ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಣಿಕ್ಯಂ ನೇಮಕ

Contributed byvenki_dhreporter@rediffmail.com|Vijaya Karnataka

ಕೆಜಿಎಫ್‌ ನಗರದ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಬಿ.ಮಾಣಿಕ್ಯಂ ಅವರನ್ನು ನೇಮಿಸಲಾಗಿದೆ. ಡಿ.ಕೆ.ಶಿವಕುಮಾರ್‌ ಆದೇಶ ಹೊರಡಿಸಿದ್ದಾರೆ. 30 ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯರಾಗಿದ್ದ ಮಾಣಿಕ್ಯಂ ಅವರಿಗೆ 35 ವಾರ್ಡ್‌ಗಳ ಜವಾಬ್ದಾರಿ ನೀಡಲಾಗಿದೆ. ಅವರು ಈ ಹಿಂದೆ ವಿದ್ಯಾರ್ಥಿ ಕಾಂಗ್ರೆಸ್‌, ನಗರಾಭಿವೃದ್ಧಿ ಪ್ರಾಧಿಕಾರ, ಎನ್‌ಎಸ್‌ಯುಐ, ನಗರಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಸಂಘಟನೆಗೆ ಅವರ ನೇಮಕ ಮಹತ್ವದಾಗಿದೆ.

b manikyam appointed as block congress president in kgf city

ವಿಕ ಸುದ್ದಿಲೋಕ ಕೆಜಿಎಫ್

ಕೆಜಿಎಫ್ ವಿಧಾನಸಭಾ ಕ್ಷೇತ್ರದ ಕೆಜಿಎಫ್ ನಗರದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಬಿ.ಮಾಣಿಕ್ಯಂ ಅವರನ್ನು ತಕ್ಷಣ ಜಾರಿಗೆ ಬರುವಂತೆ ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇಮಕ ಆದೇಶ ಹೊರಡಿಸಿದ್ದಾರೆ.

ಸತತ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿಸಕ್ರಿಯವಾಗಿ ಗುರುತಿಸಿಕೊಂಡಿದ್ದ ಮಾಣಿಕ್ಯಂ ಅವರಿಗೆ ಕೆಜಿಎಫ್ ನಗರದ 35 ವಾರ್ಡ್ ಗಳ ಕಾಂಗ್ರೆಸ್ ಸಮಿತಿಯ ಜವಾಬ್ದಾರಿಯನ್ನು ಕಾಂಗ್ರೆಸ್ ನೀಡಿದೆ.

ನಡೆದು ಬಂದ ದಾರಿ: ಮಾಣಿಕ್ಯಂ ಅವರು 1987ರಲ್ಲಿವಿದ್ಯಾರ್ಥಿ ಕಾಂಗ್ರೆಸ್ ನಲ್ಲಿಸಕ್ರಿಯವಾಗಿ ಪಕ್ಷದ ಕೆಲಸವನ್ನು ಮಾಡಿದ್ದು, ಕೆಜಿಎಫ್ ನಗರದ ವಿದ್ಯಾರ್ಥಿ ಕಾಂಗ್ರೆಸ್ ನಲ್ಲಿಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಜಿಲ್ಲಾಯುವ ಘಟಕದ ಅಧ್ಯಕ್ಷರಾಗಿ ಚಂದ್ರಾರೆಡ್ಡಿ ನೇತೃತ್ವದಲ್ಲಿಜಿಲ್ಲಾಎನ್ ಎಸ್ ಯುಐನಲ್ಲಿಉಪಾಧ್ಯಕ್ಷರಾಗಿ ಪಕ್ಷದಲ್ಲಿಗುರುತಿಸಿಕೊಂಡಿದ್ದು, ಡಿಸಿಸಿ ಪ್ರಧಾನ ಕಾರ ್ಯದರ್ಶಿಯಾಗಿ ಚಂದ್ರಾರೆಡ್ಡಿ ಹಾಗೂ ಮಾಣಿಕ್ಯಂ ಜತೆ ಜತೆಯಾಗಿ ಗುರುತಿಸಿಕೊಂಡು ಜಿಲ್ಲೆಯಲ್ಲಿಪಕ್ಷದ ಸಂಘಟನೆಯಲ್ಲಿಪ್ರಮುಖ ಪಾತ್ರ ವಹಿಸಿದ್ದರು.

ಮಿಜೋರಾಂ, ಅಸ್ಸಾಂ, ಮೇಘಾಲಯದ ವಿಧಾನಸಭಾ ಚುನಾವಣೆಗಳಲ್ಲಿಪಕ್ಷದ ವೀಕ್ಷಕರಾಗಿ ಕಾರ ್ಯನಿರ್ವಹಿಸಿದ್ದರು. ಕೆಜಿಎಫ್ ನಗರಸಭೆ 1 ನೇ ವಾರ್ಡ್ ನಲ್ಲಿ15 ವರ್ಷಗಳ ಕಾಲ ನಗರಸಭೆ ಸದಸ್ಯರಾಗಿ ಕಾರ ್ಯನಿರ್ವಹಿಸಿ ವಾರ್ಡ್ ನಲ್ಲಿಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಮೂಲಕ ನಗರಸಭೆಯ ಉತ್ತಮ ಸದಸ್ಯರಾಗಿ ಕಾರ ್ಯನಿರ್ವಹಿಸಿದ್ದಾರೆ. ಕಳೆದ ಬಾರಿ ನಗರಸಭೆ ಸ್ಥಾಯಿ ಸಮಿತಿ ಸದಸ್ಯರಾಗಿ ಅಯ್ಕೆಯಾಗಿದ್ದರು. ನಗರಸಭೆಯ 35 ವಾರ್ಡ್ ಗಳ ಸಮಿತಿ ಅಧ್ಯಕ್ಷರಾಗಿ ಅಯ್ಕೆಯಾಗಿದ್ದರು. ಮಾಣಿಕ್ಯಂ ಅವರಿಗೆ ಮುಂಬರುವ ನಗರಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿಪಕ್ಷದ ಸಂಘಟನೆ ಪ್ರಮುಖ ಪಾತ್ರ ವಹಿಸಲಿದೆ.

ಶುಭ ಹಾರೈಕೆ: ಜಿಲ್ಲಾಪಂ, ಮಾಜಿ ಸದಸ್ಯರಾ ಅ.ಮು.ಲಕ್ಷಿತ್ರ್ಮನಾರಾಯಣ್ , ಕೆಪಿಸಿಸಿ ಪ್ರಾಧನ ಕಾರ ್ಯದರ್ಶೀ ಕಾರ್ತಿಕ್ , ನಗರಸಭೆ ಮಾಜಿ ಉಪಾಧ್ಯಕ್ಷರಾದ ಜರ್ಮನ್ , ಒಕ್ಕಲಿಗ ಸಂಘದ ಅಧ್ಯಕ್ಷರಾದ ಎಸ್ .ಎನ್ ರಾಜಗೋಪಾಲಗೌಡ, ಸುರೇಂದ್ರಗೌಡ, ಜಿಪಂ ಮಾಜಿ ಸದಸ್ಯರಾದ ಶಾಯಿದ್ , ಜಯಪಾಲ್ , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ್ , ಫೋಟೊ ಬಾಬು, ಆನಂದ್ ಹಾಗೂ ಇನ್ನಿತರ ಮುಖಂಡರು ಶುಭ ಹಾರೈಸಿದ್ದಾರೆ.

3ಕೆಜಿಎಫ್ 1: ಕೆಜಿಎಫ್ ನಗರದ ನೂತನ ಬ್ಲಾಕ್ ಅಧ್ಯಕ್ಷರಾಗಿ ಬಿ. ಮಾಣಿಕ್ಯಂ ಅವರಿಗೆ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ್ ಶುಭ ಕೋರಿದರು.

ಓದಲೇ ಬೇಕಾದ ಸುದ್ದಿ