ವಿದ್ಯಾರ್ಥಿನಿಯರಿಂದ ಗುರುವಂದನೆ ಕಾರ್ಯಕ್ರಮ

Contributed bysubedarcb@gmail.com|Vijaya Karnataka

ನರಗುಂದ ಬಾಲಕಿಯರ ಪ್ರೌಢಶಾಲೆಯಲ್ಲಿ 1978-79ರ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿನಿಯರು ತಮ್ಮ ಹಳೆಯ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದರು. ಎಸ್‌.ಎನ್‌.ಹಕಾರಿ, ಎಸ್‌.ಎಲ್‌.ಕುಲಕರ್ಣಿ, ವಿರಕ್ತಮಠ ಅವರು ಗೌರವ ಸ್ವೀಕರಿಸಿ ಹಳೆಯ ವಿದ್ಯಾರ್ಥಿನಿಯರನ್ನು ಆಶೀರ್ವದಿಸಿದರು. ನಿವೃತ್ತ ಬಿಇಒ ಮಂಗಳಾ ಪಾಟೀಲರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ಹಲವು ಹಳೆಯ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

beloved guruvandana program at girls high school former student reflections

16 ಎನ್ ಆರ್ ಡಿ-2

ವಿದ್ಯಾರ್ಥಿನಿಯರಿಂದ ಗುರುವಂದನೆ ಕಾರ್ಯಕ್ರಮ

ವಿಕ ಸುದ್ದಿಲೋಕ ನರಗುಂದ

ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ1978-79 ನೇ ಸಾಲಿನಲ್ಲಿಎಸ್ ಎಸ್ ಎಲ್ ಸಿಯಲ್ಲಿಕಲಿತ ವಿದ್ಯಾರ್ಥಿನಿಯರಿಂದ ಗುರುವಂದನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿಭಾಗಿಯಾಗಿದ್ದ ಆಗಿನ ಶಿಕ್ಷಕರಾಗಿದ್ದ ಎಸ್ .ಎನ್ .ಹಕಾರಿ, ಎಸ್ .ಎಲ್ .ಕುಲಕರ್ಣಿ, ವಿರಕ್ತಮಠ ಗುರುವಂದನೆ ಗೌರವ ಸ್ವೀಕರಿಸಿ ಹಳೆಯ ವಿದ್ಯಾರ್ಥಿಗಳನ್ನು ಆಶೀರ್ವದಿಸಿದರು. ಹಳೆಯ ವಿದ್ಯಾರ್ಥಿನಿಯಾಗಿದ್ದ ಹಾಗೂ ಬಿಇಒ ಆಗಿ ಕಾರ್ಯನಿರ್ವಹಿಸಿ ನಿವೃತ್ತಗೊಂಡ ಮಂಗಳಾ ಪಾಟೀಲ ಶಿಕ್ಷಣದ ಕುರಿತಾಗಿ ಹಲವಾರು ಹಿಂದಿನ ಸವಿನೆನಪುಗಳನ್ನು ಪ್ರಸ್ತಾಪಿಸಿ ಕಳೆದುಹೋದ ದಿನಗಳ ಸಂಭ್ರಮತೆ, ಸುಮಧುರ ಕ್ಷಣಗಳ ಕುರಿತು ಅನಿಸಿಕ ವ್ಯಕ್ತಪಡಿಸಿದರು.

ಸುನಂದಾ ಅಂಗಡಿ, ವಿದ್ಯಾ ದೇಶಪಾಂಡೆ, ತಿಪ್ಪವ್ವ ಕಟಗಿ, ಸುನಂದಾ ಸೊಬರದ, ಇಂದಿರಾ ಜೋಗಣ್ಣವರ, ಈರಮ್ಮ ಶೆಟ್ಟರ, ಮಲ್ಲವ್ವ ಕಲಾದಗಿ, ಸುಶೀಲಾ ಸಂಕನಗೌಡ್ರ, ನಂದಾ ಜೋಶಿ ಉಪಸ್ಥಿತರಿದ್ದರು. ನಂದಾ ಠಾಕೂರದಾಸ್ ಪರಿಚಯಿಸಿದರು. ಉಷಾ ಗುಜಮಾಗಡಿ ನಿರೂಪಿಸಿದರು. ಜ್ಯೋತಿ ಶಲವಡಿ ವಂದಿಸಿದರು.

ಫೋಟೊ: 16 ಎನ್ ಆರ್ ಡಿ-2:

ನರಗುಂದ ಬಾಲಕಿಯರ ಪ್ರೌಢಶಾಲೆಯಲ್ಲಿಕಲಿತ ಹಳೆಯ ವಿದ್ಯಾರ್ಥಿನಿಯರಿಂದ ಗುರುವಂದನೆ ಕಾರ್ಯಕ್ರಮ ನಡೆಯಿತು.