8ಎಸ್ .ಜಿ.ಎನ್ .2
* ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಜತ ಮಹೋತ್ಸವ
ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅಭಿಪ್ರಾಯ
ಶೈಕ್ಷಣಿಕ ಅಭಿವೃದ್ಧಿಗೆ ಗುರುವಿನ ಮಾರ್ಗದರ್ಶನ ಅವಶ್ಯ
ವಿಕ ಸುದ್ದಿಲೋಕ ಶಿಗ್ಗಾವಿ
ಗುರುವಿನ ಮಾರ್ಗದರ್ಶನ, ಪೋಷಕರ ಪ್ರೀತಿ ವಾತ್ಸಲ್ಯದಿಂದ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಸ್ಪೂರ್ತಿಯಾಗಲಿದೆ. ಕೌಶಲ್ಯ ಮತ್ತು ಅತ್ಮವಿಶ್ವಾಸ ವೃದ್ಧಿಗೊಳ್ಳುತ್ತದೆ ಎಂದು ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅಭಿಪ್ರಾಯಪಟ್ಟರು.
ತಾಲೂಕಿನ ಯತ್ತಿನಹಳ್ಳಿದಲ್ಲಿ(ತಾಂಡಾ) ಶನಿವಾರ ಆಯೋಜಿಸಿದ್ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿಶಿಕ್ಷಣದಿಂದ ಅತ್ಯುನ್ನುತ ಸ್ಥಾನ ತಮ್ಮದಾಗಿಸಿಕೊಳ್ಳಲು ಮಕ್ಕಳಲ್ಲಿಸ್ವಯಂ ಪ್ರಯತ್ನದ ಓದು ಜತೆಗೆ ಉತ್ತಮ ನಡವಳಿಕೆ ಮೈಗೂಡಿಸಿಕೊಂಡು ಅಕ್ಷರ ಕಲಿಸಿದ ಶಿಕ್ಷಕರಿಗೆ ಮತ್ತು ಪೋಷಕರಿಗೆ ಗೌರವ ತರುವ ಕೆಲಸ ಮಾಡಬೇಕು ಎಂದರು.
ಉಪಚುನಾವಣೆಯಲ್ಲಿಕೊಟ್ಟ ಭರವಸೆಯಂತೆ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ. ಶಿಕ್ಷಣ ಮತ್ತು ಜ್ಞಾನಕ್ಕೆ ಬೆಲೆ ಇದೆ. ಮಕ್ಕಳು ಶಿಕ್ಷಣವಂತರಾದರೇ ಮಾತ್ರ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದರು.
ಶಾಸಕ ಯಾಸೀರಖಾನ್ ಪಠಾಣ ರಜತ ರತ್ನ ಹಸ್ತಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಬಂಜಾರ ಸಮಾಜ ಶ್ರಮಿಕ ಸಮಾಜ. ಪ್ರತಿಯೊಬ್ಬರ ಬದುಕಿನ ನಿರ್ವಹಣೆಗೆ ಶಿಕ್ಷಣ ಅವಶ್ಯವಾಗಿದೆ. ಕ್ಷೇತ್ರದಲ್ಲಿಗುಣಮಟ್ಟದ ಶಿಕ್ಷಣಕ್ಕಾಗಿ ಕೆಪಿಎಸ್ ಸಿ ಶಾಲೆಗಳನ್ನು ತೆರೆಯಲಾಗುತ್ತಿದೆ. ಶಿಕ್ಷಣದಿಂದ ಯಾರು ವಂಚಿತರಾಗಬಾರದು. ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲ ಸೌಲಭ್ಯಗಳಿಗೆ ಒತ್ತು ನೀಡಿದ್ದೇನೆ. ಮೊದಲು ಹಂತವಾಗಿ ಕ್ಷೇತ್ರದ 400 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ ಎಂದರು.
ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಅಕ್ಷರದ ಗೌಡ್ರು ಎಂದು ಕರೆಯಲಾಗುವ ಅರಟಾಳ ರುದ್ರಗೌಡ್ರ ಕ್ಷೇತ್ರದಲ್ಲಿಮಕ್ಕಳು ಶಿಕ್ಷಣವಂತರಾದರೇ ಮಾತ್ರ ಬಡತನ ನಿರ್ಮೂಲನೆ ಸಾಧ್ಯ ಎಂದರು.
ಬಂಜಾರ ಗುರುಪೀಠದ ತಿಪ್ಪೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬಿಇಒ ಎಂ.ಬಿ.ಅಂಬಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಜೀವಕುಮಾರ ನೀರಲಗಿ, ಗುಡ್ಡಪ್ಪ ಜಲದಿ, ಎಸ್ .ಎಫ್ .ಮಣಕಟ್ಟಿ, ನವೀನ ಪಾಟೀಲ, ಮೋಹನ ದಂಡಿನ, ಎನ್ .ಎಂ.ಮೂದೂರ, ಶಂಕರಗೌಡ್ರ ಪಾಟೀಲ, ಹರ್ಜಪ್ಪ ಲಮಾಣಿ, ಅಣ್ಣಪ್ಪ ಲಮಾಣಿ, ರಾಜೇಶ್ವರಿ ಲಮಾಣಿ, ಭಾರತಿ ಛಬ್ಬಿ, ಸೋಮಶೇಖರ ನಾಯಕ, ಮಂಜುನಾಥ ತಿಮ್ಮಾಪುರ, ಬಾಬರ ಭೋವಾಜಿ, ಗೌಸಖಾನ್ ಮುನಶಿ, ಚಂದ್ರು ಹೆಬ್ಬಾಳ, ನಾಗಪ್ಪ ಲಮಾಣಿ, ಶಿಕ್ಷಕರು, ಪಾಲಕರು, ಶಿಕ್ಷಣ ಪ್ರೇಮಿಗಳು ಇದ್ದರು.
ಹನುಮಂತ ಲಮಾಣಿ ಪ್ರಸ್ತುತಪಡಿಸಿದ ಹಾಡುಗಳು ಗಮನ ಸೆಳೆದವು. ಇದಕ್ಕೂ ಪೂರ್ವದಲ್ಲಿವಿದ್ಯಾರ್ಥಿಗಳಿಂದ ಸರಸ್ವತಿ ಪೂಜೆ, ತಂದೆ-ತಾಯಂದಿಯರಿಗೆ ಪಾದಪೂಜೆ ನಡೆಯಿತು.
ಪೋಟೋ : 8 ಎಸ್ .ಜಿ.ಎನ್ 2
ಶಿಗ್ಗಾವಿ ತಾಲೂಕಿನ ಯತ್ತಿನಹಳ್ಳಿದಲ್ಲಿ(ತಾಂಡಾ) ಆಯೋಜಿಸಿದ್ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಲಾ ರಜತ ಮಹೋತ್ಸವ ಕಾರ್ಯಕ್ರಮವನ್ನು ವಿಧಾನ ಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಉದ್ಘಾಟಿಸಿದರು.

