮುರಳೀಧರ ನಾಯ್ ್ಕ, ಜೇಸಿಐ ರೂರಲ್ ಅಧ್ಯಕ್ಷ ಸೃಜನ್ ಪೂಜಾರಿ, ಜೇಸಿಐ ವಲಯ ಉಪಾಧ್ಯಕ್ಷ ಅರುಣ್ ಪೂಜಾರಿ ಮಾಂಜ, ಸಂಸ್ಥಾಪಕ ಸತೀಶ್ ಪೂಜಾರಿ, ಪೂರ್ವಾಧ್ಯಕ್ಷರಾದ ಶೋಭಾ ಭಾಸ್ಕರ್ , ವೀಣಾ ರಾಜೇಶ್ , ಸಂತೋಷ್ ಪೂಜಾರಿ, ಶ್ವೇತಾ ಅರುಣ್ , ವಿಜಯ ಸತೀಶ್ , ಹರಿಣಿ ಬಂಗೇರ, ಸುಧೀರ್ ಪೂಜಾರಿ, ಸಾಹಿತ್ಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಮಮತಾ ಸಂತೋಷ್ ಸ್ವಾಗತಿಸಿದರು. ಮೋಹನ್ ನಕ್ರೆ ವಂದಿಸಿದರು.

ಫೊಟೋಕ್ಯಾಪ್ಶನ್ -ಮಹಿಳಾ ದಿನಾಚರಣೆ ಪ್ರಯುಕ್ತ ಕಾರ್ಕಳ ಪೊಲೀಸ್ ಠಾಣೆಯ ಮಹಿಳಾ ಪೊಲೀಸರನ್ನು ಸನ್ಮಾನಿಸಲಾಯಿತು.

(ಫೊಟೋ:9ಕೆವಿ-ಎಂಎಚ್ ಎಲ್ )