ಬ್ರಹ್ಮಾನಂದ ಎ.ನಿಡಗುಂದಾ ಕಲಬುರಗಿ ಚಿh್ಟahಞa್ಞa್ಞd.a್ಟa್ಝಜಿಃಠಿಜಿಞಛಿsಟ್ಛಜ್ಞಿdಜಿa.್ಚಟಞ ನಿರೀಕ್ಷೆಯಂತೆಯೇ ಭಾರತೀಯ ಉದಯೋನ್ಮುಖ ಆಟಗಾರ್ತಿ ವೈಷ್ಣವಿ ಅಡ್ಕರ್ ಕಲಬುರಗಿ ಐಟಿಎಫ್ ಡಬ್ಲೂ35 ಟೆನಿಸ್ ಟೂರ್ನಿಯ ಚಾಂಪಿಯನ್ ಆಗಿ ಹೊರಮ್ಮಿದರು. ನಗರದಲ್ಲಿಭಾನುವಾರ ನಡೆದ ಫೈನಲ್ ಪಂದ್ಯದಲ್ಲಿಭಾರತೀಯ ಹಿರಿಯ ಆಟಗಾರ್ತಿ ಅಂಕಿತಾ ರೈನಾರನ್ನು ಹೋರಾಟದ ಪಂದ್ಯದಲ್ಲಿನೇರ ಸೆಟ್ ಗಳಿಂದ ಸೋಲಿಸುವ ಮೂಲಕ ಜೀವನದ ಮೊದಲ ಡಬ್ಲೂ35 ಟೆನಿಸ್ ಟೂರ್ನಿಯ ಪ್ರಶಸ್ತಿಗೆ ಮುತ್ತಿಕ್ಕಿದರು. ಜಿದ್ದಾ ಜಿದ್ದಿ ಹೋರಾಟ: ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿಭರ್ತಿಯಾಗಿದ್ದ ಸೆಂಟರ್ ಕೋಟ್ ನಲ್ಲಿನಡೆದ ಫೈನಲ್ ಪಂದ್ಯ ಕೊನೆಯ ಅಂಕದವರೆಗೆ ಇಬ್ಬರು ಆಟಗಾರರ ಹೋರಾಟ ಕಂಡು ಬಂತು. ಪಂದ್ಯದ ಆರಂಭದಿಂದಲೇ ಸಮನಾಗಿ ಹೋರಾಟ ನಡೆದಿತ್ತು. ಯುವ ವೈಷ್ಣವಿಯ ಬ್ಯಾಕ್ ಹ್ಯಾಂಡ್ ಗಳಿಗೆ, ಹಿರಿಯ ಆಟಗಾರ್ತಿ ಅಂಕಿತ ಕೂಡ ತಕ್ಕ ಮಾರುತ್ತರ ನೀಡಿದರು. ಸೆಟ್ 4-4ರಲ್ಲಿಸಮವಿದ್ದಾಗ ಒಂದು ಪಾಯಿಂಟ್ ನೀಡದೆ ಅಂಕಿತಾ ಗೇಮ್ ಗೆದ್ದುಕೊಂಡರು. 5-4ರಲ್ಲಿಹಿನ್ನಡೆ ಕಂಡಿದ್ದ ವೈಷ್ಣವಿ ನಂತರ ಸತತ ಎರಡು ಪಾಯಿಂಟ್ ಪಡೆದ ವೈಷ್ಣವಿ ಗೆಲುವಿನ ಹೊಸ್ತಿಲಲ್ಲಿದ್ದರು. ಮತ್ತೆ ತಿರುಗೇಟು ನೀಡಿದ ಅಂಕಿತ 6-6ರಲ್ಲಿಸಮ ಮಾಡಿಕೊಂಡು
ಸೆಟ್ ನ್ನು ಟೈಬ್ರೇಕರ್ ಗೆ ತಂದು ನಿಲ್ಲಿಸಿದರು. ಟೈ ಬ್ರೇಕರ್ ನಲ್ಲಿಬಿರುಸಿನ ಹೊಡೆತ
ಪ್ರದರ್ಶಿಸಿದ ವೈಷ್ಣವಿ ಅಂತಿಮವಾಗಿ 6(7)ಧಿ-6(3)ರಲ್ಲಿಸೆಟ್ ತಮ್ಮದಾಗಿಸಿಕೊಂಡರು. ಇನ್ನು ಎರಡನೇ ಸೆಟ್ ಕೂಡ ಆರಂಭದಿಂದಲೂ ಜಿದ್ದಾಜಿದ್ದಿನಿಂದ ಕೂಡಿತ್ತು. ತಲಾ ಒಂದೊಂದು ಗೇಮ್ ಗೆಲ್ಲುವ ಮೂಲಕ 3-3ರಲ್ಲಿಸಮನಾಗಿತ್ತು. ಈ ವೇಳೆ ವೈಷ್ಣವಿ ಸತತ ಎರಡು ಗೇಮ್ ಗೆದ್ದು ಮುನ್ನಡೆ ಸಾಧಿಸಿದ್ದು. ನಂತರ ಮತ್ತೊಂದು ಗೇಮ್ ಗೆದ್ದ ಅಂಕಿತಾ ತಿರುಗೇಟು ನೀಡುವ ಲಕ್ಷಣ ತೋರಿದರು. ಈ ವೇಳೆ ಬಿಸಿಲಿನಿಂದ ಬಳಲಿದ ಅಂಕಿತಾ ಮೆಡಿಕಲ್ ಸಹಾಯ ಪಡೆದು 15 ನಿಮಿಷಗಳ ನಂತರ ಕಣಕ್ಕಿಳಿದರು. ಮೊದಲ ಹಿನ್ನಡೆ ಹಾಗೂ ಬಿಸಿಲಿನ ಹೊಡೆತದಿಂದ ಬಳಲಿದ್ದ ಅಂಕಿತಾರನ್ನು ಅಂತಿಮವಾಗಿ ವೈಷ್ಣವಿ 6-4ರಿಂದ ಸೋಲಿಸುವ ಮೂಲಕ ಪ್ರಶಸ್ತಿಗೆ ಮುತ್ತಿಕ್ಕಿದರು. ಗೆದ್ದವರಿಗೆ 35 ಎಟಿಪಿ ಪಾಯಿಂಟ್ ಕಲಬುರಗಿ ಐಟಿಎಫ್ ಡಬ್ಲೂ35 ಟೆನಿಸ್ ಟೂರ್ನಿಯ ಚಾಂಪಿಯನ್ ವೈಷ್ಣವಿ ಅಡ್ಕರ್ ಗೆ ಅತ್ಯಮೂಲ್ಯ 35 ಎಟಿಪಿ ಪಾಯಿಂಟ್ಸ್ ಹಾಗೂ 4,860 ಯುಎಸ್ ಡಾಲರ್ ಹಾಗೂ ರನ್ನರ್ ಅಪ್ ಅಂಕಿತಾ ರೈನಾ ಅವರಿಗೆ 23 ಐಟಿಎಫ್ ಪಾಯಿಂಟ್ಸ್ ಹಾಗೂ 2,637 ಯುಎಸ್ ಡಾಲರ್ ಬಹುಮಾನವನ್ನು ಎಂಎಲ್ಸಿ ಶಶೀಲ್ ನಮೋಶಿ ವಿತರಣೆ ಮಾಡಿದರು. ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಸುನೀಲ್ ಯಜಮಾನ, ಕೈಗಾರಿಕಾ ಇಲಾಖೆ ಜಂಟಿ ಕಾರ್ಯದರ್ಶಿ ಅಬ್ದುಲ್ ಅಜೀಮ…, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಂಗಮೇಶ್ವರ, ಟೂರ್ನಿ ಸೂಪರ್ ವೈಸರ್ ಸುಪ್ರೀತ್ , ಕ್ರೀಡಾ ತರಬೇತುದಾರ ಸಂಜಯ್ ಬಾಣದ್ , ಪ್ರವೀಣ್ ಪುಣೆ ಮತ್ತಿತರರಿದ್ದರು.

