ಚಿತ್ರ: (ಬರಲಿದೆ)
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿಗುರವಂದನೆ ಕಾರ್ಯಕ್ರಮದಲ್ಲಿಹಲವು ಸಾಧಕರಿಗೆ ಸನ್ಮಾನ ಮಾಡಲಾಯಿತು.
**
ಜಿಲ್ಲಾ ವೀರಶೈವ ಸಮಾಜ, ಶ್ರೀ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದಿಂದ ಗುರುವಂದನೆ
ತ್ರಿವಿಧ ದಾಸೋಹ ಮಾಡಿದ ಶಿವಕುಮಾರ ಸ್ವಾಮೀಜಿ
ವಿಕ ಸುದ್ದಿಲೋಕ ಕಲಬುರಗಿ
ಮನುಷ್ಯನಿಗೆ ಅತ್ಯಂತ ಅವಶ್ಯಕವಾದ ಆಹಾರ ಹಾಗೂ ಆಶ್ರಯ ಜತೆಗೆ ಅರಿವು ನೀಡುವ ಮೂಲಕ ತುಮಕೂರು ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ತ್ರಿವಿಧ ದಾಸೋಹಿಯಾದರು ಎಂದು ಮಠದ ಉತ್ತರಾಧಿಕಾರಿ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿಗುರುವಾರ ಜಿಲ್ಲಾ ವೀರಶೈವ ಸಮಾಜ ಹಾಗೂ ಶ್ರೀ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದಿಂದ ತುಮಕೂರು ಸಿದ್ಧಗಂಗಾ ಮಠದ ಶ್ರೀ ಡಾ.ಶಿವಕುಮಾರ ಮಹಾಶಿವಯೋಗಿಗಳ 119ನೇ ಜನ್ಮದಿನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿಸಾನ್ನಿಧ್ಯವಹಿಸಿ ಮಾತನಾಡಿದರು.
12ನೇ ಶತಮಾನದ ಶರಣರು ಹೇಳಿದಂತೆ ಕಾಯಕ ಮತ್ತು ದಾಸೋಕ್ಕೆ ಸ್ವಾಮೀಜಿ ಮಹತ್ವ ನೀಡಿದ್ದರು. ಕಲಬುರಗಿಯಲ್ಲಿಶ್ರೀ ಶರಣಬಸವೇಶ್ವರ ದಾಸೋಹ ಪರಂಪರೆಯೊಂದಿಗೆ ಶೈಕ್ಷಣಿಕ ಕ್ರಾಂತಿ ಮಾಡಿದಂತೆ, ನಾಡಿನಾದ್ಯಂತ ಸಿದ್ಧಗಂಗಾ ಮಠದ ಪರಂಪರೆ ಅನ್ನ, ಶಿಕ್ಷಣ, ಆಶ್ರಯದ ನೆರವು ನೀಡಿ, ಅಪಾರ ಕೊಡುಗೆ ನೀಡಿದೆ. ಲಿಂ.ಶಿವಕುಮಾರ ಮಹಾಸ್ವಾಮೀಜಿಗಳು ನುಡಿದಂತೆ ನಡೆದ ಮಹಾತ್ಮರು. ಅವರು ಹಾಕಿಕೊಟ್ಟ ಲಿಂಗಪೂಜೆ ಮತ್ತು ದಾಸೋಹದ ಮಹತ್ವ ಇಂದಿಗೂ ಲಕ್ಷಾಂತರ ಮಕ್ಕಳಿಗೆ ಬೆಳಕಾಗಿದೆ ಎಂದು ನುಡಿದರು.
ಬೆಳಗುಂಪಾದ ಶ್ರೀ ಪರ್ವತೇಶ್ವರ ಶಿವಾಚಾರ್ಯರು ಹಾಗೂ ಶ್ರೀನಿವಾಸ್ ಸರಡಗಿಯ ಶಕ್ತಿಪೀಠದ ಅಪ್ಪಾರಾವ್ ದೇವಿಮುತ್ಯಾ ಮಾತನಾಡಿ, ಶಿವಕುಮಾರ ಸ್ವಾಮಿಗಳು ಸಮಾಜವನ್ನೇ ಶಕ್ತಿ ಎಂದು ನಂಬಿ ಜೋಳಿಗೆ ಹಿಡಿದು ದಾಸೋಹ ಮಾಡಿದವರು. ಪ್ರತಿವರ್ಷ 10 ಸಾವಿರ ಮಕ್ಕಳನ್ನು ಸ್ವಂತ ಮಕ್ಕಳಂತೆ ಕಂಡು ಅಕ್ಷರ ಕಲಿಸಿದ ದಾಸೋಹ ಮೂರ್ತಿಗಳು ಎಂದು ಹೇಳಿದರು.
ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಉದ್ಘಾಟಿಸಿದರು. ಶ್ರೀಶೈಲ ಸಾರಂಗ ಮಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ನಿಡಗುಂದಾದ ಶ್ರೀ ಕರುಣೇಶ್ವರ ಶಿವಾಚಾರ್ಯರು, ಚೌದಾಪುರಿಯ ಶ್ರೀ ರಾಜಶೇಖರ ಶಿವಾಚಾರ್ಯರು, ಎಂಎಲ್ಸಿ ಬಿ.ಜಿ.ಪಾಟೀಲ…, ಶ್ರೀ ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಜಿಲ್ಲಾ ವೀರಶೈವ ಸಮಾಜದ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ…, ಎಚ್ .ಕೆ.ಇ ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಮುಖಂಡರಾದ ನೀಲಕಂಠರಾವ್ ಮೂಲಗೆ, ಜಯಶ್ರೀ ಮತ್ತಿಮೂಡ್ , ಶರಣಕುಮಾರ ಪಾಟೀಲ…, ಕಲ್ಯಾಣಪ್ಪ ಪಾಟೀಲ…, ಅಲ್ಲಮಪ್ರಭು ದೇಶಮುಖ, ಸಂಗಮೇಶ ನಾಗನಹಳ್ಳಿ, ಶರಣು ಭೂಸನೊರು, ರಮೇಶ್ ಬಂಧು, ಮಲ್ಲಿಕಾರ್ಜುನ ನಾಗನಹಳ್ಳಿ ಇದ್ದರು. ಪ್ರಧಾನ ಕಾರ್ಯದರ್ಶಿ ಶ್ರೀಶೈಲ್ ಘುಳಿ ಸ್ವಾಗತಿಸಿದರು. ದೇವೇಂದ್ರಪ್ಪ ಅವಂಟಿ ಉಸ್ತುವಾರಿ ವಹಿಸಿದ್ದರು. ಚನ್ನಬಸಯ್ಯ ಗುರುವಿನ ನಿರೂಪಿಸಿದರು.
ಕೋಟ್ ...
ಜಿಲ್ಲೆಯಿಂದ ಸಾವಿರಾರೂ ವಿದ್ಯಾರ್ಥಿಗಳು ಸಿದ್ಧಗಂಗಾದ ಮಠದಲ್ಲಿತ್ರಿವಿಧ ದಾಸೋಹದಲ್ಲಿಕಲಿತು ಇಂದು ಉನ್ನತ ಹುದ್ದೆಗೆ ತೆರಳಿದ್ದಾರೆ. ಉತ್ತರ ಕರ್ನಾಟಕ ಅದರಲ್ಲೂಕಲ್ಯಾಣ ಕರ್ನಾಟಕದ ಮಕ್ಕಳಿಗೆ ಅನುಕೂಲ ಆಗಿದೆ. ಶ್ರೀ ಶಿವಕುಮಾರ ಸ್ವಾಮೀಜಿ ನಮೆಗೆಲ್ಲಪ್ರಾಥಸ್ಮರಣಿಯರಾಗಿದ್ದಾರೆ.
- ಅರುಣಕುಮಾರ ಕೊಡಲಹಂಗರಗಾ, ಅಧ್ಯಕ್ಷ
ಶ್ರೀ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ
ಕೋಟ್ ...
ಕಾಶಿ ಅಥವಾ ಪ್ರಯಾಗಕ್ಕೆ ಹೋದರೂ ಸಿಗದ ಪಾವಿತ್ರ್ಯತೆ ಸಿದ್ಧಗಂಗಾ ಶ್ರೀಗಳ ಪಾದಕ್ಕೆ ಹಣೆ ಮಣಿದರೆ ಪ್ರಾಪ್ತಿಯಾಗುತ್ತದೆ. ಅವರ ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡರೆ ನಮ್ಮ ಬದುಕು ಪಾವನವಾಗುತ್ತದೆ. ಅಂತಹ ವ್ಯಕ್ತಿತ್ವದ ಸ್ವಾಮೀಜಿಯ ಬದುಕನ್ನು ಕಂಡಿರುವ ನಾವು ನೀವುಗಳು ಧನ್ಯರು.
- ಶ್ರೀ ಕರುಣೇಶ್ವರ ಶಿವಾಚಾರ್ಯರು, ಕಂಚಾಲಕುಂಟಿ ನಂದಿಶ್ವರ ಮಠ, ನಿಡಗುಂದಾ
ಬಾಕ್ಸ್ ...
ಭಾರತಕ್ಕೆ ಅಧ್ಯಾತ್ಮವೇ ಆತ್ಮ
ನಾಗರಿಕತೆ ಮತ್ತು ಸಂಸ್ಕೃತಿಯ ತೊಟ್ಟಿಲಾಗಿರುವ ಭಾರತಕ್ಕೆ ಅಧ್ಯಾತ್ಮವೇ ಆತ್ಮವಾಗಿದೆ. ಜಗತ್ತಿನ ಇತಿಹಾಸದಲ್ಲಿಭಾರತಕ್ಕೆ ವಿಶಿಷ್ಟ ಸ್ಥಾನವಿದೆ. ಪರಕೀಯರ ದಾಳಿಯಿಂದ ಇಲ್ಲಿನ ಭಾಷೆ, ಆಡಳಿತ ಬದಲಾಗಿರಬಹುದು, ಆದರೆ, ಅಧ್ಯಾತ್ಮ ಕ್ಷೇತ್ರವು ಅಚಲವಾಗಿ ಉಳಿದಿದೆ ಎಂದು ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು. ವಿಶ್ವದ ನಾನಾ ಭಾಗಗಳಲ್ಲಿನಾಗರಿಕತೆ ಹುಟ್ಟುವ ಮೊದಲೇ ಭಾರತದಲ್ಲಿಸಂಸ್ಕೃತಿ ಇತ್ತು. ಇಂತಹ ನೆಲದಲ್ಲಿಅನೇಕ ಗುರುಗಳು ಬಂದು ಹೋಗಿದ್ದಾರೆ ಎಂದ ಅವರು, ನರ ರೂಪದಲ್ಲಿಬಂದ ನಾವು ಹರ ರೂಪದಲ್ಲಿಹೋಗಬೇಕು ಎನ್ನುವುದೇ ಬದುಕಿನ ಗುರಿಯಾಗಬೇಕು. ಮಠಮಾನ್ಯಗಳು ಇರದಿದ್ದರೆ ಇಂದು ಭಾರತ ವಿಶ್ವಗುರು ಎನಿಸಿಕೊಳ್ಳುತ್ತಿರಲಿಲ್ಲ. ಬಡತನ, ಜಾತಿ ವ್ಯವಸ್ಥೆ ಮತ್ತು ಮೂಢನಂಬಿಕೆಗಳನ್ನು ಮೆಟ್ಟಿ ನಿಂತು ಹಸಿದವರಿಗೆ ಅನ್ನ, ಅರಿವು ನೀಡಿದ ಕೀರ್ತಿ ಮಠಗಳಿಗೆ ಸಲ್ಲುತ್ತದೆ ಎಂದರು.
ಬಾP್ಸ…...
ಸಾಧಕರಿಗೆ ಪ್ರಶಸ್ತಿ ಪ್ರದಾನ
ಸುಧಾ ನಾಯಕ ಅವರಿಗೆ ‘ಸಿದ್ದಗಂಗಾಶ್ರೀ’ ಪ್ರಶಸ್ತಿ, ಹಣಮಂತಪ್ಪ ಬೆಳಗುಂಪಾ ಮತ್ತು ಕಾಶಿನಾಥ ಬಿ. ಪಾಟೀಲ್ ‘ಶಿವಕುಮಾರಶ್ರೀ’ ಪ್ರಶಸ್ತಿ, ಮಂಜುಳಾ ಬಿ ಅವರಿಗೆ ‘ಸಂಘಸಿರಿ’ ಪ್ರಶಸ್ತಿ ಹಾಗೂ ಮಹೇಂದ್ರ ಬಿರಾದಾರ ದಂಪತಿಗೆ ವಿಶೇಷ ಸನ್ಮಾನ ಮಾಡಲಾಯಿತು.

