ಆಯುಷ್ಮಾನ್ ಯೋಜನೆ ಬಡವರಿಗೆ ಸಹಕಾರಿ

Contributed byashok.kashetti@yahoo.co.in|Vijaya Karnataka

ಹಾವೇರಿ ಜಿಲ್ಲೆಯ ಹಿರೇಮುಗದೂರ ಗ್ರಾಮದಲ್ಲಿ ಆಯುಷ್ಮಾನ್‌ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿತು. ಬಸವರಾಜ ಬೊಮ್ಮಾಯಿ ಅವರು ಈ ಯೋಜನೆ ಬಡವರಿಗೆ 5 ಲಕ್ಷದವರೆಗೆ ಉಚಿತ ಆರೋಗ್ಯ ಸೇವೆ ನೀಡುತ್ತದೆ ಎಂದರು. ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಔಷಧಿಗಳು ಲಭ್ಯವಿರುತ್ತವೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಪುನರಾರಂಭಿಸಲು ಆಗ್ರಹಿಸಲಾಯಿತು. ಗ್ರಾಮಗಳ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ayushman scheme provides free healthcare services to the poor

7ಎಸ್ ವಿಆರ್ 4

ಆಯುಷ್ಮಾನ್ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ

ಆಯುಷ್ಮಾನ್ ಯೋಜನೆ ಬಡವರಿಗೆ ಸಹಕಾರಿ

ವಿಕ ಸುದ್ದಿಲೋಕ ಸವಣೂರು

ಆಯುಷ್ಮಾನ್ ಯೋಜನೆ ಅಡಿ ಬಡವರಿಗೆ 5 ಲಕ್ಷದವರೆಗೆ ಎಲ್ಲರೀತಿಯ ಆರೋಗ್ಯ ಸೇವೆ ಉಚಿತವಾಗಿ ದೊರೆಯುತ್ತವೆ. ಅದರ ಜತೆಗೆ ಜನೌಷಧಿ ಕೇಂದ್ರಗಳಲ್ಲಿಕಡಿಮೆ ದರದಲ್ಲಿಔಷಧಿಗಳು ದೊರೆಯುತ್ತವೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿಬಡವರ ಅನುಕೂಲಕ್ಕಾಗಿ ರಾಜ್ಯ ಸರಕಾರ ಜನೌಷಧಿ ಕೇಂದ್ರವನ್ನು ಪ್ರಾರಂಭ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ತಾಲೂಕಿನ ಹಿರೇಮುಗದೂರ ಗ್ರಾಮದಲ್ಲಿಆಯುಷ್ಮಾನ್ ಆರೋಗ್ಯ ಕೇಂದ್ರದ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.

ಆಯುಷ್ಮಾನ ಯೋಜನೆ 2017ರಲ್ಲಿಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿಆರಂಭವಾಗಿದೆ. 5 ಲಕ್ಷ ರೂ. ವರೆಗೂ ಯಾವುದೇ ರೀತಿಯ ಚಿಕಿತ್ಸೆಗೆ ಕೇಂದ್ರ ಸರಕಾರ ಹಣ ನೀಡುತ್ತದೆ. ಬಡವರಿಗೆ ಆರೋಗ್ಯ ಸೇವೆ ನಿಲುಕುತ್ತಿಲ್ಲಎನ್ನುವ ಕಾರಣಕ್ಕೆ ಅವರಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆ ಮಾಡಿದ್ದಾರೆ. ಇದರ ಜತೆಗೆ ಜನೌಷಧಿ ಕೇಂದ್ರವನ್ನು ಪ್ರಾರಂಭ ಮಾಡಿದ್ದಾರೆ. ರಾಜ್ಯ ಸರಕಾರ ಹಾವೇರಿ ಜಿಲ್ಲಾಸತ್ರೆಯಲ್ಲಿದ್ದ ಜನೌಷಧಿ ಕೇಂದ್ರ ಬಂದ್ ಮಾಡಿಸಿದೆ. ಇದರಿಂದ ಬಡವರಿಗೆ ತೊಂದರೆಯಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹಾವೇರಿ ಜಿಲ್ಲಾಸ್ಪತೆಯಲ್ಲಿಜನೌಷಧಿ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಹೇಳಿದರು.

ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲಾ, ಶಾಸಕರು ಹಾಗೂ ಸಂಸದರು ಒಟ್ಟಿಗೆ ಕೆಲಸ ಮಾಡಬೇಕು. 60 ತಿಂಗಳಲ್ಲಿ59 ತಿಂಗಳು ಅಭಿವೃದ್ಧಿ ಕೆಲಸ ಮಾಡಿ ಒಂದು ತಿಂಗಳು ರಾಜಕಾರಣ ಮಾಡೋಣ. ವಿಧಾನಸಭಾ ಉಪಾಧ್ಯಕ್ಷ ರುದಪ್ಪ ಲಮಾಣಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿದ್ದ ಗವಿಸಿದ್ದಪ್ಪ ಅವರು ಇಬ್ಬರೂ ಸೇರಿಯೇ ಒಂದೇ ವೇದಿಕೆ ಕಾರ್ಯಕ್ರಮದಲ್ಲಿಪಾಲ್ಗೊಳ್ಳುವುದು ಅಪರೂಪ, ಇದು ಒಳ್ಳೆಯ ವೇದಿಕೆ, ಅಭಿವೃದ್ಧಿಯ ವೇದಿಕೆ. ಜನರ ಕಲ್ಯಾಣ ಮಾಡುವ ವೇದಿಕೆ ಎಂದರು.

ಆಯುಷ್ಕಾನ್ ಆರೋಗ್ಯ ಕೇಂದ್ರದಲ್ಲಿಒಪಿಡಿ, ಲ್ಯಾಬ್ ಇದೆ. ಇಲ್ಲಿರಾಷ್ಟಿ್ರೕಯ ಮತ್ತು ರಾಜ್ಯ ಮಟ್ಟದ ಆರೋಗ್ಯ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಎಲ್ಲರೂ ಇದರ ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಹೇಳಿದರು.

ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಗವಿಸಿದ್ದಪ್ಪ ದ್ಯಾಮಣ್ಣವರ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪ್ರಮುಖರು ಇದ್ದರು.

ಫೋಟೋ ಫೈಲ್ ನೇಮ್ 7ಎಸ್ ವಿಆರ್ 4

ಸವಣೂರು ತಾಲೂಕಿನ ಹಿರೇಮುಗದೂರ ಗ್ರಾಮದಲ್ಲಿಆಯುಷ್ಮಾನ್ ಆರೋಗ್ಯ ಕೇಂದ್ರದ ನಿರ್ಮಾಣ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದರು.