ಮುತ್ಯಾ ಜಾಮೀನು ಅರ್ಜಿ ವಿಚಾರಣೆ ಒಂದು ದಿನ ಮುಂದಕ್ಕೆ
ವಿಕ ಸುಧಿದ್ದಿಧಿಲೋಕ ಯಾದಗಿರಿ
ಪೋಕ್ಸೊ ಪ್ರಕರಣದಲ್ಲಿಆರೋಪಿಯಾಗಿರುವ ಶಹಾಪುರ ತಾಲೂಕಿನ ಮಹಲ್ ರೋಜ್ ಮಠದ ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನು ಕೋರಿ ಇಲ್ಲಿನ ಜಿಲ್ಲಾಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಒಂದು ದಿನ ಮುಂದೂಡಲಾಗಿದೆ.
ಸೋಮವಾರ ಜಾಮೀನು ಅರ್ಜಿ ವಿಚಾರಣೆ ವೇಳೆ ಆಕ್ಷೇಪಣೆ ಎತ್ತಿದ್ದರಿಂದ, ಇಲ್ಲಿಯವರೆಗೆ ಆಗಿರುವ ತನಿಖೆ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
* 2ನೇ ನೋಟಿಸ್ :
ಈ ನಡುವೆ ವಿಚಾರಣೆಗೆ ಹಾಜರಾಗುವಂತೆ ಮಲ್ಲಿಕಾರ್ಜುನ ಮುತ್ಯಾಗೆ ಪೊಲೀಸ್ ಇಲಾಖೆಯಿಂದ ಎರಡನೇ ನೋಟಿಸ್ ನೀಡಲಾಗಿದ್ದು, ಮೊದಲ ನೋಟಿಸ್ ನೀಡಿದ್ದರೂ ಪೊಲೀಸ್ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ 2ನೇ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದರು.
* ಮಾಹಿತಿ ಕೇಳಿದ ಬಾಲ ನ್ಯಾಯ ಸಮಿತಿ:
ಜಿಲ್ಲೆಯ ಗೋಗಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿರುವ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಬಗ್ಗೆ ಕರ್ನಾಟಕ ಹೈಕೋರ್ಟ್ ನ ಬಾಲ ನ್ಯಾಯ ಸಮಿತಿ ಮಾಹಿತಿ ಕೇಳಿದೆ. ಈ ಪ್ರಕರಣದ ಸಂಬಂಧ ಮಾಹಿತಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಮಕ್ಕಳ ರಕ್ಷಣಾ ನಿರ್ದೇಶನಾಲಯ ನಿರ್ದೇಶಕ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ, ಯಾದಗಿರಿ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಜಿಲ್ಲಾಮಕ್ಕಳ ರಕ್ಷಣಾ ಅಧಿಕಾರಿ ಹಾಗೂ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗೆ ಕರ್ನಾಟಕ ಹೈಕೋರ್ಟ್ ನ ಬಾಲ ನ್ಯಾಯ ಸಮಿತಿ ಉಪ ಕಾರ್ಯದರ್ಶಿ ತಿಳಿಸಿದ್ದಾರೆ.
======
* ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅಭಿಪ್ರಾಯ
ಮುತ್ಯಾ ವಿರುದ್ಧ ಕೇಸ್ ಮಾಡಬಾರದಿತ್ತು
ಯಾದಗಿರಿ: ಮಹಲ್ ರೋಜ್ ಮಠದ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ಪೋಕ್ಸೊ ಕೇಸ್ ದಾಖಲು ಮಾಡಬಾರದಿತ್ತು. ವಿನಾಕಾರಣ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದರು. ಆರೇಳು ವರ್ಷದ ಮಗುವಿರುವುದರಿಂದ ಹತ್ತಿರ ಬಂದಾಗ ಮುದ್ದಾಡುವುದು ಸಹಜ. ಆದರೆ, ಸಾಮಾಜಿಕ ಜಾಲತಾಣ ಹಾಗೂ ಟಿವಿ ಮಾಧ್ಯಗಳಲ್ಲಿಟ್ವಿಸ್ಟ್ ಮಾಡಿ ಬಣ್ಣ ಕಟ್ಟುವ ಕೆಲಸ ಮಾಡಿದ್ದರಿಂದ ಪ್ರಕರಣ ದಾಖಲಿಸುವಂತಾಗಿದೆ. ತಂದೆ-ತಾಯಿಯೇ ವಿಡಿಯೊ ಮಾಡಿದ್ದಾರೆ. ಅವರೇನಾದರೂ ದೂರು ಕೊಟ್ಟಿದ್ದಾರೆಯೇ, ಇಂತಹದರಿಂದ ಕುಟುಂಬಗಳ ಪರಿಸ್ಥಿತಿ ಏನಾಗಲಿದೆ ಎಂಬುದು ಮಾಧ್ಯಮಗಳು ಕೂಡ ಯೋಚಿಸಬೇಕು ಎಂದರು.
ಮಾಧ್ಯಮಗಳ ಅಂಜಿಕೆಗೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ವಾಸ್ತವ ಏನಿದೆ ಎಂಬುದು ನೋಡಬೇಕಿತ್ತು. ಮಾಧ್ಯಮಗಳು ಸುದ್ದಿ ಮಾಡಬಾರದಿತ್ತು. ಅಪಪ್ರಚಾರ ಮಾಡುವ ಕೆಲಸ ಮಾಡಬಾರದು. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಮಹಿಳಾ ಆಯೋಗ ಸೇರಿ ಎಲ್ಲಆಯೋಗಗಳು ಕೂಡ ಅಷ್ಟೇ. ಒಬ್ಬರು ಹೇಳಿದರೆ ಇನ್ನೊಬ್ಬರು ಹೇಳುತ್ತಾರೆ. ಕೇಸ್ ದಾಖಲಿಸುವ ವಿಷಯ ನನ್ನ ಗಮನಕ್ಕೂ ಬಂದಿಲ್ಲಎಂದು ತಿಳಿಸಿದರು.
=====
ಮಧ್ಯಪ್ರಾಚ್ಯದಲ್ಲಿಸಿಕ್ಕಿಬಿದ್ದ ಇಬ್ಬರು ಜಿಲ್ಲಾಡಳಿತ ಸಂಪರ್ಕಕ್ಕೆ
ಯಾದಗಿರಿ: ಮಧ್ಯಪ್ರಾಚ್ಯ ದೇಶಗಳಲ್ಲಿನಡೆಯುತ್ತಿರುವ ಯುದ್ಧದಲ್ಲಿಸಿಕ್ಕಿಬಿದ್ದಿರುವ ಜಿಲ್ಲೆಯ ಇಬ್ಬರು ವ್ಯಕ್ತಿಗಳು ಜಿಲ್ಲಾಡಳಿತ ಸಂಪರ್ಕಕ್ಕೆ ಬಂದಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ತಿಳಿಸಿದರು.
ಹೊನಗೇರಾ ಸಿದ್ದರಾಮರೆಡ್ಡಿ, ಯಾದಗಿರಿ ಬಸವರಾಜ ಅವರೊಂದಿಗೆ ಮಾತನಾಡಲಾಗಿದೆ. ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿಯೂ ನೀಡಲಾಗಿದೆ ಎಂದರು.
ಮಧ್ಯಪ್ರಾಚ್ಯದಲ್ಲಿಇನ್ನೂ ಹೆಚ್ಚಿನ ಜನರು ಸಿಕ್ಕಿಬಿದ್ದಿದ್ದಾರೆ ಎಂಬ ಮಾಹಿತಿಯಿದ್ದು, ಆದರೆ, ಅವರಿನ್ನೂ ಸಂಪರ್ಕಕ್ಕೆ ಬಂದಿಲ್ಲ.

