ಶಿರಾ: ತಾಲೂಕಿನ ಹುಲಿಕುಂಟೆ ಹೋಬಳಿಯ ತಡಕಲೂರು ಗ್ರಾಮದಲ್ಲಿನೆಲೆಸಿರುವ ಶ್ರೀ ಖಾದ್ರಿ ಲಕ್ಷ್ಮೇನರಸಿಂಹ ಸ್ವಾಮಿಯ ಶ್ರೀ ಕದರಿ ಹುಣ್ಣಿಮೆ ಬ್ರಹ್ಮರಥೋತ್ಸವ ಮಾ.5ರಂದು ಗುರುವಾರ ಸಂಜೆ ನಡೆಯಲಿದೆ. ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಕಲ್ಲಹಳ್ಳಿ ಅಮವಾಸೆ, ಕದಿರೆಹಳ್ಳಿ ಅಮವಾಸೆ, ಕಲ್ಲಹಳ್ಳಿ ಚಿಕ್ಕಲಕ್ಕಮ್ಮ ಅಮವಾಸೆ, ದೂಪದಳ್ಳಿ ಅಮಾವಾಸೆ, ತೊಣಸನಹಳ್ಳಿ ಅಮವಾಸೆ, ನಿದ್ರಘಟ್ಟೆ ಅಮವಾಸೆ, ಕದಿರೇಹಳ್ಳಿ ಕೋಲುಕಾರ ಅಮಾವಾಸೆ ಬಂಡಿಗೆ ಸೇರಿದ ಯಜಮಾನರು, ಏಳು ಬಂಡಿ ಬಂಡಿಕಾರರು, ಕೋಲ್ಕಾರರು, ಗೊಂಚಿಕಾರರು, ಪೂಜಾರರು ಹಾಗೂ ಆಂಧ್ರಪ್ರದೇಶ ಸೇರಿದಂತೆ ಜಿಲ್ಲೆಯ ನಾನಾ ತಾಲೂಕುಗಳ ಸಾವಿರಾರು ಭಕ್ತರು ಶ್ರೀ ಖಾದ್ರಿ ಲಕ್ಷ್ಮಿನರಸಿಂಹ ಸ್ವಾಮಿ ಬ್ರಹ್ಮರಥೋತ್ಸವದಲ್ಲಿಪಾಲ್ಗೊಳ್ಳಲಿದ್ದಾರೆ.

