Ricky Martin And Falguni Pathak Steal The Show At T20 World Cup Final Pre event
ಸಮಾರೋಪÜದಲ್ಲಿರಿಕಿ ಮಾರ್ಟಿನ್ , ಫಾಲ್ಗುಣಿ ಸಂಗೀತ ರಸದೌತಣ
Contributed by: Harsha Vardhana|Vijaya Karnataka•
ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸಮಾರಂಭದಲ್ಲಿ ರಿಕಿ ಮಾರ್ಟಿನ್, ಫಾಲ್ಗುಣಿ ಪಾಠಕ್ ಸಂಗೀತ ಕಾರ್ಯಕ್ರಮ ನೀಡಿದರು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗುಜರಾತ್ ಮೂಲದ ಫಾಲ್ಗುಣಿ ಪಾಠಕ್, ಪಂಜಾಬಿ ಗಾಯಕ ಸುಖ್‌ಬೀರ್ ಸಿಂಗ್ ಮತ್ತು ಅಂತಾರಾಷ್ಟ್ರೀಯ ತಾರೆ ರಿಕಿ ಮಾರ್ಟಿನ್ ಪ್ರೇಕ್ಷಕರನ್ನು ರಂಜಿಸಿದರು. ರಿಕಿ ಮಾರ್ಟಿನ್ ಪ್ರದರ್ಶನದ ವೇಳೆ ಧ್ವನಿವರ್ಧಕದಲ್ಲಿ ತಾಂತ್ರಿಕ ದೋಷ ಉಂಟಾಯಿತು.
ಅಹಮದಾಬಾದ್: ಟಿ20 ವಿಶ್ವಕಪ್ ಫೈನಲ್ ಪಂದ್ಯದ ಉದ್ಘಾಟನಾ ಸಮಾರಂಭದಲ್ಲಿ ಅಂತರಾಷ್ಟ್ರೀಯ ಪಾಪ್ ತಾರೆ ರಿಕಿ ಮಾರ್ಟಿನ್ , ಹಾಗೂ ದೇಶಿ ತಾರೆಯರಾದ ಸುಖ್‌ಬೀರ್ ಸಿಂಗ್ ಮತ್ತು ಫಾಲ್ಗುಣಿ ಪಾಠಕ್ ತಮ್ಮ ಸಂಗೀತ ಮತ್ತು ನೃತ್ಯ ಪ್ರದರ್ಶನಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಿಕಿ ಮಾರ್ಟಿನ್ ಪ್ರದರ್ಶನದ ವೇಳೆ ಧ್ವನಿವರ್ಧಕದಲ್ಲಿ ತಾಂತ್ರಿಕ ದೋಷ ಉಂಟಾಗಿ ಅಭಿಮಾನಿಗಳು ಅಸಮಾಧಾನಗೊಂಡರು.
ಭಾನುವಾರ ಸಂಜೆ 5:30ಕ್ಕೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮನರಂಜನಾ ಕಾರ್ಯಕ್ರಮ ಆರಂಭವಾಯಿತು. ಮೊದಲು ಗುಜರಾತ್ ಮೂಲದ ಫಾಲ್ಗುಣಿ ಪಾಠಕ್ ತಮ್ಮ ಸಂಗೀತದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದರು. ನಂತರ ಪಂಜಾಬಿ ಗಾಯಕ ಸುಖ್‌ಬೀರ್ ಸಿಂಗ್ ಮತ್ತು ಅಂತರಾಷ್ಟ್ರೀಯ ತಾರೆ ರಿಕಿ ಮಾರ್ಟಿನ್ ತಮ್ಮ ಹಾಡು ಮತ್ತು ನೃತ್ಯ ಪ್ರದರ್ಶನಗಳಿಂದ ಮಹತ್ವದ ಪಂದ್ಯದ ಕಳೆ ಹೆಚ್ಚಿಸಿದರು. ಆದರೆ, ರಿಕಿ ಮಾರ್ಟಿನ್ ಪ್ರದರ್ಶನದ ವೇಳೆ ಧ್ವನಿವರ್ಧಕದಲ್ಲಿ ತಾಂತ್ರಿಕ ಸಮಸ್ಯೆಯೊಂದು ಎದುರಾಯಿತು. ಇದರಿಂದಾಗಿ ಅಭಿಮಾನಿಗಳು ಸಿಟ್ಟಿಗೆ ಕಾರಣವಾಯಿತು. ಈ ಕಾರ್ಯಕ್ರಮವು ಫೈನಲ್ ಪಂದ್ಯದ ರೋಚಕತೆಗೆ ಮತ್ತಷ್ಟು ಮೆರಗು ನೀಡಿತು.