‘ಕನ್ನಡಿಗರ ರಕ್ಷಣೆಗೆ ಕೇಂದ್ರ ಮುಂದಾಗಲಿ’

Contributed bypressannappa.appu321@gmail.com|Vijaya Karnataka

Minister Satish Jarkiholi demanded immediate central government intervention for Kannadigas stranded in Dubai amidst the Iran-Israel conflict. He also urged the Congress high command to swiftly resolve the ongoing Chief Minister's chair dispute. The minister assured that efforts are underway to bring the stranded individuals back home safely.

centre must step in to protect kannadigas satish jarkiholi urges the high command to intervene in the cm post row

ಕಿಕ್ಕರ್ : ಸಚಿವ ಸತೀಶ ಜಾರಕಿಹೊಳಿ ಒತ್ತಾಯ | ಸಿಎಂ ಕುರ್ಚಿ ಗೊಂದಲ ಹೈಕಮಾಂಡ್ ಇತ್ಯರ್ಥ ಪಡಿಸಲಿ

---

‘ಕನ್ನಡಿಗರ ರಕ್ಷಣೆಗೆ ಕೇಂದ್ರ ಮುಂದಾಗಲಿ’

ವಿಕ ಸುದ್ದಿಲೋಕ ಬೆಳ್ಳೂಡಿ (ದಾವಣಗೆರೆ)

ಇರಾನ್ -ಇಸ್ರೆಲ್ ಯುದ್ಧದ ಪರಿಣಾಮ ದುಬೈನಲ್ಲಿಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗೆ ಕೇಂದ್ರ ಸರಕಾರ ತಕ್ಷಣವೇ ಮುಂದಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಒತ್ತಾಯಿಸಿದರು.

ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದ ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ ಸೋಮವಾರ ಭೇಟಿ ನೀಡಿ, ಗುರುಪೀಠದ ಡಾ.ಪ್ರಸನ್ನಾನಂದ ಸ್ವಾಮೀಜಿ ಯೋಗ ಕ್ಷೇಮ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘‘ಯುದ್ಧ ಪ್ರಾರಂಭಕ್ಕೂ ಮುಂಚಿತವಾಗಿಯೇ ಕನ್ನಡಿಗರಿಗೆ ದೇಶ ಬಿಟ್ಟು ತೆರಳುವಂತೆ ತಿಳಿಸಿದ್ದರೆ ಹೀಗಾಗುತ್ತಿರಲಿಲ್ಲ. ವಿಮಾನ ಸಂಚಾರ ಪ್ರಾರಂಭವಾಗುವವರೆಗೂ ಕನ್ನಡಿಗರು ತಾವಿರುವ ಸ್ಥಳಗಳಲ್ಲಿಸುರಕ್ಷಿತವಾಗಿರಬೇಕು. ಸಂದಿಗ್ಧ ಪರಿಸ್ಥಿತಿಯಲ್ಲಿಸಿಲುಕಿರುವ ಕನ್ನಡಿಗರು ಯಾವುದೇ ಕಾರಣಕ್ಕೂ ದೃತಿಗೇಡಬಾರದು. ಸರಕಾರ ನಿಮ್ಮ ಪರವಾಗಿದ್ದು, ನಿಮ್ಮನ್ನು ವಾಪಸ್ ದೇಶಕ್ಕೆ, ರಾಜ್ಯಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ’’ ಎಂದು ಅಭಯ ನೀಡಿದರು.

ಹೈಕಮಾಂಡ್ ಮುಂದಾಗಲಿ:

‘‘ಹೈಕಮಾಂಡ್ ತಕ್ಷಣವೆ ಮಧ್ಯ ಪ್ರವೇಶಿಸಿ ಆದಷ್ಟು ಬೇಗ ಸಿಎಂ ಕುರ್ಚಿ ಗೊಂದಲ ಬಗೆಹರಿಸಬೇಕು. ನಮ್ಮ ಪಕ್ಷದ ಉಸ್ತುವಾರಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಿಎಂ, ಡಿಸಿಎಂ ಜೊತೆ ಸಭೆ ನಡೆಸಿದ್ದಾರೆ. ಆದಷ್ಟು ಬೇಗ ಸಮಸ್ಯೆ ಇತ್ಯರ್ಥವಾಗಬೇಕು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸದ್ಯಕ್ಕಿಲ್ಲ, ಸಿಎಂ ಕುರ್ಚಿ ಸಮಸ್ಯೆ ರಾಜ್ಯ ಬಜೆಟ್ ಒಳಗಾಗಿ ಆಗುತ್ತದೆಯೋ ಅಥವಾ ಬಜೆಟ್ ಆದ್ಮೇಲೆ ಮಾಡ್ತಾರೋ ಗೊತ್ತಿಲ್ಲ’’ ಎಂದರು.

ಈ ವೇಳೆ ಮಠದ ಧರ್ಮದರ್ಶಿ ಕೆ.ಬಿ. ಮಂಜುನಾಥ್ , ಟಿ.ಈಶ್ವರ, ಎ.ಬಿ. ರಾಮಚಂದ್ರ, ಹೊದಿಗೆರೆ ರಮೇಶ್ , ನಂದಿಗಾವಿ ಶ್ರೀನಿವಾಸ್ , ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.

---

ಬಾಕ್ಸ್ ...

ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಟೆಂಡರ್

‘ಮಾ.6ರಂದು ನಡೆಯುವ ಬಜೆಟ್ ನಲ್ಲಿನಾವು ಯೋಜನೆಗಳ ಬಗ್ಗೆ ಪಟ್ಟಿ ಕೊಟ್ಟಿದ್ದೇವೆ. ರಾಜ್ಯ ಹೆದ್ದಾರಿಗಳ ದುರಸ್ತಿ, ನಿರ್ವಹಣೆ, ಪಿಪಿಪಿ ಮಾಡೆಲ್ ಗೆ ಟೆಂಡರ್ ಕರೆದಿದ್ದೇವೆ. ಮರಿಯಮ್ಮನಹಳ್ಳಿ - ಶಿವಮೊಗ್ಗ ರಾಜ್ಯ ಹೆದ್ದಾರಿ ಸೇರಿ ನಾಲ್ಕು ಕಡೆ ಟೆಂಡರ್ ಕರೆಯಲಾಗಿದೆ’ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

----

ಒಳಮೀಸಲು ಜಾರಿಗೆ ಅಡ್ಡಿ

‘ಒಳಮೀಸಲಾತಿ ಜಾರಿ ಮಾಡಿ ಹುದ್ದೆಗಳ ನೇಮಕಕ್ಕೆ ಆಗ್ರಹ ವಿಚಾರ ಕೋರ್ಟ್ ನಲ್ಲಿತಡೆಯಾಜ್ಞೆ ಇದೆ. ಅದು ಕೋರ್ಟ್ ನಲ್ಲಿಇತ್ಯರ್ಥ ಆಗದೇ ಏನೂ ಮಾಡೋಕೆ ಆಗಲ್ಲ. 9ನೇ ಶೆಡ್ಯೂಲ್ ಗೆ ಸೇರ್ಪಡೆ ಮಾಡಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು. 15-3 ಯಥಾಸ್ಥಿತಿ ಅದನ್ನೇ ಮುಂದುವರಿಸುತ್ತೇವೆ. 42 ಸಾವಿರ ಹುದ್ದೆಗಳ ನೋಟಿಫಿಕೇಷನ್ ಬಾಕಿ ಇದ್ದು, ಜಾಸ್ತಿ ಕಾಯುವುದರಲ್ಲಿಅರ್ಥ ಇಲ್ಲಅಂತಾ ಹಳೆಯದ್ದನ್ನೇ ಯಥಾಸ್ಥಿತಿ ಮುಂದುವರಿಸಿದ್ದೇವೆ’ ಎಂದು ಸಚಿವ ಜಾರಕಿಹೊಳಿ ಹೇಳಿದರು.

-----

2 ಹೆಚ್ .ಆರ್ .ಆರ್ 1

ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠಕ್ಕೆ ಸೋಮವಾರ ಭೇಟಿ ನೀಡಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿದರು.