ಏ.10ರಂದು ಬೃಹತ್ ಉದ್ಯೋಗ ಮೇಳ
ಮೈಸೂರು: ಮೇಟಗಳ್ಳಿಯ ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ಬಳಿ ಇರುವ ಮೈಕಾಸ್ ಕಾಲೇಜಿನಲ್ಲಿಏ.10 ರಂದು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ನಿರ್ದೇಶಕ ಡಾ.ಜಿ. ರಾಮಚರಣ್ ಹೇಳಿದರು.
‘‘ಈ ಬೃಹತ್ ಉದ್ಯೋಗ ಮೇಳದಲ್ಲಿರಾಜ್ಯದ ಹೆಸರಾಂತ ಕಂಪನಿಗಳು ಪಾಲ್ಗೊಳ್ಳುತ್ತಿವೆ. ಒಂದೇ ಸ್ಥಳದಲ್ಲಿಬಹು ಕಾಲೇಜುಗಳ ಉದ್ಯೋಗಾಕಾಂಕ್ಷಿಗಳು, ಕಂಪನಿಗಳನ್ನು ಒಂದೆಡೆ ಸೇರಿಸಿ ಬಿಎ ಮೊದಲಾದ ವಿವಿಧ ವಿದ್ಯಾರ್ಹತೆ ಹೊಂದಿರುವವರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ,’’ ಎಂದು ಸುದ್ದಿಗೋಷ್ಠಿಯಲ್ಲಿತಿಳಿಸಿದರು.
‘‘ಕಳೆದ ಬಾರಿ ಒಟ್ಟು 42 ಕಂಪನಿ ಪಾಲ್ಗೊಂಡಿದ್ದವು. ಈಗ ಇನ್ನಷ್ಟು ಕಂಪನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಾಹಿತಿಗೆ ಮೊ. 74831 76616 ಅನ್ನು ಸಂಪರ್ಕಿಸಬಹುದಾಗಿದೆ,’’ ಎಂದು ಹೇಳಿದರು.
ಪ್ರಾಂಶುಪಾಲ ಡಾ. ರಮ್ಯಾ ತೆಕ್ಕಡೆ , ರಯಾನ್ , ವಿಕ್ರಮ್ ಇದ್ದರು.

