ಮಕ್ಕಳಿಗೆ ತಾಯ್ತಂದೆಯರೇ ಮಾದರಿ

Contributed bymanjunathrd59@gmail.com|Vijaya Karnataka

ಹಾವೇರಿ ತಾಲೂಕಿನ ಅಗಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿ ನಡೆದ ಶೈಕ್ಷಣಿಕ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಸಿ.ಎಸ್‌.ಭಗವಂತಗೌಡ್ರ ಅವರು ಮಕ್ಕಳಿಗೆ ತಾಯ್ತಂದೆಯರೇ ಮಾದರಿಯಾಗಬೇಕು ಎಂದು ಹೇಳಿದರು. ಪೋಷಕರ ಮನಸ್ಥಿತಿ ಬದಲಾಗಬೇಕು. ಮಕ್ಕಳಲ್ಲಿ ಲಿಂಗಬೇಧ ಮಾಡಬಾರದು. ಶಿಕ್ಷಣ ಉದಾಸೀನ ಮಾಡಿದರೆ ರಾಷ್ಟ್ರದ ರಕ್ಷಣೆಯನ್ನೇ ಉದಾಸೀನ ಮಾಡಿದಂತೆ. ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲ ಮಂತ್ರ. ಶಾಲಾ ಆವರಣದಲ್ಲಿ ನಿರ್ಮಾಣಗೊಂಡ ಸಭಾ ಮಂಟಪವನ್ನು ದಾನಿಗಳು ಉದ್ಘಾಟಿಸಿದರು. ದಾನಿಗಳನ್ನು ಸನ್ಮಾನಿಸಲಾಯಿತು.

parents should be role models for children

ಮಕ್ಕಳಿಗೆ ತಾಯ್ತಂದೆಯರೇ ಮಾದರಿ

ವಿಕ ಸುದ್ದಿಲೋಕ ಹಾವೇರಿ

ಮಕ್ಕಳ ಭವಿಷ್ಯ ತಾಯಂದಿರ ಚಿಂತನೆ, ಆಲೋಚನೆಗಳಲ್ಲಿಇದೆ. ಸುಸಂಸ್ಕೃತ, ಸಜ್ಜನ, ಗುಣವಂತರೂ ತಂದೆ ತಾಯಿಗಳಿಗೆ ಸಮಾನರಾದ ದೇವರು ಬೇರಾರಿಲ್ಲ. ತಾಯ್ತಂದೆಯರೇ ಮಕ್ಕಳಿಗೆ ಮಾದರಿಯಾಗಬೇಕು ಎಂದು ಹನುಮಾಪುರ ಸರಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ಎಸ್ .ಭಗವಂತಗೌಡ್ರ ಹೇಳಿದರು.

ತಾಲೂಕಿನ ಅಗಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿಶೈಕ್ಷಣಿಕ ಚಿಂತನ-ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘‘ತಂದೆ-ತಾಯಂದಿರು ಮಕ್ಕಳಿಗೆ ಶಿಕ್ಷಣದ ಬಗ್ಗೆ ವಿವಿಧ ರೀತಿ ಯೋಚನೆ ಮಾಡುತ್ತಾರೆ. ಕೆಲವರು ಬೆದರಿಸಿದರೆ, ಮತ್ತೆ ಕೆಲವರು ಮುದ್ದಿನಿಂದ ಬೆಳೆಸುತ್ತಾರೆ. ಇನ್ನೂ ಕೆಲವರು ನಿರ್ಲಕ್ಷ್ಯ ವಹಿಸುತ್ತಾರೆ. ಪೋಷಕರ ಮನಸ್ಥಿತಿ ಬದಲಾಗಬೇಕು. ಮಕ್ಕಳಲ್ಲಿಲಿಂಗಬೇಧ ಮಾಡಬಾರದು’’ ಎಂದು ತಿಳಿಸಿದರು.

ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ‘‘ಶಿಕ್ಷಣ ಉದಾಸೀನ ಮಾಡಿದರೆ, ರಾಷ್ಟ್ರದ ರಕ್ಷಣೆಯನ್ನೇ ಉದಾಸೀನ ಮಾಡಿದಂತೆ, ಮಕ್ಕಳ ಆಸಕ್ತಿ, ಸಾಮರ್ಥ್ಯಗಳನ್ನು ಗಣನೆಗೆ ತೆಗೆದುಕೊಂಡು ಅದಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆ ಪುನರೂಪಿಸುವಲ್ಲಿಚಿಂತನೆಗಳು ನಡೆಯಬೇಕಿದೆ. ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲ ಮಂತ್ರ. ಶಿಕ್ಷಣ ಎಂದಿಗೂ ಎಡವಲು ಬಿಡುವುದಿಲ್ಲ, ಸಂಸ್ಕಾರ ಕೆಡಲು ಬಿಡುವುದಿಲ್ಲ’’ ಎಂದರು.

ಇದೇ ಸಂದರ್ಭದಲ್ಲಿಶಾಲಾ ಆವರಣದಲ್ಲಿನಿರ್ಮಾಣಗೊಂಡ ಸಭಾ ಮಂಟಪವನ್ನು ದಾನಿಗಳು ಉದ್ಘಾಟಿಸಿದರು. ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಅಧ್ಯಕ್ಷತೆ ವಹಿಸಿದ್ದರು. ಸ್ಮರಣ ಸಂಚಿಕೆ ಪ್ರಾಯೋಜಕರಾದ ಎಂ.ಎ.ಎಣ್ಣಿ, 1986-87ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ರೂ. 15,500 ದೇಣಿಗೆ ಹಾಗೂ 2003-04ನೇ ಸಾಲಿನ ವಿದ್ಯಾರ್ಥಿಗಳು ನೀಡಿದ 4 ಗ್ರೀನ್ ಬೋರ್ಡ್ ಗಳ ದಾನಿಗಳನ್ನು ಫಕೀರಸ್ವಾಮಿ ನಿರ್ವಾಣಮಠ, ಬಸವರಾಜ ಕಡ್ಲಿ, ನೂರಅಹ್ಮದ ಮಿರ್ಜಾನವರ, ಬಿ.ವಿ.ಹಿರೇಮಠ ಅವರನ್ನು ಶಿವಪ್ಪ ಬಳಲಕೊಪ್ಪದ ಗೌರವಿಸಿದರು. ಗುಡ್ಡಪ್ಪ ಚಟ್ರಮ್ಮನವರ ಸ್ವಾಗತಿಸಿದರು. ಶಂಕರ ಚಿಕ್ಕಳ್ಳಿ ನಿರೂಪಿಸಿದರು. ಮಂಜುನಾಥ ಕಮ್ಮಾರ ವಂದಿಸಿದರು.

ಪೋಟೋ 4 ಮಂಜು 9

ಹಾವೇರಿ ತಾಲೂಕು ಅಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿನಡೆದ ಶೈಕ್ಷಣಿಕ ಚಿಂತನ-ಮಂಥನ ಕಾರ್ಯಕ್ರಮದಲ್ಲಿದಾನಿಗಳನ್ನು ಸನ್ಮಾನಿಸಲಾಯಿತು.