ವಯಸ್ಸು 40 ದಾಟಿದ ನಂತರ ಪುರುಷ ಹಾಗೂ ಮಹಿಳೆಯರಿಗೆ ಸ್ಟೆ್ರಂತ್ ಟ್ರೈನಿಂಗ್ ಬಹಳ ಮುಖ್ಯ. ಏಕೆಂದರೆ 40 ವರ್ಷ ದಾಟುತ್ತಿದ್ದಂತೆ ಮೆಟಬಾಲಿಸಂ (ಚಯಾಪಚಯ) ಕಡಿಮೆಯಾಗುತ್ತದೆ ಮತ್ತು ಸ್ನಾಯುಗಳು ಸವೆಯಲು ಪ್ರಾರಂಭಿಸುತ್ತವೆ. ಇದರಿಂದ ಎನರ್ಜಿ ಹಾಗೂ ಸ್ಟೆ್ರಂತ್ ಮತ್ತು ವೇಗ ಕೂಡ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಇದನ್ನು ಕೆಲವರು ವಯಸ್ಸಾಯಿತು ಎಂದು ಸಹಜವಾಗಿ ತೆಗೆದುಕೊಂಡು ದೇಹವನ್ನು ಸ್ವತಃ ವಯಸ್ಸಾಗುವುದಕ್ಕೆ ಬಿಟ್ಟುಬಿಡುತ್ತಾರೆ. ಹಾಗಾಗಿ ಮಸಲ್ ಲಾಸ್ ತಡೆಯಲು 30 ವರ್ಷದಿಂದಲೇ ವ್ಯಾಯಾಮ ಮಾಡಲು ಪ್ರಾರಂಭಿಸಬೇಕು. ವೃತ್ತಿಯಲ್ಲಿಎಷ್ಟೇ ಬಿಝಿ ಇದ್ದರೂ, ಕನಸುಗಳನ್ನು ಬೆನ್ನತ್ತುತ್ತಿದ್ದರೂ, ಮಕ್ಕಳು, ಸಂಸಾರದ ಜವಾಬ್ದಾರಿ ಇದ್ದರೂ ಒಂದು ಗಂಟೆ ವ್ಯಾಯಾಮಕ್ಕಾಗಿ ಮೀಸಲಿಡಬೇಕು. ವಾರದಲ್ಲಿ2ರಿಂದ 3 ಬಾರಿ ಫುಲ್ ಬಾಡಿ ಸ್ಟೆ್ರಂತ್ ಟ್ರೇನಿಂಗ್ ಮಾಡಿದರೆ ಸಾಕು. ಇದರಿಂದ ನಷ್ಟವಾಗುತ್ತಿರುವ ಮಾಂಸಖಂಡಗಳನ್ನು ಮರಳಿ ಪಡೆಯಬಹುದು. ಬೋನ್ ಡೆನ್ಸಿಟಿಯನ್ನು (ಮೂಳೆಗಳಲ್ಲಿರುವ ಕ್ಯಾಲ್ಷಿಯಂ ಮತ್ತು ಇತರ ಖನಿಜಗಳ ಸಾಂದ್ರತೆ)ಗಟ್ಟಿ ಪಡಿಸಿಕೊಳ್ಳಬಹುದು. ವಯಸ್ಸಾಗುತ್ತಿದ್ದರೆ ಬದಲಾಗುವ ದೇಹದ ಭಂಗಿಯನ್ನು ಸರಿಪಡಿಸಿಕೊಳ್ಳಬಹುದು. ಸ್ಟೆ್ರಂತ್ ಟ್ರೇನಿಂಗ್ ನಿಧಾನವಾಗಿ ಅಭ್ಯಾಸ ಮಾಡಿಕೊಳ್ಳಬೇಕು. ವಯಸ್ಸಾದಾಗ ಬರುವ ಮಂಡಿ ನೋವು, ಬೆನ್ನು ನೋವು, ಭುಜಗಳ ನೋವು ನಿವಾರಿಸಬೇಕಾದರೆ ಅಪ್ಪರ್ ಬಾಡಿ, ಲೋವರ್ ಬಾಡಿ, ಮಿಡ್ ಸೆಕ್ಷನ್ ವ್ಯಾಯಾಮಗಳನ್ನು ಮಾಡುವುದರಿಂದ ವಯಸ್ಸು ಸಂಬಂಧಿತ ತೂಕ ಏರಿಕೆಯನ್ನು ನಿಯಂತ್ರಿಸಬಹುದು. ತುಂಬಾ ಮಹಿಳೆಯರು ಸ್ಟೆ್ರಂತ್ ಟ್ರೇನಿಂಗ್ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಕಾರಣ ಬಾಡಿ ಬಿಲ್ಡರ್ ರೀತಿ ಆಗಿ ಬಿಡುತ್ತೇವೆ ಎಂದು. ಇದು ಸತ್ಯಕ್ಕೆ ದೂರವಾಗಿದೆ. ಸ್ಟೆ್ರಂತ್ ಟ್ರೇನಿಂಗ್ 40 ದಾಟಿದ ಪುರುಷ ಹಾಗೂ ಮಹಿಳೆಯರಿಗೆ ಅತ್ಯಗತ್ಯ. ವನಿತಾ ಅಶೋಕ್
ಫಿಟ್ ಇಂಡಿಯಾ ರಾಯಭಾರಿ

