ಆದಿಚುಂಚನಗಿರಿ ಜಾತ್ರೆಗೆ ಜನಸಾಗರ
- ಗಂಗಾಧರೇಶ್ವರ ಸ್ವಾಮಿ ಮಹಾರಥೋತ್ಸವ ಸಂಭ್ರಮ
- ಡಾ.ನಿರ್ಮಲಾನಂದನಾಥ ಸ್ವಾಮಿಜಿ ಅಡ್ಡಪಲ್ಲಕ್ಕಿ ಉತ್ಸವ
ವಿಕ ಸುದ್ದಿಲೋಕ ನಾಗಮಂಗಲ
ತಾಲೂಕಿನ ಅದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿಶ್ರೀ ಗಂಗಾಧರೇಶ್ವರ ಸ್ವಾಮಿಯ ಮಹಾರಥೋತ್ಸವ ಹಾಗೂ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ಅಡ್ಡಪಲ್ಲಕ್ಕಿ ಉತ್ಸವ ನಾಡಿನ ಸಾವಿರಾರು ಭಕ್ತರ ಸಮ್ಮುಖದಲ್ಲಿವಿಜೃಂಭಣೆಯಿಂದ ಮಂಗಳವಾರ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿನೆರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಕಾಲಭೈರವೇಶ್ವರನ ಸನ್ನಿಧಿಧಿಯಲ್ಲಿಸೋಮವಾರ ರಾತ್ರಿ ಮತ್ತು ಮಂಗಳವಾರ ನಾನಾ ಪೂಜಾ ಮಹೋತ್ಸವ ನೆರವೇರಿದವು. ಮಹಾರಥೋತ್ಸವಕ್ಕೂ ಮುನ್ನ ಶ್ರೀ ಕಾಲಭೈರವೇಶ್ವ ಸ್ವಾಮಿ, ಶ್ರೀ ಗಂಗಾಧರೇಶ್ವರ ಸ್ವಾಮಿ ಸೇರಿದಂತೆ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಮಹಾ ಸನ್ನಿಧಿಧಿಯಲ್ಲಿಹೋಮ, ಹವನ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆದವು, ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿದೇವಸ್ಥಾನಗಳಿಗೆ ಹಸಿರು ಚಪ್ಪರ, ಹೂ ತೋರಣ ಮತ್ತು ವಿದ್ಯುತ್ ದೀಪಾಲಂಕಾರದಿಂದ ಸಿಂಗಾರ ಮಾಡಲಾಗಿತ್ತು. ಭಕ್ತ ಸಾಗರ ದೇವರ ದರ್ಶನ ಪಡೆದರು.
ಸೋಮವಾರ ರಾತ್ರಿಯಿಡೀ ಪೂಜೆ ಸೇರಿದಂತೆ ನಾನಾ ಕಾರ್ಯಕ್ರಮಗಳು ನಡೆದವು. ಬಿಜಿಎಸ್ ಸಭಾ ಭವನದಲ್ಲಿಸರ್ವಧರ್ಮ ಸಮ್ಮೇಳನ, ನಂತರ ಶ್ರೀ ಕಾಲಭೈರವೇಶ್ವರ ಸ್ವಾಮಿಯ ತಿರುಗಣಿ ಉತ್ಸವ ರಥದ ಬೀದಿಯಲ್ಲಿಮತ್ತು ಕ್ಷೇತ್ರದ ಪುಷ್ಕರಣಿಯಲ್ಲಿತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಡಾ.ನಿರ್ಮಲಾನಂದನಾಥ ಸ್ವಾಮೀಜಿ ತೆಪ್ಪದಲ್ಲಿಕುಳಿತು, ಪುಷ್ಕರಣಿಯಲ್ಲಿಮೂರು ಸುತ್ತುಗಳು ಬಂದು ಅಲ್ಲಿನ ವಿN್ನೕಶ್ವರಸ್ವಾಮಿಗೆ ಪೂಜೆ ಸಲ್ಲಿಸಿದರು. ನಂತರ ತೆಪ್ಪೋತ್ಸವದಲ್ಲಿಕುಳಿತು ಭಕ್ತರಿಗೆ ದರ್ಶನಾಶೀರ್ವಾದ ನೀಡಿದರು.
ಭೈರವನ ಕ್ಷೇತ್ರದಲ್ಲಿರಾತ್ರಿ ಪೌರಾಣಿಕ ನಾಟಕ ಪ್ರದರ್ಶನ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರು ವೀಕ್ಷಿಸಿದರು. ಹಲವು ರೈತರು ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ನೋಡಿ ಹಲವು ಮಾಹಿತಿ ಪಡೆದರು.
ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಕ್ಷೇತ್ರಕ್ಕೆ ಜನಸಾಗರವೇ ಹರಿದು ಬಂದಿತ್ತು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಜಾತ್ರಾ ವಿಶೇಷ ಬಸ್ ಗಳನ್ನು ಆಯೋಜಿಸಿದರು. ಆರೋಗ್ಯ ತಪಾಸಣೆ ಕೂಡ ಮಾಡಲಾಗುತಿತ್ತು.
ಜಾತ್ರೆಗೆ ಬಂದ ಭಕ್ತರಿಗೆ ಹಲವೆಡೆ ಅನ್ನದಾಸೋಹ, ಕಾಫಿ, ಟೀ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಮೈಸೂರು ಐಜಿಪಿ ಬೋರಲಿಂಗಯ್ಯ ಮತ್ತು ಮಂಡ್ಯ ಎಸ್ಪಿ ಶೋಭಾರಾಣಿ ನೇತೃತ್ವದಲ್ಲಿಪೊಲೀಸ್ ಬಿಗಿ ಬಂದೂಬಸ್ ್ತ ಕಲ್ಪಿಸಲಾಗಿತ್ತು.
ಮಹಾರಥೋತ್ಸವ: ಮಂಗಳವಾರ ಮುಂಜಾನೆಯ ಬ್ರಾಹ್ಮೀ ಮುಹೂರ್ತದಲ್ಲಿಶ್ರೀ ಗಂಗಾಧರೇಶ್ವರಸ್ವಾಮಿ ಮಹಾ ರಥೋತ್ಸವ ಹಾಗೂ ಡಾ. ನಿರ್ಮಲಾನಂದನಾಥ ಸ್ವಾಮಿಜೀಯವರ ಅಡ್ಡಪಲ್ಲಕ್ಕಿ ಉತ್ಸವ ನಾಡಿನ ನಾನಾ ಭಾಗಗಳಿಂದ ಹರಿದು ಬಂದ ಭಕ್ತರ ಸಾಗರ ಸಮ್ಮುಖದಲ್ಲಿವಿಜೃಂಭಣೆಯಿಂದ ನೆರವೇರಿತು.
ಸೂರ್ಯ ಉದಯಕ್ಕೂ ಮುನ್ನ ನಡೆಯುವ ರಥೋತ್ಸವ ಚಾಲನೆ ಸಿಗುತ್ತಿದಂತೆ, ಲಕ್ಷಾಂತರ ಕೈಗಳು ಶ್ರೀ ಗಂಗಾಧರೇಶ್ವರ ಸ್ವಾಮಿ ರಥವನ್ನು ಎಳೆದು ಜತೆಗೆ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ಕಣ್ತುಂಬಿಕೊಂಡರು, ಭಕ್ತರು ರಥಕ್ಕೆ ಹಾಗೂ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವಕ್ಕೂ ಹಣ್ಣು, ಜವನ ಎಸೆದು ಭಕ್ತಿ ಸಮರ್ಪಿಸಿದರು, ರಥದ ಬೀದಿಯಲ್ಲಿರಥೋತ್ಸವ ನೆರವೇರಿತು.

