-ಈ ಬಜೆಟ್ ನಲ್ಲಿ ಸಿಗಲಿದೆಯೇ ಕಲ್ಪತರು ನಾಡಿಗೆ ಬಂಪರ್ ಕೊಡುಗೆ
-ತೆಂಗು ಬೆಳೆಗಾರರ ಸಂಕಷ್ಟಕ್ಕೆ ಸಂಜೀವಿನಿ ಆಗುವರೇ ಸಿದ್ದರಾಮಯ್ಯ
ಶಶಿಧರ್ ಎಸ್ .ದೋಣಿಹಕ್ಲುತುಮಕೂರು
shashಜಿda್ಟa.dsಃಠಿಜಿಞಛಿsಟ್ಛಜ್ಞಿdಜಿa.್ಚಟಞ
ರಾಜ್ಯ ಬಜೆಟ್ ನಲ್ಲಿಬೆಂಗಳೂರಿನ ಉಪನಗರಿ ತುಮಕೂರು ಅಭಿವೃದ್ಧಿಗೆ ಹೊಸ ಯೋಜನೆಗಳ ನಿರೀಕ್ಷೆಯಿದೆ. ಯುಗಾದಿ ಹೊಸ್ತಿಲಲ್ಲಿಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯದಲ್ಲಿತುಮಕೂರಿಗೆ ಹೊಸ ಯೋಜನೆಗಳನ್ನು ಘೋಷಿಸುವ ಭರವಸೆಯಿದೆ. ಅವುಗಳ ಪೈಕಿ ಬಹುಕಾಲದ ಬೇಡಿಕೆ ತೆಂಗು ಪಾರ್ಕ್ ಮೊದಲ ಸ್ಥಾನದಲ್ಲಿದೆ.
ಅತೀ ಹೆಚ್ಚು ತೆಂಗು ಬೆಳೆಯುವ ತುಮಕೂರು ಜಿಲ್ಲೆಯಲ್ಲಿತೆಂಗು ಪಾರ್ಕ್ ನಿರ್ಮಿಸಿ ಮೌಲ್ಯವರ್ಧನೆ, ಉತ್ತಮ ಮಾರುಕಟ್ಟೆ, ಸಂಶೋಧನೆ ಒಳಗೊಂಡಂತೆ ಒಂದೇ ಸೂರಲ್ಲಿ‘ಸಮಗ್ರ ತೆಂಗು ಅಭಿವೃದ್ಧಿ’ಗೆ ಉತ್ತೇಜನದ ಒತ್ತಾಸೆಯಿದೆ. ಇದರಿಂದ ರಫ್ತಿಗೆ ಉತ್ತೇಜನ, ಉದ್ಯೋಗ ಸೃಷ್ಟಿಗೂ ದಾರಿ ತೆರೆಯಲಿದೆ.
ಜಿಲ್ಲೆಯಲ್ಲಿ ಈ ಹಿಂದೆ 2.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿತೆಂಗು ವಿಸ್ತರಣೆಯಾಗಿತ್ತು. ಆದರೆ ರೋಗಬಾಧೆ, ಇಳುವರಿ ಕುಂಠಿತದಿಂದ 1.76 ಲಕ್ಷ ಹೆಕ್ಟೇರ್ ಗೆ ಕುಸಿದಿದ್ದು, ಉತ್ತೇಜನದ ಅಗತ್ಯವಿದೆ. ತೆಂಗು ಪಾರ್ಕ್ ಘೋಷಿಸಿದರೆ, ಈ ಎಲ್ಲದಕ್ಕೂ ಬಲ ಸಿಗಲಿದೆ ಎಂಬ ವಿಶ್ವಾಸ ತೆಂಗು ಬೆಳೆಗಾರರದ್ದು.
ತೆಂಗು ಪಾರ್ಕ್ ವಿಶೇಷತೆ:
ತೆಂಗು ಸಂಸ್ಕರಣೆ ಘಟಕ , ಕೊಬ್ಬರಿ ಮತ್ತು ತೆಂಗಿನ ಎಣ್ಣಿನ ಉತ್ಪಾದನಾ ಘಟಕ, ತೆಂಗಿನ ಚಿಪ್ಪು, ನಾರು ಉತ್ಪನ್ನಗಳಿಗೆ ಪ್ರೋತ್ಸಾಹ, ಕೋಲ್ಡ್ ಸ್ಟೋರೇಜ್ ನಿರ್ಮಾಣ, ರೈತರಿಗೆ ತರಬೇತಿ ಕೇಂದ್ರ ಒಳಗೊಂಡ ಸಮಗ್ರ ಕೇಂದ್ರವೇ ‘ತೆಂಗು ಪಾರ್ಕ್’
ಇದರಿಂದ ಮಾರುಕಟ್ಟೆ ಸಂಪರ್ಕ ವ್ಯವಸ್ಥೆ ಅಭಿವೃದ್ಧಿಯಾಗುತ್ತದೆ. ರೈತರು ಒಂದೇ ಸ್ಥಳದಲ್ಲಿಎಲ್ಲಾಸೇವೆಗಳನ್ನು ಪಡೆಯಲು ಸಾಧ್ಯವಾಗುವುದರಿಂದ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಬೀಳಲಿದೆ ಎಂಬುದು ತಜ್ಞರ ಅಭಿಪ್ರಾಯ.
ಬಾಕ್ಸ್
ಏನಿದು ತೆಂಗು ಪಾರ್ಕ್ ?
ತೆಂಗಿನ ಉತ್ಪನ್ನಗಳ ಸಂಸ್ಕರಣೆ, ಸಂಗ್ರಹಣೆ, ಮೌಲ್ಯವರ್ಧನೆ, ಮಾರುಕಟ್ಟೆ, ಸಂಶೋಧನಾ ಅವಕಾಶವನ್ನು ಒಂದೇ ಸ್ಥಳದಲ್ಲಿಒದಗಿಸುವ ಕೈಗಾರಿಕಾ ಕೇಂದ್ರ. ಇದರಿಂದ ರೈತರು ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಸಿಗುತ್ತದೆ.
ಬಾಕ್ಸ್
ನಾರಿಯಲ್ ಸಂವರ್ಧನ್ ಗೆ ಬೆಂಬಲ :
ಕೇಂದ್ರ ಬಜೆಟ್ ನಲ್ಲಿನಾರಿಯಲ್ ಸಂವರ್ಧನ್ ಯೋಜನೆ ಘೋಷಿಸಿದ್ದು, ತೆಂಗು ತೋಟಗಳ ಪುನಶ್ಚೇತನದ ಭರವಸೆ ಸಿಕ್ಕಿದೆ. ಈ ಯೋಜನೆಗೆ ಬೆಂಬಲವಾಗಿ ರಾಜ್ಯ ಸರಕಾರ ತೆಂಗು ಪಾರ್ಕ್ ನೀಡಿದರೆ ತೆಂಗು ಬೆಳೆಗಾರರಿಗೆ ಜೀವನಪರ್ಯಂತ ಸುಗ್ಗಿ ಎಂದು ವಿಶ್ಲೇಷಿಸಲಾಗುತ್ತಿದೆ. ಜತೆಗೆ ಮೇಕ್ ಇನ್ ಇಂಡಿಯಾ, ಒಡಿಒಪಿ, ಪಿಎಂಎಫ್ ಇ ಸೇರಿದಂತೆ ಸ್ಟಾರ್ಟ್ ಅಪ್ ಯೋಜನೆಗಳು, ಮೌಲ್ಯವರ್ಧನೆ ಉತ್ತೇಜನ ಕಾರ್ಯಕ್ರಮಗಳಿಗೆ ಬಲ ಸಿಗುತ್ತದೆ.
ರೋಗ ಸಂತ್ರಸ್ತ ತೆಂಗಿನ ವಿವರ
ಜಿಲ್ಲೆ ರೋಗಬಾಧಿತ ಮರಗಳ ಸಂಖ್ಯೆ
ಹಾಸನ 12,88,179
ಮೈಸೂರು 6,20,776
ಮಂಡ್ಯ 5,14,156
ತುಮಕೂರು 4,09,440
ಚಿಕ್ಕಮಗಳೂರು 3,94,014
ಚಿತ್ರದುರ್ಗ 2,26,418
*ತೋಟಗಾರಿಕೆ ಇಲಾಖೆಯ ಅಂಕಿ-ಅಂಶ
*ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿಲಕ್ಷಾಂತರ ತೆಂಗಿನ ಮರಗಳು ರೋಗಬಾಧಿತವಾಗಿವೆ
ಕೋಟ್ :
ತುಮಕೂರಲ್ಲಿತೆಂಗು ಪಾರ್ಕ್ ನಿರ್ಮಾಣ ಆಗಬೇಕು. ಇದರಿಂದ ತೆಂಗು ಮೌಲ್ಯವರ್ಧನೆ, ಸಂಶೋಧನೆ, ಮಾರುಕಟ್ಟೆ ವಿಸ್ತರಣೆ ಸಾಧ್ಯವಾಗುತ್ತದೆ. ವಸಂತನರಸರಾಪುರ ಕೈಗಾರಿಕಾ ಪ್ರದೇಶದಲ್ಲೂಪಾರ್ಕ್ ನಿರ್ಮಿಸಬಹುದು. ವಸಂತನರಸಾಪುರದಲ್ಲಿನಿರ್ಮಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿಪ್ರಚಾರ, ಆದ್ಯತೆ ಸಿಗುತ್ತದೆ. ತೆಂಗು ಉತ್ತೇಜನ ಕಾರ್ಯಕ್ರಮಗಳಿಗೆ, ಯೋಜನೆಗಳಿಗೆ ಬಲವಾಗುತ್ತದೆ.
- ಎನ್ .ಆರ್ .ಜಯಕುಮಾರ್ , ಅಧ್ಯಕ್ಷ, ತೆಂಗು ಮತ್ತು ಅಡಕೆ ಬೆಳೆಗಾರರ ಸಂಘ
ಫೋಟೋ 27ಟಿಯುಎಂ13 : ಎನ್ .ಆರ್ .ಜಯಕುಮಾರ್ , ಅಧ್ಯಕ್ಷ, ತೆಂಗು ಮತ್ತು ಅಡಕೆ ಬೆಳೆಗಾರರ ಸಂಘ
ತೆಂಗು ಅಷ್ಟೇ ಅಲ್ಲ: ಹೊಸ ಸಾಧ್ಯತೆಗಳು
ನಾರು ಮತ್ತು ಚಿಪ್ಪು ಗೃಹೋಪಯೋಗಿ ವಸ್ತುಗಳ ತಯಾರಿಕೆಗೆ ಕಚ್ಚಾ ವಸ್ತು.
ಎಳನೀರು ಕೆಫೆ ಆಧುನಿಕ ಶೈಲಿಯ ಎಳನೀರು ಪಾನೀಯಗಳ ಮಾರುಕಟ್ಟೆ.
ಸಿಹಿ ನೀರಾ ತೆಂಗಿನಿಂದ ತಯಾರಾಗುವ ನೈಸರ್ಗಿಕ ಪಾನೀಯಕ್ಕೆ ಉತ್ತೇಜನ.
ರೈತರಿಗೆ ಸಿಗುವ ಲಾಭಗಳು
ಮೌಲ್ಯವರ್ಧನೆ ನೇರ ಕಾಯಿ ಮಾರಾಟಕ್ಕಿಂತ ಉತ್ಪನ್ನಗಳ ಮೂಲಕ ಹೆಚ್ಚಿನ ಲಾಭ.
ಸ್ಥಿರ ಬೆಲೆ ಮಾರುಕಟ್ಟೆಯ ಏರಿಳಿತದ ನಡುವೆಯೂ ಕೊಬ್ಬರಿಗೆ ಸ್ಥಿರ ಬೆಲೆ ಲಭ್ಯ.
ಮಧ್ಯವರ್ತಿಗಳ ಮುಕ್ತಿ ರೈತರು ನೇರವಾಗಿ ಮಾರುಕಟ್ಟೆ ಸಂಪರ್ಕ ಪಡೆಯುವುದರಿಂದ ಕಮಿಷನ್ ಏಜೆಂಟ್ ಗಳ ಕಾಟ ತಪ್ಪಲಿದೆ.
ಉದ್ಯೋಗ ಸೃಷ್ಟಿ ಸ್ಥಳೀಯ ಯುವಜನತೆಗೆ ಕೃಷಿ ಆಧಾರಿತ ಉದ್ದಿಮೆಗಳಲ್ಲಿಕೆಲಸದ ಅವಕಾಶ.
*ತೆಂಗು ಎಂದರೆ ಕೇವಲ ಕಾಯಿ ಅಥವಾ ಕೊಬ್ಬರಿಯಲ್ಲ. ತೆಂಗು ಪಾರ್ಕ್ ಮೂಲಕ ಈ ಕೆಳಗಿನ ವಿನೂತನ ಮಾರುಕಟ್ಟೆ ಸೃಷ್ಟಿಸಬಹುದು

