ವಿಕ ಸುದ್ದಿಲೋಕ ಗೋಳಿಯಂಗಡಿ
ನವಶಕ್ತಿ ಯುವಕ ಮಂಡಲವು ಗ್ರಾಮೀಣ ಭಾಗದಲ್ಲಿಮಾದರಿ ಕಾರ್ಯಕ್ರಮಗಳನ್ನು ಆಯೋಜಿಸಿ, ಜನಸೇವೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಸಾಮಾಜಿಕ ಕಳಕಳಿಯುಳ್ಳ ಇನ್ನಷ್ಟು ಕಾರ್ಯಕ್ರಮಗಳು ಯುವಕ ಮಂಡಲದಿಂದ ನಡೆಯಲಿ. ಈ ಸಮಾಜ ಸೇವೆಗೆ ಮುಂದಿನ ದಿನಗಳಲ್ಲಿರಾಜ್ಯೋತ್ಸವ ಪ್ರಶಸ್ತಿ ಲಭಿಸಲಿ ಎಂದು ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್ .ಜಯರಾಮ ಶೆಟ್ಟಿ ಸೂರ್ಗೋಳಿ ಹೇಳಿದರು.
ಜಿಲ್ಲಾಪ್ರಶಸ್ತಿ ಪುರಸ್ಕೃತ ನವಶಕ್ತಿ ಯುವಕ ಮಂಡಲ ಅರಸಮ್ಮಕಾನು, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ ಬೆಳ್ವೆ, ಲಯನ್ಸ್ ಕ್ಲಬ್ ಆರ್ಡಿ-ಬೆಳ್ವೆ- ಗೋಳಿಯಂಗಡಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಆಶ್ರಯದಲ್ಲಿಅರಸಮ್ಮಕಾನು ಶೇಡಿಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನಡೆದ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನವಶಕ್ತಿ ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಆರ್ಡಿ- ಬೆಳ್ವೆ- ಗೋಳಿಯಂಗಡಿ ಲಯನ್ಸ್ ಕ್ಲಬ್ ಅಣ್ಣಯ್ಯ ಶೆಟ್ಟಿ, ಕೆಎಂಸಿ ಆಸ್ಪತ್ರೆ ಮಣಿಪಾಲ ವೈದ್ಯಾಧಿಕಾರಿ ಡಾ.ಕವೀಶಾ, ಮಡಾಮಕ್ಕಿ ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ ದಯಾನಂದ ಪೂಜಾರಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶೇಡಿಮನೆ ಎಸ್ ಡಿಎಂಸಿ ಅಧ್ಯಕ್ಷೆ ಜ್ಯೋತಿ ಸತ್ಯನ್ ಮತ್ತಿತರರು ಉಪಸ್ಥಿತರಿದ್ದರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿಸುಮಾರು 82 ಮಂದಿ ಭಾಗವಹಿಸಿದ್ದರು. ಪ್ರದೀಪ ಹೆಗ್ಡೆ ಸ್ವಾಗತಿಸಿದರು. ಕೀರ್ತಿಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಫೋಟೋ: ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್ .ಜಯರಾಮ ಶೆಟ್ಟಿ ಸೂರ್ಗೋಳಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿದರು.
ಫೋಟೋ ಫೈಲ್ ನೇಮ್ :9 ಗೋಳಿಯಂಗಡಿ 1 ಅರಸಮ್ಮಕಾನು

