ಮಕ್ಕಳಿಗೆ ನೈತಿಕ ಶಿಕ್ಷಣ ಕಲಿಸುವುದು ಅಗತ್ಯ

Contributed byaryabhatananda@gmail.com|Vijaya Karnataka

ಹರಿಹರದ ಎಸ್‌ಜೆವಿಪಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಎಸ್‌.ಎಚ್‌. ಪ್ಯಾಟಿ ಅವರು ಮಕ್ಕಳಿಗೆ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣದ ಮಹತ್ವವನ್ನು ತಿಳಿಸಿದರು. ಆನ್‌ಲೈನ್ ಶಿಕ್ಷಣದಿಂದ ಮಕ್ಕಳ ಯೋಚನಾ ಶಕ್ತಿ ಕುಗ್ಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಪೋಷಕರು ಮಕ್ಕಳನ್ನು 18ನೇ ವಯಸ್ಸಿನವರೆಗೂ ತಮ್ಮ ಜೊತೆಯಲ್ಲಿಟ್ಟುಕೊಂಡು ಶಿಕ್ಷಣ ನೀಡಿದರೆ ಮಾನಸಿಕವಾಗಿ ಸದೃಢರಾಗುತ್ತಾರೆ ಎಂದರು. ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವುದಕ್ಕೆ ಮಕ್ಕಳು ಹೆತ್ತವರನ್ನು ಕೊಲ್ಲುವಂತಹ ಘಟನೆಗಳು ನಡೆಯುತ್ತಿವೆ ಎಂದು ಎಚ್‌.ಸಿ. ಕೀರ್ತಿಕುಮಾರ್‌ ಹೇಳಿದರು. ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ತಿಳಿಸಬೇಕು ಎಂದು ಅವರು ತಿಳಿಸಿದರು.

teaching moral education to children is essential continuous decline of human values in higher education

ಮಕ್ಕಳಿಗೆ ನೈತಿಕ ಶಿಕ್ಷಣ ಕಲಿಸುವುದು ಅಗತ್ಯ

ವಿಕ ಸುದ್ದಿಲೋಕ ಹರಿಹರ

ಮಕ್ಕಳಿಗೆ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವನ್ನು ಕಲಿಸಿದಲ್ಲಿಮಾತ್ರ, ಬಹುಮುಖ ಪ್ರತಿಭಾವಂತರಾಗಿ ಹೊರ ಹೊಮ್ಮುತ್ತಾರೆಂದು ನಿವೃತ್ತ ಪ್ರಾಂಶುಪಾಲ ಎಸ್ .ಎಚ್ . ಪ್ಯಾಟಿ ಹೇಳಿದರು.

ನಗರದ ಎಸ್ ಜೆವಿಪಿ ಕಾಲೇಜ ಆವರಣದಲ್ಲಿಎಸ್ ಜೆಸಿಪಿಎಸ್ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಆನ್ ಲೈನ್ ಶಿಕ್ಷಣದಿಂದ ಯೋಚನೆ, ಆಲೋಚನೆ ಮರೆಯುತ್ತಿದ್ದು, ಇದರಿಂದ ಮಕ್ಕಳ ಮನಸ್ಸಿನಲ್ಲಿನ ಯೋಚನಾ ಶಕ್ತಿಯು ಕುಗ್ಗುತ್ತಿದೆ. ಅಲ್ಲದೆ ಗಂಭೀರ ಪರಿಣಾಮ ಬೀರುತ್ತಿದೆ. ಸರಕಾರ ಈ ನೀತಿಯನ್ನು ಕೈ ಬಿಡುವ ಯೋಚನೆ ಮಾಡುತ್ತಿದ್ದು, ಆದಷ್ಟು ಶೀಘ್ರವಾಗಿ ಜಾರಿಯಾದರೆ ಉತ್ತಮ. ಮಕ್ಕಳ ಭವಿಷ್ಯದ ದೃಷ್ಠಿಯಿಂದ ಆನೇಕ ಪೋಷಕರು ಮಕ್ಕಳನ್ನು ವಸತಿಯುತ ಪದ್ಧತಿಯ ಶಿಕ್ಷಣಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಸೇರಿಸುತ್ತಿದ್ದಾರೆ. ಅದರಿಂದ ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ ಎನ್ನುವುದನ್ನು ಯಾರೂ ಮರೆಯಬಾರದು ಎಂದರು.

18ನೇ ವಯಸ್ಸಿನವರೆಗೂ ಮಕ್ಕಳನ್ನು ತಮ್ಮ ಜೋತೆಯಲ್ಲಿಟ್ಟುಕೊಂಡು ಶಿಕ್ಷಣ ಕೊಡಿಸುತ್ತಾ, ದಿನ ನಿತ್ಯ ಆವರೊಂದಿಗೆ ಕೆಲ ಸಮಯ ಕಳೆದರೆ ಮಾನಸಿಕವಾಗಿ ಸದೃಢವಾಗಿ ಬೆಳೆಯುತ್ತಾರೆ. ಭವಿಷ್ಯದಲ್ಲಿಎಂತಹದೆ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಪಾಲಕರಿಗೆ ಸಲಹೆ ನೀಡಿದರು.

ಎಚ್ .ಸಿ. ಕೀರ್ತಿಕುಮಾರ್ ಮಾತನಾಡಿ, ಸಮಾಜದಲ್ಲಿಇಂದು ಮಾನವೀಯ ಮೌಲ್ಯಗಳು ಮಾಯವಾಗುತ್ತಿರುವ ಕಾರಣ, ಚಿಕ್ಕ ಚಿಕ್ಕ ವಿಷಯಕ್ಕೆ ಮಕ್ಕಳು ತಮ್ಮ ಹೆತ್ತವರನ್ನು ಕೊಲೆ ಮಾಡುತ್ತಿರುವ ದೃಷ್ಟಾಂತಗಳನ್ನು ನಡೆಯುತ್ತಿವೆ. ಈ ಹಿನ್ನೆಲೆ ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಮಾನವೀಯ ಮೌಲ್ಯ ಹಾಗೂ ಸಂಬಂಧಗಳ ಬಗ್ಗೆ ತಿಳಿಸುವ ಕಾರ್ಯ ಮಾಡಬೇಕಿದೆ ಎಂದರು.

ಎಸ್ ಜೆವಿಪಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಡಿ.ಎಂ. ಹಾಲಸ್ವಾಮಿ, ಕಾರ್ಯದರ್ಶಿ ಆರ್ .ಟಿ. ಪ್ರಶಾಂತ ದುಗ್ಗತ್ತಿಮಠ, ನಿರ್ದೇಶಕರಾದ ಎನ್ .ಎಂ. ತಿಪ್ಪೇಸ್ವಾಮಿ, ಎನ್ .ಎಚ್ .ಪಾಟೀಲ್ , ಪಿಯು ಕಾಲೇಜಿನ ಪ್ರಾಂಶುಪಾಲ ವೈ.ಬಿ.ಚೇತನ್ , ಸಹಾಯಕ ಪ್ರಾಧ್ಯಾಪಕ ಟಿ.ಭರಮಪ್ಪ, ಮುಖ್ಯ ಶಿಕ್ಷಕಿ ಫಾತೀಮಾ ಖಾನಂ, ವೀರೇಶ್ ಇದ್ದರು.

----

3 ಹೆಚ್ .ಆರ್ ಆರ್ 4

ಹರಿಹರದ ಎಸ್ ಜೆವಿಪಿ ಕಾಲೇಜಿನಲ್ಲಿಏರ್ಪಡಿಸಿದ್ದ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಓದಲೇ ಬೇಕಾದ ಸುದ್ದಿ