ಪೆರ್ಲ: ಮಾಲಿನ್ಯ ಮುಕ್ತ ನವ ಕೇರಳ ಯೋಜನೆಯ ಭಾಗವಾಗಿ ಶಿಕ್ಷಣ ಇಲಾಖೆ , ಸ್ಥಳೀಯಾಡಳಿತ, ಹರಿತ ಕೇರಳಂ ಮಿಷನ್ , ಶುಚಿತ್ವ ಮಿಷನ್ ಸಂಯುಕ್ತ ಆಶ್ರಯದಲ್ಲಿಎಣ್ಮಕಜೆ ಗ್ರಾಪಂ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಪಂಚಾಯಿತಿ ಸಭಾಂಗಣದಲ್ಲಿಶುಕ್ರವಾರ ನಡೆದ ಕಾರ ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ಕುಸುಮಾವತಿ ಬಿ. ಉದ್ಘಾಟಿಸಿದರು. ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಒಳಮೊಗರು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ಸೋಮಶೇಖರ.ಜೆ.ಎಸ್ . ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾಶುಚಿತ್ವ ಮಿಷನ್ ಸಂಪನ್ಮೂಲ ವ್ಯಕ್ತಿ ಸುಗಂಧಿ ಎಂ.ವರದಿ ಮಂಡಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಮ್ಲಾಇಬ್ರಾಹಿಂ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಿಜಯ ಕೆ. ಶುಭ ಹಾರೈಸಿದರು. ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ನವೀನ ಕುಮಾರಿ ಎ., ಯೋಜನಾ ಸಮಿತಿ ಉಪಾಧ್ಯಕ್ಷ ಬಿ.ಎಸ್ .ಗಾಂಭೀರ್ , ವಾರ್ಡ್ ಸದಸ್ಯರು ಭಾಗವಹಿಸಿದ್ದರು. ಗ್ರಾಪಂ ಪ್ರಭಾರ ಕಾರ್ಯದರ್ಶಿ ಗಿರೀಶ್ ಟಿ. ಸ್ವಾಗತಿಸಿದರು. ಪಿಇಸಿ ಕಾರ್ಯದರ್ಶಿ ರಾಜೇಶ ಬಿ. ವಂದಿಸಿದರು. ಮಧ್ಯಾಹ್ನ ವೇಸ್ಟ್ ಟು ಆರ್ಟ್ ಪ್ರಾತ್ಯಕ್ಷಿಕೆ ಆಯೋಜಿಸಲಾಯಿತು.
‘ತ್ಯಾಜ್ಯ ಮುಕ್ತ ಪರಿಸರಕ್ಕಾಗಿ ಹಲವಾರು ಯೋಜನೆಗಳನ್ನು ಜ್ಯಾರಿಗೊಳಿಸಿದರು ಇಂದಿಗೂ ಸಂಪೂರ್ಣ ತ್ಯಾಜ್ಯ ಮುಕ್ತವಾಗಿಲ್ಲ. ನಾನಾ ರೂಪದಲ್ಲಿಜಾಗೃತಿ ಮೂಡಿಸಿದರೂ ಜನರು ಬದಲಾಗಿಲ್ಲ. ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬ ಮಾತಿನಂತೆ ಶಾಲೆಗಳಿಂದಲೇ ತ್ಯಾಜ್ಯ ವಸ್ತುಗಳ ನಿರ್ಮೂಲನೆ ಮತ್ತು ಮರು ಬಳಕೆ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿಜಾಗೃತಿ ಮೂಡಿಸಲು ಕಾರ ್ಯಕ್ರಮ ಆಯೋಜಿಸಲಾಗಿದೆ. ಪಂಚಾಯಿತಿಯ 13 ಶಾಲೆಗಳ ಯುಪಿ, ಎಚ್ ಎಸ್ ಮತ್ತು ಎಚ್ ಎಸ್ ಎಸ್ ವಿಭಾಗಗಳಿಂದ ತಲಾ 2 ಮಕ್ಕಳನ್ನು ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಲಾಗಿದೆ’
- ಕುಸುಮಾವತಿ ಬಿ., ಎಣ್ಮಕಜೆ ಗ್ರಾಪಂ ಅಧ್ಯಕ್ಷರು
27 ಪಿಎಲ್ ಕುಸುಮಾವತಿ: ಕುಸುಮಾವತಿ ಬಿ.
27 ಪಿಎಲ್ ವೇತನ: ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ, ವಿದ್ಯಾರ್ಥಿ ವೇತನ ವಿತರಿಸಲಾಯಿತು.

