ಅಹಮದಾಬಾದ್ : ದಾಖಲೆಯ ಮೂರನೇ ಬಾರಿ ಟಿ20 ವಿಶ್ವಕಪ್ ಗೆಲ್ಲುವುದರೊಂದಿಗೆ ಭಾರತ ತಂಡ ಚುಟುಕು ಮಾದರಿಯಲ್ಲಿತನ್ನ ಸಾರ್ವಭೌಮತೆಯನ್ನು ಮುಂದುವರಿಸಿದೆ. ಇಪ್ಪತ್ತು ತಂಡಗಳನ್ನು ಒಳಗೊಂಡಿದ್ದ ಹತ್ತನೇ ಆವೃತ್ತಿಯಲ್ಲಿ ಸಹ ಆತಿಥ್ಯ ರಾಷ್ಟ್ರ ಭಾರತ ತಂಡ ಪ್ರಶಸ್ತಿ ಉಳಿಸಿಕೊಳ್ಳುವುದರ ಮೂಲಕ ಇತಿಹಾಸ ಬರೆದಿದೆ.
ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮ ನಂತರ ಸೂರ್ಯಕುಮಾರ್ ಯಾದವ್ ಭಾರತ ತಂಡಕ್ಕೆ ಮೂರನೇ ಟ್ರೋಫಿ ತಂದುಕೊಡುವಲ್ಲಿಯಶಸ್ವಿಯಾದರು. ಹಾಲಿ ಟೂರ್ನಿಯಲ್ಲಿವೈಯಕ್ತಿಕವಾಗಿ ಹೆಚ್ಚಿನ ಸಾಧನೆ ಮಾಡದಿದ್ದರೂ ತಂಡವನ್ನು ಪ್ರಶಸ್ತಿಯೆಡೆಗೆ ಮುನ್ನಡೆಸುವ ಮೂಲಕ ಸೂರ್ಯಕುಮಾರ್ ಯಾದವ್ ದಾಖಲೆ ಪುಟ ಸೇರಿದ್ದಾರೆ. ಕಳೆದ ಆರು ತಿಂಗಳಲ್ಲಿತಂಡದ ಏರಿಳಿತದಿಂದಾಗಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಪ್ರಧಾನ ಕೋಚ್ ಗೌತಮ್ ಗಂಭೀರ್ , ತಂಡದ ಸಾಧನೆಯಿಂದ ಟೀಕಾಕಾರಕ ಬಾಯಿ ಮುಚ್ಚಿಸಿದ್ದಾರೆ.
ಪ್ರಶಸ್ತಿ ಫೇವರಿಟ್ ತಂಡವಾಗಿ ಕಣಕ್ಕಿಳಿದ ಭಾರತ ಗುಂಪು ಹಂತದಲ್ಲಿಆಡಿದ ಎಲ್ಲಾನಾಲ್ಕು ಪಂದ್ಯಗಳಲ್ಲಿಜಯ ಗಳಿಸಿತು. ನಂತರ ಸೂಪರ್ 8 ಹಂತದಲ್ಲಿದಕ್ಷಿಣ ಆಫ್ರಿಕಾ ವಿರುದ್ಧ ಸೋಲನುಭವಿಸಿದ್ದ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಗುಂಪಿನ ಎರಡನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತ್ತು. ಉಪಾಂತ್ಯದಲ್ಲಿಇಂಗ್ಲೆಂಡ್ ತಂಡದ ದಿಟ್ಟ ಪ್ರತಿರೋಧವನ್ನು ಮೆಟ್ಟಿನಿಂತ ಭಾರತ 6ನೇ ಬಾರಿ ಫೈನಲ್ ಪ್ರವೇಶಿಸಿತ್ತು.
ಜಗತ್ತಿನ ಹಲವು ಪ್ರದೇಶಗಳಲ್ಲಿಯುದ್ಧೋನ್ಮಾನದಿಂದ ಲಕ್ಷಾಂತರ ಜನರು ನಲುಗುತ್ತಿದ್ದಾರೆ. ಈ ಹೊತ್ತಿನಲ್ಲಿಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿಯಶಸ್ವಿಯಾಗಿ ನಡೆದ ಜಾಗತಿಕ ಐಸಿಸಿ ಟಿ20 ಕ್ರಿಕೆಟ್ ಟೂರ್ನಿ ಯುದ್ಧದ ರಾಷ್ಟ್ರಗಳಲ್ಲಿಶಾಂತಿಯ ಚಿಲುಮೆಯಾಗಲಿ

