ವೀರಶೈವ ಲಿಂಗಾಯತ ಸಮಾಜದಿಂದ ಇಫ್ತಾರ್ ಕೂಟ

Contributed byraghukgjd1@gmail.com|Vijaya Karnataka

ಗೋಗೇರಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮಾಜವು ರಂಜಾನ್‌ ಉಪವಾಸ ನಿರತರಿಗಾಗಿ ಇಫ್ತಾರ್‌ ಕೂಟ ಏರ್ಪಡಿಸಿತು. ಹಿಂದೂ, ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಪರಸ್ಪರ ಕೈ ತುತ್ತು ನೀಡಿದರು. ದೇಶದ ಭವಿಷ್ಯಕ್ಕೆ ಇಂತಹ ಸೌಹಾರ್ದ ಕೂಟಗಳು ಅಗತ್ಯ ಎಂದು ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷರು ತಿಳಿಸಿದರು. ಇದರಿಂದ ಅಂತರ್‌ಧರ್ಮೀಯ ಆಚಾರ, ವಿಚಾರ ವಿನಿಮಯ ಸಾಧ್ಯವಾಗಲಿದೆ.

veerashaiva lingayat community unity social harmony impact during iftar

ವೀರಶೈವ ಲಿಂಗಾಯತ

ಸಮಾಜದಿಂದ ಇಫ್ತಾರ್ ಕೂಟ

ವಿಕ ಸುದ್ದಿಲೋಕ ಗಜೇಂದ್ರಗಡ

ಸಮೀಪದ ಗೋಗೇರಿ ಗ್ರಾಮದಲ್ಲಿವೀರಶೈವ ಲಿಂಗಾಯತ ಸಮಾಜದ ವತಿಯಿಂದ ರಂಜಾನ್ ಹಬ್ಬ ಉಪವಾಸ ನಿರತರಿಗೆ ಸೌಹಾರ್ದ ಇಫ್ತಾರ್ ಕೂಟ ನಡೆಯಿತು. ಹಿಂದೂ, ಮುಸ್ಲಿಂ ಭಾಂದವರು ಪರಸ್ಪರ ಕೈ ತುತ್ತು ನೀಡುವ ಮೂಲಕ ಸಂತಸ ವ್ಯಕ್ತಪಡಿಸಿದರು.

ಶರಣ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಬಸವರಜ ಕೊಟಗಿ ಮಾತನಾಡಿ, ದೇಶದ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ಸೌಹಾರ್ದ ಕೂಟಗಳ ಅಗತ್ಯವಿದೆ. ಇದರಿಂದ ಅಂತರ್ ಧರ್ಮೀಯ ಆಚಾರ, ವಿಚಾರಗಳ ವಿನಿಮಯವು ಸಾಧ್ಯವಾಗಲಿದೆ. ಪರಸ್ಪರ ಅರಿಯುವ ಅವಕಾಶವೂ ಸಿಗಲಿದೆ. ಅನುಮಾನವೂ ದೂರವಾಗಲಿದೆ ಎಂದರು.

ಪ್ರೊ.ಬಿ.ಎ.ಕೆಂಚರಡ್ಡಿ, ಅಮರೇಶ ಗಾಣಿಗೇರ, ಬಸವರಾಜ ಮೂಲಿಮನಿ, ಉರ್ದು ಶಾಲೆಯ ಮುಖ್ಯೋಪಾದ್ಯಾಯ ಆರ್ .ವೈ.ಬಾಗವಾನ, ಹುಸೇನಸಾಬ ಬಡಿಗೇರ, ವೀರಶೈವ ಸಮಾಜದ ಅಧ್ಯಕ್ಷ ಈರಣ್ಣ ಮೂಲಿಮನಿ, ಹುಸೇನ ನಿಡಗುಂದಿ, ಇಮಾಮಸಾಬ ಬಾಗವಾನ, ಬಸಪ್ಪ ಗುಂಡೆ, ಕೆ.ಕೆ.ಬಾಗವಾನ, ಇಮಾಮ ಹಾದಿಮನಿ, ದಸ್ತಗೀರ ನಧಾಪ್ , ರುದ್ರೇಶ ಕೆರಿ, ಮಾತಾಂರ್ ಡಪ್ಪ ಹದ್ದಣ್ಣವರ, ದಸ್ತಗೀರ ವಾಲಿಕಾರ, ಶಾಬುದ್ದೀನ ನಧಾಪ್ , ಆರ್ .ಕೆ.ಬಾಗವಾನ ಇದ್ದರು.

ಫæäೕಟೊ: 8 ಜಿಜೆಡಿ 1:

ಗೋಗೇರಿ ಗ್ರಾಮದಲ್ಲಿವೀರಶೈವ ಲಿಂಗಾಯತ ಸಮಾಜದಿಂದ ರಂಜಾನ್ ಹಬ್ಬ ಉಪವಾಸ ನಿರತರಿಗೆ ಸೌಹಾರ್ದ ಇಫ್ತಾರ್ ಕೂಟ ನಡೆಯಿತು.