ಅಧಿಕ್ರಮ ದಾಧಿಸ್ತಾನು ರಾಗಿ ಚೀಧಿಲ ವಧಿಶಧಿಕ್ಕೆ

Contributed bymuralikrishnapaperagency@gmail.com|Vijaya Karnataka

ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಸಂಗ್ರಹಿಸಿದ್ದ ಸಾವಿರಾರು ಚೀಲ ರಾಗಿಯನ್ನು ವಶಪಡಿಸಿಕೊಂಡಿದ್ದಾರೆ. ಬೆಂಬಲ ಬೆಲೆ ಯೋಜನೆಯಡಿ ರೈತರ ಹೆಸರಿನಲ್ಲಿ ದಲ್ಲಾಳಿಗಳು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದರು. ದೊಡ್ಡರಾಂಪುರ, ತೀರ್ಥಪುರ, ಕುರುಬರಹಳ್ಳಿ ರಸ್ತೆಯ ಗೋದಾಮುಗಳಲ್ಲಿ ದಾಳಿ ನಡೆದಿದೆ. ಸರಕಾರಕ್ಕೆ ವಂಚಿಸುವ ಜಾಲ ಬಯಲಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

illegal ragi accumulation information on officials raid and seized bags

ಚಿಕ್ಕನಾಯಕನಹಳ್ಳಿ: ತಾಲೂಕಿನ ಹಲವೆಡೆ ತಹಸೀಲ್ದಾಧಿರ್ ಮಮತಾ ಎಂ. ನೇತೃತ್ವದಲ್ಲಿಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸಾವಿರಾರು ಚೀಲ ರಾಗಿ ವಶಪಡಿಸಿಕೊಂಡಿದ್ದಾರೆ. ಬೆಂಬಲ ಬೆಲೆ ಯೋಜನೆಯಡಿ ಕೇವಲ ನೋಂದಾಯಿತ ರೈತರಿಂದ ಮಾತ್ರ ರಾಗಿ ಖರೀದಿಗೆ ಸಧಿರಧಿಕಾರ ಅವಕಾಶ ಕಲ್ಪಿಸಿದೆ. ಆದರೆ, ಕೆಲ ದಲ್ಲಾಳಿಗಳು ರೈತರ ಹೆಸರಿನಲ್ಲಿಅಡ್ಡದಾರಿಯಲ್ಲಿರಾಗಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ಲಾಭ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇಧಿರೆಗೆ ದಾಧಿಳಿ ನಧಿಡೆಧಿದಿಧಿದೆ. ಈ ವೇಳೆ ಯಾವುದೇ ದಾಖಲೆಗಳಿಲ್ಲದ ಸಾವಿರಾರು ಚೀಲ ರಾಗಿ ಪತ್ತೆಯಾಗಿದ್ದು,

ಅಧಿಕಾರಿಗಳು ತಕ್ಷಣವೇ ದಾಸ್ತಾನನ್ನು

ಮುಟ್ಟುಗೋಲು ಹಾಕಿಕೊಂಡಿದ್ದಾರೆ. ದೊಡ್ಡರಾಂಪುರ ನಾಗರತ್ನಮ್ಮ, ತೀರ್ಥಪುರ ನಿರಂಜನ್ ಮೂರ್ತಿ ಅಧಿವರ ಗೋದಾಮಿನಲ್ಲಿರಾಗಿ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ. ಕುರುಬರಹಳ್ಳಿ ರಸ್ತೆಯ ಗೋದಾಮಿನಲ್ಲಿನರಸಿಂಹಯ್ಯ ಎಂಬುವವರಿಗೆ ಸೇರಿದ ನೂರಾರು ಚೀಲ ರಿಜೆಕ್ಟ್(ತಿರಸ್ಕೃತ) ರಾಗಿ ಪತ್ತೆಯಾಗಿದೆ. ಕ್ಲೀನಿಂಗ್ ಮಿಲ್ ಧಿಗಳಿಂದ ಹೊರಬಂದ ತ್ಯಾಜ್ಯ, ಕಲ್ಲುಮತ್ತು ಮಣ್ಣನ್ನು ಉತ್ತಮ ರಾಗಿಯೊಂದಿಗೆ ಬೆರೆಸಿ, ಸರಕಾರಕ್ಕೆ ವಂಚಿಸುವ ಆತಂಕಕಾರಿ ಜಾಲ ಬೆಳಕಿಗೆ ಬಂದಿದೆ. ವಶಪಡಿಸಿಕೊಂಡಿರುವ ರಾಗಿಯ ನಿಖರವಾದ ತೂಕದ ಪ್ರಕ್ರಿಯೆ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಕಾನೂನು ರೀತ್ಯಾ ಪ್ರಕರಣ ದಾಖಲಿಸಿ, ಕ್ರಧಿಮಧಿಕೈಧಿಗೊಧಿಳ್ಳಧಿಲಾಧಿಗುಧಿವುಧಿದೆಂದು ಅಧಿಕಾರಿಗಳು ತಿಳಿಸಿದ್ದಾರೆ.