ಕೇರಳ ಕೇಂದ್ರೀಯ ವಿವಿಯ ಕನ್ನಡ ವಿಭಾಗದಲ್ಲಿಉಪನ್ಯಾಸ ಮಾಲಿಕೆ

Contributed bygangadhar.korekkana@gmail.com|Vijaya Karnataka

A lecture series titled 'Karanth's Novels: Environment and Social Politics' was held at Kerala Central University's Kannada Department. Researcher Sanjay Uppin spoke on the importance of humans interacting with society, culture, and the environment. He highlighted Karanth's engagement in literary work that includes the community. The event aimed to bring forward overlooked aspects of research.

kerala central university kannada department upanyasa series environment and social politics in karantar novels

ವಿಕಸುದ್ದಿಲೋಕ ಕಾಸರಗೋಡು

ಮನುಷ್ಯ, ಸಮಾಜ, ಸಂಸ್ಕೃತಿ ಪರಿಸರದೊಂದಿಗೆ ಮುಖಾಮುಖಿಯಾಗುವುದು ಮುಖ್ಯ, ಸಮುದಾಯವನ್ನು ಒಳಗೊಂಡು ಸಾಹಿತ್ಯ ಕೃಷಿಯಲ್ಲಿತೊಡಗಿದವರು ಕಾರಂತರು ಎಂದು ಕನ್ನಡ ಸಂಶೋಧನಾರ್ಥಿ ಸಂಜಯ್ ಉಪ್ಪಿನ ಹೇಳಿದರು.

ಕೇರಳ ಕೇಂದ್ರೀಯ ವಿವಿಯ ಕನ್ನಡ ವಿಭಾಗ ಸೋಮವಾರ ಆಯೋಜಿಸಿದ್ದ ಸಂಶೋಧನ ತರಂಗ ಉಪನ್ಯಾಸ ಮಾಲಿಕೆಯ ಎರಡನೇ ಉಪನ್ಯಾಸದಲ್ಲಿ ‘ಕಾರಂತರ ಕಾದಂಬರಿಗಳಲ್ಲಿಪರಿಸರ ಮತ್ತು ಸಾಮಾಜಿಕ ರಾಜಕಾರಣ’ ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.

ಸಂಶೋಧನೆಯು ಬೆಳಕಿನಲ್ಲಿ ತಡಕಾಡುವ ಪ್ರಕ್ರಿಯೆ ಮಾತ್ರವಾಗದೆ ಕತ್ತಲಲ್ಲೂತಡಕಾಡುವ ಆ ಮೂಲಕ ಮುನ್ನಲೆಗೆ ಬರದ ಅಂಶಗಳನ್ನು ಮುನ್ನಲೆಗೆ ತರುವ, ಹೊಸ ನೋಟಗಳಿಗೆ ತೆರೆದುಕೊಳ್ಳುವ ಪ್ರಕ್ರಿಯೆಯಾಗಬೇಕಿದೆ ಎಂದು ಹೇಳಿದರು.

ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥ, ಮಾಲಿಕೆಯ ಸಂಯೋಜಕ ಡಾ.ಪ್ರವೀಣ ಪದ್ಯಾಣ ಉಪಸ್ಥಿತರಿದ್ದರು.ವಿಭಾಗದ ಸಹಾಯಕ ಪ್ರಾಧ್ಯಾಪಕರು ಡಾ.ಗೋವಿಂದರಾಜು ಎಂ. ಕಲ್ಲೂರು ಹಾಗೂ ಚೇತನ್ ಮುಂಡಾಜೆ, ಸಂಶೋಧನಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸಂವಾದದಲ್ಲಿಭಾಗಿಯಾದರು.

ಸೋಮನಿಂಗ ಹಿಪ್ಪರಗಿ ಹಾಗೂ ಶೃತಿ ಆಶಯ ಗೀತೆ ಹಾಡಿದರು. ಸ್ನಾತಕೋತ್ತರ ವಿದ್ಯಾರ್ಥಿ ದರ್ಶನ್ ಕುಮಾರ್ ಕಾರ ್ಯಕ್ರಮ ನಿರೂಪಿಸಿದರು. ಸಂಶೋಧನಾರ್ಥಿ ಶಶಾಂಕ್ ಎಚ್ .ವಿ. ಸ್ವಾಗತಿಸಿ, ವಂದಿಸಿದರು.

ಚಿತ್ರ:2ಕೆಎಸ್ ಕಾರಂತ- ಸಂಶೋಧನ ತರಂಗ ಉಪನ್ಯಾಸ ಮಾಲಿಕೆ ನಡೆಯಿತು.