ಆಶ್ಲೇಷ ಪೂಜೆ, ಪಂಚಾಮೃತ ಅಭಿಷೇಕ
ವಿಕ ಸುದ್ದಿಲೋಕ ಮೂಲ್ಕಿ
ಕೊಲ್ನಾಡು ಶ್ರೀ ನಾಗದೇವರ ಮತ್ತು ಕೊರಗಜ್ಜ ಪರಿವಾರ ದೈವಗಳ ಜೀರ್ಣೋದ್ಧಾರ ಸಮಿತಿ ಮತ್ತು ಕಾರ್ನಾಡು ಸಣ್ಣ ಕೈಗಾರಿಕೆಗಳ ಸಂಘದ ಆಶ್ರಯದಲ್ಲಿಕಾರ್ನಾಡು ಸಣ್ಣ ಕೈಗಾರಿಕೆಗಳ ವಲಯದಲ್ಲಿಆರಾಧಿಸುತ್ತಿರುವ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವದ ಪೂರ್ವಭಾವಿಯಾಗಿ ಸೋಮವಾರ ಅರ್ಚಕರಾದ ಲಕ್ಷಿತ್ರ್ಮೕಶ ಉಪಾಧ್ಯಾಯ ನೇತೃತ್ವದಲ್ಲಿಶ್ರೀ ನಾಗದೇವರಿಗೆ ನವಕ ಪ್ರಧಾನ ಹೋಮ, ಆಶ್ಲೇಷ ಪೂಜೆ, ಪಂಚಾಮೃತ ಅಭಿಷೇಕ ಮತ್ತು ತಂಬಿಲ ಸೇವೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು.
ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೇಖರ್ ಸಾಲ್ಯಾನ್ , ಸದಸ್ಯರಾದ ಚೇತನ್ ಶೆಟ್ಟಿ, ಪ್ರಶಾಂತ್ ಕಾಂಚನ್ , ಚೇತನ್ ಕೋಟ್ಯಾನ್ ಕಾರ್ಕಳ, ಗುತ್ತಿನಾರ್ ದಿನೇಶ್ ಹೆಗ್ಡೆ ಮಾನಂಪಾಡಿ, ಮೂಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ಶ್ರೀ ಕೊರಗಜ್ಜ ಕ್ಷೇತ್ರದ ಅರ್ಚಕ ಉಮೇಶ್ , ಸಚಿನ್ ಹೆಗ್ಡೆ, ಸಂತೋಷ್ ಕುಮಾರ್ ಶೆಟ್ಟಿ, ಅಜಿತ್ ಕುಮಾರ್ ಶೆಟ್ಟಿ, ನವೀನ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಸಂಜೆ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು.
ಫೋಟೊ:09ಎಮ್ ಎಲ್ ಕೆ1
ಕ್ಯಾ: ಕಾರ್ನಾಡು ಸಣ್ಣ ಕೈಗಾರಿಕೆಗಳ ಸಂಘದ ಆಶ್ರಯದಲ್ಲಿವಿಜೃಂಭಣೆಯ ಅಶ್ಲೇಷ ಪೂಜೆ, ಪಂಚಾಮೃತ ಅಭಿಷೇಕ ನಡೆಯಿತು.

