ವಿಕ ಸುದ್ದಿಲೋಕ ಬಂಟ್ವಾಳ
ಸ್ವಚ್ಛ ಸಮಾಜದ ನಿರ್ಮಾಣ ಪ್ರತಿಯೊಬ್ಬ ನಾಗರಿಕನ ಪ್ರಥಮ ಹಾಗೂ ಪರಮ ಗುರಿಯಾಗಬೇಕು ಹಾಗೂ ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿಸಂಘ ಸಂಸ್ಥೆಗಳು ನಿರ್ಣಾಯಕ ಮತ್ತು ಜವಾಬ್ದಾರಿಯುತ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿವಿಶ್ವಕರ್ಮ ಬ್ಯಾಂಕ್ ಸ್ವಚ್ಛತೆಯ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ಸುಧೀರ್ ನಾಯಕ್ ಹೇಳಿದರು.
ವಿಶ್ವಕರ್ಮ ಸಹಕಾರ ಬ್ಯಾಂಕ್ ನ ಮೆಲ್ಕಾರ್ ಶಾಖೆಯ ವತಿಯಿಂದ ಸ್ವಚ್ಛತಾ ಹೀ ಸೇವಾ ಧ್ಯೇಯದೊಂದಿಗೆ ನಡೆದ 34ನೇ ಸ್ವಚ್ಛ ಭಾರತ ಕಾರ್ಯಕ್ರಮವನ್ನು ಪ್ರಮುಖರಾದ ಅಶೋಕ್ ಗಟ್ಟಿ ಜತೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಯುವ ಸಂಗಮ ಗೌರವಾಧ್ಯಕ್ಷ ಎಂ.ಎನ್ ಕುಮಾರ್ ಮಾತನಾಡಿ, ಜನಜಾಗೃತಿ ಮೂಡಿಸುವ ಮೂಲಕ ಸ್ವಚ್ಛತೆಯ ಬಗ್ಗೆ ಬ್ಯಾಂಕ್ ನ ಆಡಳಿತ ಮಂಡಳಿಗೆ ಇರುವ ಕಾಳಜಿಯನ್ನು ಗುರುತಿಸಬಹುದು ಎಂದು ಹೇಳಿದರು.
ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದ ಸುತ್ತಮುತ್ತಲಿನ ಪರಿಸರದಲ್ಲಿಸ್ವಚ್ಚತಾ ಶ್ರಮದಾನ ನಡೆಯಿತು. ಬ್ಯಾಂಕ್ ನ ನಿರ್ದೇಶಕರಾದ ಜಯಪ್ರಕಾಶ್ ಆಚಾರ್ಯ ಭಂಡಾರಿಬೆಟ್ಟು, ಬಿಜು ಜಯ ಆಚಾರ್ಯ, ನಂದಾವರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಭಾಕರ ಶೆಟ್ಟಿ, ಸುರೇಶ್ ಗಟ್ಟಿ, ನೇತ್ರಾವತಿ ಯುವ ಸಂಘ ಸದಸ್ಯರು, ವಿN್ನೕಶ್ವರ ಸೇವಾ ಸಮಿತಿ ಸದಸ್ಯರು, ಶಾಖಾ ವ್ಯವಸ್ಥಾಪಕಿ ಉಷಾ ಕೆ. ಹಾಗೂ ಸಿಬ್ಬಂದಿ, ಗ್ರಾಹಕರು ಸ್ವಯಂ ಸೇವಕರಾಗಿ ಸಹಕರಿಸಿದರು.
ಚಿತ್ರ: 9ಬಿಎಚ್ ವಿಶ್ವಕರ್ಮ
ವಿಶ್ವಕರ್ಮ ಸಹಕಾರ ಬ್ಯಾಂಕ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

