ಮೂರೇ ದಿನದಲ್ಲಿಆಸೀಸ್ ಮಡಿಲಿಗೆ ಪಿಂಕ್ ಬಾಲ್ ಟೆಸ್ಟ್

Contributed bymanjunath.gowda@timesgroup.com|Vijaya Karnataka

ಭಾರತ ತಂಡ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು 96 ರನ್‌ಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 256 ರನ್‌ಗಳ ಗುರಿ ನೀಡಿತ್ತು. ನ್ಯೂಜಿಲೆಂಡ್‌ 159 ರನ್‌ಗಳಿಗೆ ಆಲೌಟ್ ಆಯಿತು. ಅಕ್ಷರ್‌ ಪಟೇಲ್‌ ಮತ್ತು ಜಸ್‌ಪ್ರಿತ್‌ ಬುಮ್ರಾ ತಲಾ ಮೂರು ಮತ್ತು ನಾಲ್ಕು ವಿಕೆಟ್‌ ಪಡೆದರು. ಸಂಜು ಸ್ಯಾಮ್ಸನ್‌ ಮತ್ತು ಅಭಿಷೇಕ್‌ ಶರ್ಮಾ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು.

india scores victory against australia in pink ball test to capture t20 world cup trophy

ಅಹಮದಾಬಾದ್ : ಟೂರ್ನಿಯಲ್ಲಿಇದೇ ಮೊದಲ ಸಲ ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ ತಂಡ, ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ96 ರನ್ ಗಳಿಂದ ನ್ಯೂಜಿಲೆಂಡ್ ತಂಡವನ್ನು ಬಗ್ಗು ಬಡಿದು ಸತತ ಎರಡನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದರೊಂದಿಗೆ ಆತಿಥ್ಯ ವಹಿಸಿ ಹಾಗೂ ಸತತವಾಗಿ ಟ್ರೋಫಿ ಗೆದ್ದ ಮೊದಲ ದೇಶ ಹಾಗೂ 3ನೇ (2007, 2024, 2026) ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡ ಎಂಬ ಚಾರಿತ್ರಿಕ ದಾಖಲೆಯನ್ನು ಭಾಧಿರತ ನಿರ್ಮಿಸಿತು. 1 ಲಕ್ಷ 30 ಸಾವಿರ ಆಸನಗಳ ಸಾಮರ್ಥ್ಯದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿಭಾನುವಾರ ನಡೆದ ಹೈವೋಲ್ಟೇಜ್ ಫೈನಲ್ ನಲ್ಲಿಭಾರತ ನೀಡಿದ 256 ರನ್ ಗಳ ಅಸಾಧಾರಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ , 19 ಓವರ್ ಗಳಲ್ಲಿತನ್ನ ಎಲ್ಲಾವಿಕೆಟ್ ಕಳೆದುಕೊಂಡು 159 ರನ್ ಗಳಿಸಿ ಹೀನಾಯ ಸೋಲು ಕಂಡಿತು. ಹೀಗಾಗಿ ಚೊಚ್ಚಲ ಬಾರಿ ಟ್ರೋಫಿ ಗೆಲ್ಲುವ ಕಿವೀಸ್ ಬಳಗದ ಪ್ರಯತ್ನ ಈಡೇರಲಿಲ್ಲ. ಟೀಮ್ ಸೀಫರ್ಟ್ (52) ಮತ್ತು ನಾಯಕ ಮಿಚೆಲ್ ಸ್ಯಾಂಟ್ನರ್ (43) ಹೊರತುಪಡಿಸಿ ಇತರ ಯಾವ ಬ್ಯಾಟರ್ ಗಳು ಸಹ ಭಾರತೀಯರ ಸಂಘಟಿತ ದಾಳಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಸ್ಪಿನ್ ಮತ್ತು ವೇಗದ ಸಂಯೋಜನೆಯೊಂದಿಗೆ ಭಾರತೀಯರು ಪಾರಮ್ಯ ಸಾಧಿಸಿದರು. ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ವೇಗಿ ಜಸ್ ಪ್ರಿತ್ ಬುಮ್ರಾ ಕ್ರಮವಾಗಿ 3 ಮತ್ತು 4 ವಿಕೆಟ್ ಹಂಚಿಕೊಳ್ಳುವ ಮೂಲಕ ತಂಡದ ಬೃಹತ್ ಗೆಲುವಿಗೆ ಕಾರಣರಾದರು. ಹಿಂದಿನ ಮೂರು ಟಿ20 ವಿಶ್ವಕಪ್ ಪಂದ್ಯಗಳಲ್ಲಿಕಿವೀಸ್ ವಿರುದ್ಧ ಮುಗ್ಗರಿಸಿದ್ದ ಭಾರತ, ಕೊನೆಗೂ ಜಯಾಪಜಯ ದಾಖಲೆಯನ್ನು 1-3ಕ್ಕೆ ತಗ್ಗಿಸುವಲ್ಲಿಯಶಸ್ವಿಯಾಯಿತು. 2021ರ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ನಲ್ಲಿಕಿವೀಸ್ ವಿರುದ್ಧ ಆಘಾತ ಕಂಡಿದ್ದ ಭಾರತ, ಈ ಗೆಲುವಿನೊಂದಿಗೆ ಮುಯ್ಯಿ ತೀರಿಸಿಕೊಂಡಿತು. ಮರೆಯಾದ ಕಹಿ ನೆನಪು: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿಪ್ರಶಸ್ತಿ ಎತ್ತಿಹಿಡಿಯುವ ಮೂಲಕ ಭಾರತ ಹಿಂದಿನ ಕಹಿ ಘಟನೆಗಳಿಂದ ಹೊರಬಂದಿತು. 2023ರ ಏಕದಿನ ವಿಶ್ವಕಪ್ ಫೈನಲ್ ಗೆ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯವಹಿಸಿತ್ತು. ರೋಹಿತ್ ಶರ್ಮ ಸಾರಥ್ಯದ ಟೀಮ್ ಇಂಡಿಯಾ, ಅಜೇಯ ದಾಖಲೆಯೊಂದಿಗೆ ಫೈನಲ್ ತಲುಪಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಆಸ್ಪ್ರೇಲಿಯನ್ನರು ಭಾರತದ ಕೋಟ್ಯಂತರ ಅಭಿಮಾನಿಗಳ ಹೃದಯವನ್ನು ಛಿದ್ರಗೊಳಿಸಿದ್ದರು. ಇದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿಭಾರತೀಯರಿಗೆ ಇಂದಿನವರೆಗೂ ಕಾಡಿತ್ತು. ಆದರೆ 2026ರ ಟಿ20 ವಿಶ್ವಕಪ್ ನಲ್ಲಿಟೀಮ್ ಇಂಡಿಯಾ ವಿಜಯೋತ್ಸವವನ್ನು ಆಚರಿಸುವುದರೊಂದಿಗೆ ಇಲ್ಲಿನ ಹಿಂದಿನ ಎಲ್ಲಕಹಿಗಳನ್ನು ಮರೆಸುವಂತೆ ಮಾಡಿತು. ಆರಂಭದಲ್ಲೇ ಎಡವಿದ ಕಿವೀಸ್ : ಮೊದಲ ಓವರ್ ನಲ್ಲಿಶಿವಂ ದುಬೆ ಅವರಿಂದ ಜೀವದಾನ ಪಡೆದ ಫಿನ್ ಅಲೆನ್ ಅವರನ್ನು ಮೂರನೇ ಓವರ್ ನಲ್ಲಿಅಕ್ಷರ್ ಪಟೇಲ್ ಔಟ್ ಮಾಡಿದ್ದು, ಆತಿಥೇಯರ ಮೇಲುಗೈಗೆ ಕಾರಣವಾಯಿತು. ಅಲ್ಲದೆ, ಭಾರತೀಯರ ಸಂಭ್ರಮಕ್ಕೆ ಕಾರಣವಾಯಿತು. ಸೆಮೀಸ್ ನಲ್ಲಿದಕ್ಷಿಣ ಆಫ್ರಿಕಾ ವಿರುದ್ಧ ಶತಕ ಗಳಿಸಿದ್ದ ಅಲೆನ್ , ಆತಿಥೇಯರಿಗೆ ದೊಡ್ಡ ಸವಾಲು ಎನಿಸಿದ್ದರು. ಆದರೆ ಅವರು ಔಟಾಗುತ್ತಿದ್ದಂತೆ ಕಿವೀಸ್ ಪಾಳಯದಲ್ಲಿನೀರವ ಮೌನ ಮನೆ ಮಾಡಿತು. 6 ಓವರ್ ಗಳಲ್ಲಿ3 ವಿಕೆಟ್ ಗೆ 52 ರನ್ ಗಳಿಸಿದ್ದ ನ್ಯೂಜಿಲೆಂಡ್ , ಹತ್ತು ಓವರ್ ಗಳಲ್ಲಿ5 ವಿಕೆಟ್ ಗೆ 88 ರನ್ ಗಳಿಸಿತು. ಕೊನೆಯ ಹತ್ತು ಓವರ್ ಗಳಲ್ಲಿ71 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಮುಗಿಲು ಮುಟ್ಟಿದ ಸಂಭ್ರಮ: ಅಭಿಷೇಕ್ ಶರ್ಮ ಎಸೆದ 19ನೇ ಓವರ್ ನ ಕೊನೆಯ ಎಸೆತದಲ್ಲಿಜಾಕೋಬ್ ಡಫಿ ನೀಡಿದ ಕ್ಯಾಚ್ ಬೌಂಡರಿ ಗೆರೆಯ ಬಳಿ ತಿಲಕ್ ವರ್ಮ ಅವರ ಬೊಗಸೆ ಸೇರುತ್ತಿದ್ದಂತೆಯೇ ಮೈದಾನದಲ್ಲಿಸಂಭ್ರಮಚಾರಣೆ ಮುಗಿಲು ಮುಟ್ಟಿತು. ಸಿಡಿಮದ್ದುಗಳು ಬಾನೆತ್ತರದಲ್ಲಿಚಿತ್ತಾರ ಬಿಡಿಸಿದವು. ಪರಸ್ಪರ ಆಟಗಾರರು ಅಭಿನಂದಿಸಿಕೊಂಡರು. ಅತ್ತ ಗ್ಯಾಲರಿಯಲ್ಲಿಧೋನಿ, ರೋಹಿತ್ , ಐಸಿಸಿ ಅಧ್ಯಕ್ಷ ಜಯ್ ಶಾ ಹಾಗೂ ಆಟಗಾರರ ಕುಟುಂಬಗಳು ವಿಜಯೋತ್ಸವದಲ್ಲಿಭಾಗಿಯಾದರು. ಮತ್ತೊಂದೆಡೆ ಗುಜರಾತ್ ಸೇರಿದಂತೆ ದೇಶದೆಲ್ಲೆಡೆ ಅಭಿಮಾನಿಗಳ ಹರ್ಷೊದ್ಗಾರ ಮುಗಿಲು ಮುಟ್ಟಿತು. ಸಂಜು-ಅಭಿಷೇಕ್ ಸ್ಫೋಟಕ ಬ್ಯಾಟಿಂಗ್ : ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಅಭಿಷೇಕ್ ಶರ್ಮ ಮತ್ತು ಸಂಜು ಸ್ಯಾಮ್ಸನ್ ಅವರ

ಸ್ಫೋಟಕ ಬ್ಯಾಟಿಂಗ್ ನಿಂದ ಭಾರತ ಪವರ್ ಪ್ಲೇ ಅವಧಿಯಲ್ಲಿದಾಖಲೆ ಮೊತ್ತ ಕಲೆಹಾಕಿತು. ಅದರಲ್ಲೂಮೊದಲ ನಾಲ್ಕು ಓವರ್ ಗಳಲ್ಲಿಈ ಜೋಡಿ 50 ರನ್ ಸೇರಿಸಿದ್ದು ಟಿ20 ವಿಶ್ವಕಪ್ ನ ಸೆಮೀಸ್ ಅಥವಾ ಫೈನಲ್ ನಲ್ಲಿತಂಡವೊಂದರ ಶ್ರೇಷ್ಠ ಸಾಧನೆಗೆ ಕಾರಣವಾಯಿತು. ಸ್ಯಾಮ್ಸನ್ ಮತ್ತು ಅಭಿಷೇಕ್ ಅವರ ಬ್ಯಾಟಿಂಗ್ ಆರ್ಭಟದಿಂದಾಗಿ ಮೊದಲ 6 ಓವರ್ ಗಳಲ್ಲಿಭಾರತ ವಿಕೆಟ್ ನಷ್ಟವಿಲ್ಲದೆ 92 ರನ್ ಗಳಿಸಿತು. 2024ರಲ್ಲಿಆಫ್ಘನ್ ವಿರುದ್ಧ ವೆಸ್ಟ್ ಇಂಡೀಸ್ 1 ವಿಕೆಟ್ ಗೆ 92 ರನ್ ಗಳಿಸಿದ್ದು ಪವರ್ ಪ್ಲೇ ಅವಧಿಯಲ್ಲಿನ ದಾಖಲೆ. 19 ಎಸೆತಗಳಲ್ಲಿಅರ್ಧ ಶತಕ ಪೂರೈಸಿದ ಅಭಿಷೇಕ್ , 8ನೇ ಓವರ್ ನಲ್ಲಿರಚಿನ್ ರವೀಂದ್ರಗೆ ವಿಕೆಟ್ ಒಪ್ಪಿಸಿದರು. ಇಡೀ ಟೂರ್ನಿಯಲ್ಲಿನಿರಾಸೆ ಮೂಡಿಸಿದರೂ ಫೈನಲ್ ನಲ್ಲಿಲಯ ಕಂಡುಕೊಂಡ ಎಡಗೈ ಆಟಗಾರ ತಂಡದ ಬೃಹತ್ ಮೊತ್ತಕ್ಕೆ ವೇದಿಕೆ ನಿರ್ಮಿಸಲು ನೆರವಾದರು. ಸ್ಯಾಮ್ಸನ್ -ಇಶಾನ್ ಜುಗಲ್ಬಂದಿ: ಮೊದಲ ವಿಕೆಟ್ ಗೆ ಅಭಿಷೇಕ್ ಜತೆ 98 ರನ್ ಗಳ ಜತೆಯಾಟ ನಿರ್ವಹಿಸಿದ ಬ್ಯಾಟಿಂಗ್ ತಾರೆ ಸ್ಯಾಮ್ಸನ್ , 2ನೇ ವಿಕೆಟ್ ಗೆ ಇಶಾನ್ ಕಿಶನ್ ಜತೆಯೂ ಅದ್ಭುತ ಆಟವಾಡಿದರು. ಟಿ20 ವಿಶ್ವಕಪನ ನಾಕೌಟ್ ಹಂತದಲ್ಲಿಕೇವಲ 7.2 ಓವರ್ ಗಳಲ್ಲಿಅತಿ ವೇಗದ ತಂಡದ ಮೂರಂಕಿ ಮೊತ್ತಕ್ಕೆ ಕಾರಣರಾದ ಸ್ಯಾಮ್ಸನ್ , ಟಿ20 ವಿಶ್ವಕಪ್ ನಲ್ಲಿಸತತ ಮೂರು ಅರ್ಧ ಶತಕ ಗಳಿಸಿದ ಭಾರತದ 3ನೇ ಆಟಗಾರ ಎನಿಸಿದರು. ವಿರಾಟ್ ಕೊಹ್ಲಿಮತ್ತು ಕೆ.ಎಲ್ . ರಾಹುಲ್ ಉಳಿದಿಬ್ಬರು. ಟೂರ್ನಿಯಲ್ಲಿಏರಿಳಿತದ ನಡುವೆಯೂ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿರುವ ಇಶಾನ್ , ನಿರ್ಣಾಯಕ ಪಂದ್ಯದಲ್ಲಿತಮ್ಮ ತೋಳ್ಬಲ ತೋರಿದರು. 23 ಎಸೆತಗಳಲ್ಲಿಅರ್ಧ ಶತಕ ಪೂರೈಸಿದ ಎಡಗೈ ಬ್ಯಾಟರ್ ಇಶಾನ್ , ದಾಖಲೆಯೊಂದಕ್ಕೆ ಸಾಕ್ಷಿಯಾದರು. ವಿಶ್ವಕಪ್ ನಲ್ಲಿಇದೇ ಮೊದಲ ಬಾರಿ ತಂಡವೊಂದರ ಅಗ್ರ ಕ್ರಮಾಂಕದ ಮೂವರು ಅರ್ಧ ಶತಕ ಗಳಿಸಿದರು. ಶತಕದಂಚಿನಲ್ಲಿಎಡವಿದ ಸ್ಯಾಮ್ಸನ್ : ಎಧಿರಡು ಮಹತ್ವದ ಜತೆಯಾಟಕ್ಕೆ ಸಾಕ್ಷಿಯಾದ ಸ್ಯಾಮ್ಸನ್ , ತಂಡದ ಬೃಹತ್ ಮೊತ್ತಕ್ಕೆ ನೆರವಾದರು. ಆದರೆ 89(46 ಎಸೆತ, 5 ಫೋರ್ , 8 ಸಿಕ್ಸರ್ ) ರನ್ ಗಳಿಗೆ ಔಟಾಗುವುದರೊಂದಿಗೆ ಈ ಬಾರಿಯೂ ಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡರು. ಆದಾಗ್ಯೂ ಇಶಾನ್ ಜತೆ 48 ಎಸೆತಗಳಲ್ಲಿ105 ರನ್ ಗಳ ಅಮೋಘ ಪಾಲುದಾರಿಕೆ ಆಟಕ್ಕೆ ಸಾಕ್ಷಿಯಾದರು. ಹಾಲಿ ಟೂರ್ನಿಯ ಆರಂಭದಲ್ಲಿನಿರೀಕ್ಷಿತ ಪ್ರದರ್ಶನ ನೀಡದ ಸ್ಯಾಮ್ಸನ್ , ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ವಿರುದ್ಧ ಕ್ರಮವಾಗಿ 97* ಮತ್ತು 89 ರನ್ ಗಳಿಸಿ ತಂಡದ ಬ್ಯಾಟಿಂಗ್ ಶಕ್ತಿಯಾಗಿ ಹೊರಹೊಮ್ಮಿದರು. ಆರಂಭಿಕರ ಅತ್ಯುತ್ತಮ ಆಟದ ಹೊರತಾಗಿಯೂ ಭಾರತ ತಂಡ ಡೆತ್ ಓವರ್ ಗಳಲ್ಲಿತಿಣುಕಾಡಿತು. ಮೊದಲ 15 ಓವರ್ ಗಳಲ್ಲಿ200 ರನ್ ಗಡಿ ದಾಟಿದ್ದ ಟೀಮ್ ಇಂಡಿಯಾ, ಡೆತ್ ಓವರ್ ಗಳಲ್ಲಿನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ಆದರೆ ಇನಿಂಗ್ಸ್ ನ ಕೊನೆಯ ಓವರ್ ನಲ್ಲಿಶಿವಂ ದುಬೆ(26*; 8 ಎಸೆತ, 3 ಫೋರ್ , 2 ಸಿಕ್ಸರ್ ) ಸಹಾಸದಿಂದ 255 ರನ್ ಗಳಿಸಿತು. ಇದು ಟಿ20 ವಿಶ್ವಕಪ್ ಫೈನಲ್ ನಲ್ಲಿತಂಡವೊಂದರ ಗರಿಷ್ಠ ಸ್ಕೋರ್ ಆಗಿದೆ.