8-ಆರ್ ಎನ್ ಆರ್ -05
ವಿಬಿ ಜಿ -ರಾಮ್ ಜಿ ಯೋಜನೆ ಜನಜಾಗೃತಿ ಪಾದಯಾತ್ರೆ
ಕೂಲಿಕಾರರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್
ವಿಕ ಸುದ್ದಿಲೋಕ ರಾಣೇಬೆನ್ನೂರ
ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ರಾಜ್ಯ ಕಾಂಗ್ರೆಸ್ ಸರಕಾರ ಸುಳ್ಳು ಹೇಳಿ ಬಡವರ, ಕೂಲಿಕಾರರ ದಾರಿ ತಪ್ಪಿಸುತ್ತಿದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ತಾಲೂಕಿನ ಕರೂರ, ಐರಣಿ, ಹಿರೇಬಿದರಿ ಹಾಗೂ ಹುಲಿಕಟ್ಟಿ ಗ್ರಾಮಗಳಲ್ಲಿಬಿಜೆಪಿ ಗ್ರಾಮೀಣ ಘಟಕ ವತಿಯಿಂದ ಹಮ್ಮಿಕೊಂಡಿದ್ದ ವಿಬಿ ಜಿ ರಾಮ್ ಜಿ ಯೋಜನೆ ಜನಜಾಗೃತಿ ಪಾದಯಾತ್ರೆಯಲ್ಲಿಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರ ವಿಬಿ ಜಿ ರಾಮ್ ಜಿ ಯೋಜನೆ ವಿರೋಧಿಸಿ ರೈತರ, ಕೃಷಿ ವಿರೋಧಿ ನೀತಿ ಅನುಸರಿಸುತ್ತಿದೆ. ಹಿಂದಿನ ನರೇಗಾ ಯೋಜನೆಯಲ್ಲಿಪ್ರತಿ ವರ್ಷ ನೂರು ದಿನಗಳ ಉದ್ಯೋಗ ಖಾತ್ರಿ ಇತ್ತು. ಈಗ 125 ದಿನಗಳಿಗೆ ಹೆಚ್ಚಿಗೆ ಮಾಡಿದೆ. ಈ 125 ದಿನಗಳನ್ನು ಗ್ರಾಮ ಪಂಚಾಯತಿಗಳೇ ನಿರ್ಧಾರ ಮಾಡಬಹುದು. ಆದರೆ ಕೇಂದ್ರ ಸರಕಾರ ನಿರ್ಧಾರ ಮಾಡುತ್ತಿದೆ ಎಂಬ ಭೀತಿಯನ್ನು ಕಾರ್ಮಿಕರಲ್ಲಿಹುಟ್ಟಿಸುತ್ತಿದೆ. ಇಂತಹ ಹೇಳಿಕೆ ಜನರು ತಲೆಕೆಡಿಸಿಕೊಳ್ಳದೆ ಈ ಯೋಜನೆ ಬೆಂಬಲ ಸೂಚಿಸುವುದರ ಜತೆಗೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಿದ್ದು ಚಿಕ್ಕಬಿದರಿ, ಸುಭಾಶ ಶಿರಗೇರಿ, ಚೇತನ ಪೂಜಾರ, ಹನುಮಂತ ಮಿನಿಕಟ್ಟಿ, ನಿಂಗರಾಜ ಕೋಡಿಹಳ್ಳಿ, ಚೆನ್ನಮ್ಮ ಗುರಪಾದದೇವರಮಠ, ಸುಜಾತ ಆರಾಧ್ಯಮಠ, ಅಶೋಕ ಪಾಸಿಗಾರ, ಮಲ್ಲಿಕಾರ್ಜುನ ಮಸಿಯಪ್ಪನವರ, ವಿಜಯಕುಮಾರ ನಲವಾಗಲ, ಮೌನೇಶ ತಳವಾರ, ರಮೇಶ ನಾಯಕ, ಚಿಕ್ಕಪ್ಪ ಕಂಬಳಿ, ಗೋವಿಂದ ಬೆನ್ನೂರು, ಪ್ರಕಾಶ ಹೊರಕೇರಿ, ಬಸವರಾಜ ಚಳಗೇರಿ, ಪವನಕುಮಾರ ಮಲ್ಲಾಡದ ಇತರರಿದ್ದರು.
ಫೋಟೊ : 8-ಆರ್ ಎನ್ ಆರ್ -05
ರಾಣೇಬೆನ್ನೂರ ತಾಲೂಕಿನ ಕರೂರ ಗ್ರಾಮದಲ್ಲಿಬಿಜೆಪಿ ಗ್ರಾಮೀಣ ಘಟಕ ವತಿಯಿಂದ ಹಮ್ಮಿಕೊಂಡಿದ್ದ ವಿಬಿ ಜಿ ರಾಮ್ ಜಿ ಯೋಜನೆ ಜನಜಾಗೃತಿ ಪಾದಯಾತ್ರೆ ನಡೆಯಿತು.

