ವಿಕ ಸುದ್ದಿಲೋಕ ಶಿಗ್ಗಾವಿ
ದೇಶದ ಸಂಸ್ಕೃತಿ, ಹಿಂದೂ ಧರ್ಮದ ಉಳಿವಿಗಾಗಿ ಹೋರಾಡಿದ ದೇಶ ಭಕ್ತರನ್ನು ಪಠ್ಯಪುಸ್ತಕಗಳ ಮೂಲಕ ಯುವ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ಹಿಂದೂ ಜಾಗರಣ ವೇದಿಕೆ ಕರ್ನಾಟಕ ಉತ್ತರ ಪ್ರಾಂತ ಸಹ ಸಂಯೋಜಕ ಶ್ರೀಕಾಂತ್ ಹೊಸಕೇರಾ ಹೇಳಿದರು.
ಪಟ್ಟಣದ ಸಂತೆ ಮೈದಾನದಲ್ಲಿಭಾನುವಾರ ನಡೆದ ಹಿಂದೂ ಸಮ್ಮೇಳನ ಸಮಾವೇಶದಲ್ಲಿದಿಕ್ಕೂಚಿ ಭಾಷಣ ಮಾಡಿದ ಅವರು, ‘‘ಕೆಲ ಎಡಪಂಥಿಯರಿಂದ ಹಿಂದೂ ಸಂಸ್ಕೃತಿ ಮರೆಮಾಚುವ ಕೆಲಸ ನಡೆಯುತ್ತಿದೆ. ಇತ್ತ ಭವಿಷ್ಯದ ಭಾರತ ನಿರ್ಮಾಣಕ್ಕಾಗಿ ಹಿಂದೂ ಸಂಘಟನೆಗಳು ಜಾಗೃತಿ ಅಭಿಯಾನ ನಡೆಸುತ್ತಿವೆ’’ ಎಂದರು.
‘‘ಹಿಂದೂ ಸಂಘಟನೆ ಪಂಚ ಪರಿವರ್ತನೆ ಮೂಲಕ ಕುಟುಂಬ ಪ್ರಬೋಧನ, ಸಾಮಾಜಿಕ ಪರಿವರ್ತನೆ, ಸ್ವದೇಶಿ ಭಾವನೆ, ಪರಿಸರ ಕಾಳಜಿ, ನಾಗರಿಕ ಶಿಷ್ಟಾಚಾರ, ಕುಟುಂಬ ವ್ಯವಸ್ಥೆ ಉಳಿಸಿಕೊಳ್ಳಲು ಶ್ರಮಿಸುತ್ತಿದೆ. ಪ್ರತಿಯೊಬ್ಬರೂ ದೇಶದ ಸಂಸ್ಕೃತಿ, ಸನಾತನ ಪರಂಪರೆ ಬಗ್ಗೆ ಗೌರವ ಭಾವನೆ ಬೆಳೆಸಿಕೊಳ್ಳಬೇಕು. ನಮ್ಮ ಸಂಸ್ಕೃತಿ, ಹಿಂದೂ ಧರ್ಮದ ಉಳಿವಿಗಾಗಿ ಹೋರಾಟ ಸಂಘಟಿತರಾಗಬೇಕು’’ ಎಂದರು.
ಸಾನ್ನಿಧ್ಯವಹಿಸಿ ಆರ್ಶೀವಚನ ನೀಡಿದ ರಾಣೇಬೇನ್ನೂರ ಶಿವಯೋಗಿ ಶಿವಾಚಾರ್ಯರು, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಶ್ರೀಗಳು, ‘‘ಹಿಂದೂ ಸಂಘಟನೆ ಕಾಟಾಚಾರಕ್ಕೆ ಸೀಮಿತವಾಗಬಾರದು. ಧರ್ಮ ರಕ್ಷಣೆ ಮಾಡುವ ಮೂಲಕ ಸನಾತನ ಪರಂಪರೆ ಉಳಿಸಿ, ದೇಶಾಭಿಮಾನ ಮೂಡಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಹಿಂದೂಗಳ ಮೇಲಿದೆ’’ ಎಂದರು.
ಇದಕ್ಕೂ ಮೊದಲು ಗ್ರಾಮದೇವಿ ಪಾದಗಟ್ಟಿಯಿಂದ ಪೂರ್ಣ ಕುಂಭ ಮೇಳದೊಂದಿಗೆ ಆರಂಭವಾದ ಶೋಭಾಯಾತ್ರೆ ಪ್ರಮುಖ ಬೀದಿಗಳಲ್ಲಿಸಂಚರಿಸಿ, ಸಂತೆ ಮೈದಾನದಲ್ಲಿಬೃಹತ್ ಸಮಾವೇಶವಾಗಿ ಪರಿವರ್ತನೆಗೊಂಡಿತು. ಸಮ್ಮೇಳನ ಸಮಿತಿ ಅಧ್ಯಕ್ಷ ಶಶಿಧರ ಸುರಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಅಧ್ಯಕ್ಷ ವಿಶ್ವನಾಥ ಹರವಿ, ಮುಖಂಡ ಭರತ್ ಬೊಮ್ಮಾಯಿ, ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಬಸಣ್ಣ ಹೆಸರೂರ ಮತ್ತಿತರರು ಉಪಸ್ಥಿತರಿದ್ದರು. ಡಾ.ಭಾರತಿ ಛಬ್ಬಿ ಪ್ರಸ್ತುತಪಡಿಸಿದ ಸ್ವಯಂ ರಚಿತ ರಾಷ್ಟಾ್ರಭಿಮಾನ ಗೀತೆ ಗಮನ ಸೆಳೆಯಿತು. ರಾಜು ಕೆಂಬಾವಿ ಸ್ವಾಗತಿಸಿದರು. ರಾಘವೇಂದ್ರ ದೇಶಪಾಂಡೆ ನಿರೂಪಿಸಿದರು.
2ಎಸ್ .ಜಿ.ಎನ್ .1
ಶಿಗ್ಗಾವಿಯಲ್ಲಿನಡೆದ ಹಿಂದೂ ಸಮ್ಮೇಳನ ಸಮಾವೇಶವನ್ನು ರಾಣೇಬೆನ್ನೂರು, ಶಿಗ್ಗಾವಿಯ ಶ್ರೀೕಗಳು ಉದ್ಘಾಟಿಸಿದರು.

