8-ಆರ್ ಎನ್ ಆರ್ -04
ಪ್ರಾಣಿ, ಪಕ್ಷಿಗಳ ಸಂರಕ್ಷಣೆ ಎಲ್ಲರ ಹೊಣೆ
ವಿಕ ಸುದ್ದಿಲೋಕ ರಾಣೇಬೆನ್ನೂರ
ಪ್ರಾಣಿ ಪಕ್ಷಿಗಳಿಗೆ ಆಹಾರ, ನೀರಿನ ಕೊರತೆ ಮತ್ತು ಮನುಷ್ಯನ ದುರಾಸೆಯಿಂದಾಗಿ ಪಕ್ಷಿ ಸಂಕುಲ ಇಂದು ಅಳಿವಿನ ಅಂಚಿನಲ್ಲಿದ್ದು ಅವುಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಡಾ.ಎಂ.ಎಂ.ಮೃತ್ಯುಂಜಯ ಹೇಳಿದರು.
ನಗರದ ಬಿಎಜೆಎಸ್ ಎಸ್ ಬಿಇಡಿ ಕಾಲೇಜಿನಲ್ಲಿಏರ್ಪಡಿಸಿದ್ದ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ಎಂಬ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಹಿಂದೆ ಮನೆಯಂಗಳದಲ್ಲಿಚಿಲಿಪಿಲಿ ಗುಟ್ಟುವ ಗುಬ್ಬಚ್ಚಿಗಳ ಇಂಚರ ಇಂದು ಕಾಣದಾಗಿದೆ. ಬೆಳೆಗಳನ್ನು ಪ್ರಾಣಿ ಪಕ್ಷಿಗಳು ತಿಂದು ಬಿಡುತ್ತವೆ ಎಂಬ ಕಾರಣದಿಂದ ರೈತರು ಅಳವಡಿಸಿದ ಬಲೆಗೆ ಬಿದ್ದು ಸಾಯುತ್ತಿವೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಉಪ ಪ್ರಾಚಾರ್ಯ ಪ್ರೊ.ಶಿವಕುಮಾರ ಬಿಸಲಳ್ಳಿ ಮಾತನಾಡಿದರು. ಪ್ರಶಿಕ್ಷಣಾರ್ಥಿಗಳು ತಮ್ಮ ಮನೆಯಲ್ಲಿನ ಅನುಪಯುಕ್ತ ವಸ್ತುಗಳನ್ನು ತಂದು ಅವುಗಳನ್ನು ಸಮರ್ಪಕ ರೀತಿಯಲ್ಲಿಬಳಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಪ್ರೊ.ಪರಶುರಾಮ ಪವಾರ, ಪ್ರೊ.ಅಶೋಕ ಹಳ್ಳಿ, ಕಿರಣಕುಮಾರ, ಸುನೀಲ ತಳವಾರ, ನಾಗರಾಜ ಪವಾರ, ದೇವಿಕಾ ಚೌಟಗಿ, ಎಲ್ಲಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.
ಫೋಟೊ: 8 ಆರ್ ಎನ್ ಆರ್ 04
ರಾಣೇಬೆನ್ನೂರು ನಗರದ ಬಿಎಜೆಎಸ್ ಎಸ್ ಬಿಇಡಿ ಕಾಲೇಜಿನಲ್ಲಿಏರ್ಪಡಿಸಿದ್ದ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ರಮ ಜರುಗಿತು.

