ಅಂಕೋಲಾ ನಾರಾಯಣ ಗುರು

Contributed bynmanjaguni@gmail.com|Vijaya Karnataka

ಅಂಕೋಲಾದಲ್ಲಿ ಶ್ರೀ ನಾರಾಯಣಗುರುಗಳ ಚಿಂತನೆಗಳ ಕುರಿತು ನಡೆದ ಕಾರ್ಯಕ್ರಮದಲ್ಲಿ ಮೂವರು ಸಾಧಕರನ್ನು ಗುರುತಿಸಿ ಬ್ರಹ್ಮಶ್ರೀ ನಾರಾಯಣಗುರು ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಾಗರಾಜ ನಾಯ್ಕ ಅವರ 'ಶ್ರೀ ನಾರಾಯಣಗುರು ಅಸ್ಪೃಶ್ಯತೆ ಮತ್ತು ನಾಮಧಾರಿಗಳು' ಕೃತಿ ಲೋಕಾರ್ಪಣೆಗೊಂಡಿತು. ಈ ಸಂದರ್ಭದಲ್ಲಿ ನಾರಾಯಣಗುರುಗಳ ಆದರ್ಶಗಳನ್ನು ಸ್ಮರಿಸಲಾಯಿತು. ಪ್ರಶಸ್ತಿ ಪುರಸ್ಕೃತರಾದ ಉದಯ ನಾಯಕ, ದಾಮೋದರ ನಾಯ್ಕ, ವೆಂಕಪ್ಪ ಟಿ. ನಾಯ್ಕ ಅವರಿಗೆ ಸನ್ಮಾನಿಸಲಾಯಿತು.

ankola narayana guru award honoring achievers

ಮೂವರು ಸಾಧಕರಿಗೆ ಬ್ರಹ್ಮಶ್ರೀ ನಾರಾಯಣಗುರು ಪ್ರಶಸ್ತಿ ಪ್ರದಾನ

ನಾರಾಯಣ ಗುರುಗಳ ಚಿಂತನೆ ಸಾರ್ವಕಾಲಿಕ

ವಿಕ ಸುದ್ದಿಲೋಕ ಅಂಕೋಲಾ

ಶ್ರೀ ನಾರಾಯಣ ಗುರುಗಳ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿದೆ. ಅವರು ಸಮಾನತೆಗಾಗಿ ನಿರಂತರ ಹೋರಾಡಿದ್ದಾರೆ. ಇಂತಹ ಆದರ್ಶ ವ್ಯಕ್ತಿಯನ್ನು ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಅಂಥವರು ಭೇಟಿ ಮಾಡಿ ಶ್ಲಾಘಿಘಿಸಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ನಾಗೇಶ ನಾಯ್ಕ ಕಾಗಾಲ ಹೇಳಿದರು.

ಪಟ್ಟಣದಲ್ಲಿಮಂಜಗುಣಿಯ ಕಡಲು ಪ್ರಕಾಶನ ಹಮ್ಮಿಕೊಂಡಿದ್ದ ನಾಗರಾಜ ನಾಯ್ಕ ಅವರ ‘ ಶ್ರೀ ನಾರಾಯಣಗುರು ಅಸ್ಪೃಶ್ಯತೆ ಮತ್ತು ನಾಮಧಾರಿಗಳು’ ಕೃತಿ ಲೋಕರ್ಪಾಣೆಗೊಳಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ವಲಯ ಅರಣ್ಯಾಧಿಕಾರಿ ಸುರೇಶ ನಾಯ್ಕ ಮಾತನಾಡಿ, ‘‘ನಾರಾಯಣ ಗುರುಗಳ ಬಗ್ಗೆ ಅತಿಹೆಚ್ಚು ಮಾಹಿತಿಯುಳ್ಳ ಈ ಕೃತಿಯನ್ನು ಪ್ರತಿಯೊಬ್ಬರೂ ಓದಲೇ ಬೇಕು’’ ಎಂದರು.

ನಾಮಧಾರಿ ಸಮಾಜದ ಮುಖಂಡ ವಿಜಯಕುಮಾರ ನಾಯಕ ಮಾತನಾಡಿ, ‘‘ನಾಮಧಾರಿಗಳು ಯಾವತ್ತಿಗೂ ತಮ್ಮ ಸ್ವಂತಿಕೆಯನ್ನು ಬಿಟ್ಟುಕೊಟ್ಟವರಲ್ಲ. ಹಾಗೇ ನಾರಾಯಣಗುರುಗಳ ಕ್ರಾಂತಿಕಾರಿ ವಿಚಾರಗಳು ಉತ್ತರ ಕನ್ನಡದಲ್ಲಿಈಗ ಸದ್ದು ಮಾಡುತ್ತಿವೆ’’ ಎಂದರು.

ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಜೇಂದ್ರ ನಾಯ್ಕ ಮಾತನಾಡಿದರು.

ನಿವೃತ್ತ ಡಿಎಫ್ ಒ ಉದಯ ನಾಯಕ, ಜಿಲ್ಲಾಧಾರ್ಮಿಕ ಪರಿಷತ್ ನ ಜಿಲ್ಲಾಸದಸ್ಯ ದಾಮೋದರ ಜಿ. ನಾಯ್ಕ, ಬೊಬ್ರುವಾಡ ನಾಮಧಾರಿ ಸುಗ್ಗಿ ತಂಡದ ಅಧ್ಯಕ್ಷ ವೆಂಕಪ್ಪ ಟಿ. ನಾಯ್ಕ ಅವರಿಗೆ ಬ್ರಹ್ಮಶ್ರೀ ನಾರಾಯಣಗುರು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪುರಸ್ಕೃತರಾದ ಉದಯ ನಾಯಕ, ದಾಮೋದರ ನಾಯ್ಕ ಮಾತನಾಡಿದರು.

ಉಪನ್ಯಾಸಕಿ ಪುಷ್ಪಾ ನಾಯ್ಕ ಸ್ವಾಗತಿಸಿದರು. ಲೇಖಕ ನಾಗರಾಜ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ವಕೀಲ ಉಮೇಶ ನಾಯ್ಕ ನಿರೂಪಿಸಿದರು. ರಾಜೇಶ ಮಿತ್ರಾ ನಾಯ್ಕ ವಂದಿಸಿದರು. ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಉಪಾಧ್ಯಕ್ಷರಾದ ರಮೇಶ ನಾಯ್ಕ ಬೊಬ್ರುವಾಡ, ರಮೇಶ ನಾಯ್ಕ ತೆಂಕಣಕೇರಿ, ಮಂಜುನಾಥ ಕೆ. ನಾಯ್ಕ, ಏಕನಾಥ ನಾಯ್ಕ ಇದ್ದರು.

9ಅಂಕೋಲಾ1

ಅಂಕೋಲಾದಲ್ಲಿನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿಉದಯ ನಾಯಕ, ದಾಮೋದರ ಜಿ. ನಾಯ್ಕ, ವೆಂಕಪ್ಪ ಟಿ. ನಾಯ್ಕ ಅವರಿಗೆ ಬ್ರಹ್ಮಶ್ರೀ ನಾರಾಯಣಗುರು ಪ್ರಶಸ್ತಿ ನೀಡಿ ಗೌರವಿಸಲಾಯಿತು.