ಪೆರ್ಲ: ರಬ್ಬರ್ ಬೆಳೆಗಾರರು ಮತ್ತು ಟ್ಯಾಪಿಂಗ್ ಕಾರ್ಮಿಕರಿಗೆ ಕನ್ನಡಕ ಖರೀದಿಸಲು ರಬ್ಬರ್ ಬೋರ್ಡ್ 2 ಸಾವಿರ ರೂ. ಆರ್ಥಿಕ ನೆರವು ನೀಡಲಿದೆ. ವಯಸ್ಸು ಮತ್ತು ಇತರ ಕಾರಣಗಳಿಂದ ಟ್ಯಾಪಿಂಗ್ ಕಾರ್ಮಿಕರ ದೃಷ್ಟಿಗೆ ತೊಂದರೆಯಾಗುವುದನ್ನು ತಪ್ಪಿಸಲು ರಬ್ಬರ್ ಮಂಡಳಿ ಪ್ರತಿ ಮೂರು ವರ್ಗಗಳಿಗೊಮ್ಮೆ ಈ ಆರ್ಥಿಕ ನೆರವು ನೀಡುತ್ತಿದೆ. ಟ್ಯಾಪಿಂಗ್ ಕಾರ್ಮಿಕರು, ಸ್ವಂತವಾಗಿ ಟ್ಯಾಪಿಂಗ್ ಮಾಡುವ ಬೆಳೆಗಾರರು, ಆರ್ ಪಿಎಸ್ ಗ್ರೂಪ್ ಕಾರ್ಮಿಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ರಬ್ಬರ್ ಮಂಡಳಿಯ ಕ್ಷೇತ್ರ ಕಚೇರಿ, ರಬ್ಬರ್ ಉತ್ಪಾದಕರ ಸಂಘದಲ್ಲಿಲಭಿಸುವ ಅರ್ಜಿ ನಮೂನೆ ಭರ್ತಿಗೊಳಿಸಿ ಕಣ್ಣು ಪರೀಕ್ಷೆಯ ದಾಖಲೆ, ಕನ್ನಡಕ ಖರೀದಿ ಬಿಲ್ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿಯೊಂದಿಗೆ ಕ್ಷೇತ್ರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿದಾರರ ಬ್ಯಾಂಕ್ ಖಾತೆಗೆ ಹಣ ಪಾವತಿಯಾಗಲಿದೆ.

