ವಾದಿರಾಜರ ಉಪದೇಶ ಅರಿವು ಅಗತ್ಯ

Contributed bymanjunathrd59@gmail.com|Vijaya Karnataka

ಹಾವೇರಿ ತಾಲೂಕಿನ ಹಾವನೂರ ಗ್ರಾಮದ ವಾದಿರಾಜ ಮೃತ್ತಿಕಾ ವೃಂದಾವನ ಮಠದಲ್ಲಿ ಶ್ರೀ ವಾದಿರಾಜ ಯತಿವರೇಣ್ಯರ ಉತ್ತರಾರಾಧನೆ ನಡೆಯಿತು. ಶ್ರೀ ಹರಿಆಚಾರ್ಯ ವಾಳ್ವೇಕರ ಅವರು ವಾದಿರಾಜರ ಬದುಕಿನ ಮೌಲಿಕ ಚಿಂತನೆಗಳ ಕುರಿತು ಉಪನ್ಯಾಸ ನೀಡಿದರು. ಕಷ್ಟಗಳನ್ನು ಎದುರಿಸುವ ಮಾರ್ಗಗಳನ್ನು ವಾದಿರಾಜರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ. ನಂತರ ರಥೋತ್ಸವ, ದಾಸವಾಣಿ ಕಾರ್ಯಕ್ರಮಗಳು ಜರುಗಿದವು.

i thank all your interests

8 ಮಂಜು 3

ವಾದಿರಾಜ ಮೃತ್ತಿಕಾ ವೃಂದಾವನ ಮಠದಲ್ಲಿಉತ್ತರಾರಾಧನೆ

ವಾದಿರಾಜರ ಉಪದೇಶ ಅರಿವು ಅಗತ್ಯ

ವಿಕ ಸುದ್ದಿಲೋಕ ಹಾವೇರಿ

ಇಂದು ಪ್ರತಿ ವ್ಯಕ್ತಿ ತನ್ನ ಕೆಲಸವೇ ಕಷ್ಟ ಎಂದುಕೊಳ್ಳುತ್ತಿದ್ದು, ಒಂದು ಕಡೆ ಕುಟುಂಬ ಇನ್ನೊಂದೆಡೆ ವೃತ್ತಿ ಬದುಕು. ಮತ್ತೊಂದು ಮಗ್ಗುಲಲ್ಲಿಆತ್ಮೋದ್ಧಾರದ ಭಾರವನ್ನು ನಿಭಾಯಿಸುವಲ್ಲಿಎಡವುತ್ತಿದ್ದಾನೆ. ಇದನ್ನು ಸರಿದೂಗಿಸಲು ವಾದಿರಾಜರ ಮೌಲಿಕ ಉಪದೇಶಗಳನ್ನು, ಬದುಕನ್ನು ಎಲ್ಲರೂ ಅರಿಯುವ ಅಗತ್ಯವಿದೆ ಎಂದು ಶ್ರೀಹರಿಆಚಾರ್ಯ ವಾಳ್ವೇಕರ ಹೇಳಿದರು.

ತಾಲೂಕಿನ ಹಾವನೂರ ಗ್ರಾಮದ ವಾದಿರಾಜ ಮೃತ್ತಿಕಾ ವೃಂದಾವನ ಮಠದಲ್ಲಿವಾದಿರಾಜ ಯತಿವರೇಣ್ಯರ ಆರಾಧನಾ ಮಹೋತ್ಸವದ ಮೂರನೇ ದಿನವಾದ ಶನಿವಾರ ಉತ್ತರಾರಾಧನೆಯ ಕಾರ್ಯಕ್ರಮದಲ್ಲಿಪಾಲ್ಗೊಂಡು ಶ್ರೀ ವಾದಿರಾಜರ ಬದುಕಿನ ಮೌಲಿಕ ಚಿಂತನೆಗಳ ಕುರಿತು ಉಪನ್ಯಾಸ ನೀಡಿದರು.

ಯಾವುದೇ ಕಷ್ಟ ಬರುವುದು ಅದು ಕಳೆದುಹೋಗಲಿದೆ ಎಂದೇ ಅರ್ಥ. ವಾದಿರಾಜರ ತಪಸ್ಸು, ಭಗವಂತನ ಮೇಲಿಟ್ಟ ನಂಬಿಕೆ, ವಿಶ್ವಾಸ ಅದರಿಂದ ಸಂಪಾದನೆ ಮಾಡಿದ ಯೋಗಶಕ್ತಿಯಿಂದ ಅವರು ಲೌಕಿಕ ಬದುಕಿಗೆ ಅನುಗುಣವಾಗಿ ಅಂದಿನ ಸಮಸ್ಯೆಗೆ ಅಂದೇ ಪರಿಹಾರ ಕಂಡುಕೊಂಡು ನಮಗೆ ಬದುಕಿ ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರ ಬದುಕು ಮತ್ತೊಬ್ಬರಿಗೆ ಬದುಕು ಕಟ್ಟಿಕೊಳ್ಳುವಂತೆ ಇರಬೇಕು. ಅಂದಿನ ಕಾಲದಲ್ಲಿಸಾಮಾಜಿಕ ಬದುಕಿನಲ್ಲಿಬದಲಾವಣೆ ತರುವಲ್ಲಿಯತಿಗಳ ಪಾತ್ರವೇನು ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದರು.

ಉಪನ್ಯಾಸದ ನಂತರ ತ್ರಿವಿಕ್ರಮ ದೇವರ ಹಾಗೂ ವಾದಿರಾಜರ ಮೂರ್ತಿಗಳ ಅದ್ದೂರಿ ರಥೋತ್ಸವ, ಪಾಲಕಿ ಸೇವೆ, ಮಹಾನೈವೇದ್ಯ, ಹಸ್ತೋದಕ ತೀರ್ಥಪ್ರಸಾದ ನಡೆದವು. ಸಂಜೆ ಕೊಪ್ಪಳದ ಸಮೀರಾಚಾರ್ಯ ಬಂಡಿಹಾಳ ಹಾಗೂ ಸಂಗಡಿಗರಿಂದ ದಾಸವಾಣಿ ನಡೆಯಿತು. ಪುರುಷೋತ್ತಮಾಚಾರ್ಯ ಗಲಗಲಿ, ಕೃಷ್ಣಮೂರ್ತಿ ಗಂಗೂರ, ಅಜಿತ ಗೋಠೆ, ಧೃವರಾಜ ಅಣ್ಣೀಗೇರಿ, ಧೀರೇಂದ್ರ ಕುಲಕರ್ಣಿ, ಆದಿತ್ಯ ಕುಲಕರ್ಣಿ, ರಕ್ಷಕ ಕೆ.ಎಂ., ರಂಗನಾಥ ಮೋಖಾಶಿ, ಉದಯ ಜಹಗೀರದಾರ ಮತ್ತಿತರರಿದ್ದರು.

ಪೋಟೋ 8 ಮಂಜು 3

ಹಾವೇರಿ ತಾಲೂಕು ಹಾವನೂರ ಗ್ರಾಮದ ವಾದಿರಾಜ ಮೃತ್ತಿಕಾ ವೃಂದಾವನ ಮಠದಲ್ಲಿನಡೆದ ಉತ್ತರಾರಾಧನೆಯ ಕಾರ್ಯಕ್ರಮದಲ್ಲಿಶ್ರೀಹರಿಆಚಾರ್ಯ ವಾಳ್ವೇಕರ ಉಪನ್ಯಾಸ ನೀಡಿದರು.