ತೃಕ್ಕನ್ನಾಡು ಆರಾಟು ಮಹೋತ್ಸವಕ್ಕೆ ಚಾಲನೆ

Contributed bycrastalp19@gmail.com|Vijaya Karnataka

ತೃಕ್ಕನ್ನಾಡು ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಭಾನುವಾರ ಮಹೋತ್ಸವಕ್ಕೆ ಚಾಲನೆ ದೊರಕಿತು. ಕೀಯೂರು ಚಂದ್ರಗಿರಿ ಶಾಸ್ತಾ ದೇವಸ್ಥಾನದಿಂದ ಶಿವನಾಮಜಪದೊಂದಿಗೆ ಸಾವಿರಾರು ಭಕ್ತರು ತೃಕ್ಕನ್ನಾಡು ತ್ರಯಂಬಕೇಶ್ವರ ದೇವಸ್ಥಾನಕ್ಕೆ ಆಗಮಿಸಿದರು. ಏಳು ದಿನಗಳ ಈ ಉತ್ಸವ ಮಾರ್ಚ್ 14 ರಂದು ಸಂಪನ್ನಗೊಳ್ಳಲಿದೆ. ವಿವಿಧ ದೇವಸ್ಥಾನಗಳ ಅರ್ಚಕರು, ಪಂಡಿತರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ಕೋಟಿಕ್ಕುಳ ಕೂರುಂಬ ಭಗವತೀ ದೇವಸ್ಥಾನದಿಂದ ಹಸಿರುವಾಣಿ ಮೆರವಣಿಗೆ ನಡೆಯಿತು.

trikkannadu aratu mahotsav devotees gather for the grand celebration

ವಿಕ ಸುದ್ದಿಲೋಕ ಕಾಸರಗೋಡು

ತೃಕ್ಕನ್ನಾಡು ಆರಾಟು ಮಹೋತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಭಾನುವಾರ ಬೆಳಗ್ಗೆ ಕೀಯೂರು ಚಂದ್ರಗಿರಿ ಶಾಸ್ತಾ ಕ್ಷೇತ್ರದಿಂದ ತೃಕ್ಕನ್ನಾಡು ತ್ರಯಂಬಕೇಶ್ವರ ಕ್ಷೇತ್ರಕ್ಕೆ ಶಿವನಾಮಜಪದೊಂದಿಗೆ ಸಾವಿರಾರು ಮಂದಿ ಆಗಮಿಸಿದ್ದು, ಬಳಿಕ ಉತ್ಸವಕ್ಕೆ ಚಾಲನೆಯಾಯಿತು. ಏಳು ದಿನ ಈ ಉತ್ಸವ ನಡೆಯಲಿದ್ದು, ಮಾ.14ರಂದು ಸಂಪನ್ನಗೊಳ್ಳಲಿದೆ.

ಕಾಸರಗೋಡು ಕೂರುಂಬ ಭಗವತೀ ಕ್ಷೇತ್ರ, ಕೀಯೂರು ಕಳರಿ ಕ್ಷೇತ್ರ, ಕೀಯೂರು ಕೂರುಂಬ ಭಗವತೀ ಕ್ಷೇತ್ರ, ಚೂಳಿಯಾರು ಭಗವತೀ ಕ್ಷೇತ್ರ, ಕೋಟಿಕ್ಕುಳ ಕೂರುಂಬ ಭಗವತೀ ಕ್ಷೇತ್ರದ ಅರ್ಚಕರು, 500 ಪಂಡಿತರು ಹಾಗೂ ಹಲವಾರು ಭಕ್ತರು ಭಾಗವಹಿಸಿದ್ದರು.

ಭಾನುವಾರ ಸಂಜೆ ಕೋಟಿಕ್ಕುಳ ಕೂರುಂಬ ಭಗವತೀ ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮಿಸಿತು. ಸೋಮವಾರ ವಿಶೇಷ ಪೂಜೆಗಳು, ನಾನಾ ಕಾರ್ಯಕ್ರಮಗಳು ನಡೆಯಿತು.

ಚಿತ್ರ: 9ಕೆಎಸ್ ಎಲ್ ತಕ್ಕನ್ನಾಡು

ತೃಕ್ಕನ್ನಾಡು ತ್ರಯಂಬಕೇಶ್ವರ ಕ್ಷೇತ್ರದ ಉತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು.

9ಕೆಎಸ್ ಎಲ್ ತೃಕ್ಕನ್ನಾಡು1

ತೃಕ್ಕನ್ನಾಡು ತ್ರಯಂಬಕೇಶ್ವರ ಕ್ಷೇತ್ರದ ಉತ್ಸವಕ್ಕೆ ಬಂದ ಮೆರವಣಿಗೆ.