** (ಧಿಸ್ಟೋಧಿರಿ) ಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆಗೆ ತೆರೆಯಿತು ರಹದಾರಿ

Contributed bysudhakara.kannadamoole@timesofindia.com|Vijaya Karnataka

ಪುತ್ತೂರಿನಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಮಹತ್ವದ ಹೆಜ್ಜೆ ಇಡಲಾಗಿದೆ. 40 ಎಕರೆ ಜಾಗದಲ್ಲಿ 300 ಹಾಸಿಗೆಗಳ ಬೋಧನಾ ಆಸ್ಪತ್ರೆ ನಿರ್ಮಾಣಕ್ಕೆ 180 ಕೋಟಿ ರೂ. ಮಂಜೂರಾಗಿದೆ. ಶೀಘ್ರದಲ್ಲೇ ಶಿಲಾನ್ಯಾಸ ನಡೆಯಲಿದೆ. 2027ರ ವೇಳೆಗೆ ಪುತ್ತೂರಿನಲ್ಲಿ ಮೆಡಿಕಲ್‌ ಕಾಲೇಜು ಆರಂಭವಾಗುವ ನಿರೀಕ್ಷೆ ಇದೆ. ಇದು ಜಿಲ್ಲೆಯ ಆರೋಗ್ಯ ಕ್ಷೇತ್ರದ ಪ್ರಗತಿಗೆ ದೊಡ್ಡ ಕೊಡುಗೆಯಾಗಲಿದೆ.

with the approval of 180 crore rupees for puttur medical college a new hospital is a victory for workers struggle

300 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ 180 ಕೋಟಿ | ಶೀಘ್ರ ಶಿಲಾನ್ಯಾಸ

ಸುಧಾಕರ ಸುವರ್ಣ ಪುತ್ತೂರು

s್ಠdhaka್ಟa.ka್ಞ್ಞadaಞಟಟ್ಝಛಿಃಠಿಜಿಞಛಿsಟ್ಛಜ್ಞಿdಜಿa.್ಚಟಞ

ದಕ್ಷಿಣ ಕನ್ನಡ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಬೇಕು ಮತ್ತು ಅದನ್ನು ಪುತ್ತೂರಿನಲ್ಲಿಸ್ಥಾಪಿಸಬೇಕು ಎಂದು ಕಳೆದೊಂದು ದಶಕದಿಂದ ನಡೆಸುತ್ತಾ ಬಂದ ಹೋರಾಟ ಈಗ ನಿರ್ಣಾಯಕ ಹಂತ ತಲುಪಿದೆ.

ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕಾದಿರಿಸಿರುವ ಪುತ್ತೂರು ಹೊರವಲಯದ ಸೇಡಿಯಾಪುವಿನ 40 ಎಕರೆ ಜಾಗದಲ್ಲಿ300 ಹಾಸಿಗೆಗಳ ಬೋಧನಾ ಆಸ್ಪತ್ರೆ ನಿರ್ಮಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದಲ್ಲದೆ, 180 ಕೋಟಿ ರೂ. ಮಂಜೂರು ಮಾಡುವ ಮೂಲಕ ಮೆಡಿಕಲ್ ಕಾಲೇಜು ಸ್ಥಾಪನೆಗೆ ದೊಡ್ಡದೊಂದು ರಹದಾರಿಯೇ ತೆರೆದುಕೊಂಡಿದೆ.

ಕನಿಷ್ಠ 300 ಹಾಸಿಗೆಗಳ ಆಸ್ಪತ್ರೆ ಇಲ್ಲದೆ ಮೆಡಿಕಲ್ ಕಾಲೇಜು ಸ್ಥಾಪನೆ ಸಾಧ್ಯವಿಲ್ಲಎಂಬ ವಾದ ಮುಂದಿಟ್ಟುಕೊಂಡು ಬಹುಪಾಲು ಜನ ಪುತ್ತೂರು ಮೆಡಿಕಲ್ ಕಾಲೇಜು ಕೇವಲ ಗಗನ ಕುಸುಮ ಎಂದು ಲೇವಡಿ ಮಾಡುತ್ತಿದ್ದರೆ, ಶಾಸಕ ಅಶೋಕ್ ರೈ ಮಾತ್ರ ತಾವು ಗೆದ್ದು ಬಂದ ದಿನದಿಂದಲೇ ಭಗೀರಥ ಪ್ರಯತ್ನ ಮಾಡಿ ಸ್ವತಃ ಮುಖ್ಯಮಂತ್ರಿಗಳ ಮನವೊಲಿಸಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದ್ದರು.

ಇದೀಗ ಈ ನಿಟ್ಟಿನಲ್ಲಿಮಹತ್ವದ ಮೈಲುಗಲ್ಲುಸ್ಥಾಪನೆಯಾಗಿದೆ. ಪುತ್ತೂರು ನಗರದಲ್ಲಿಈಗಾಗಲೇ 100 ಹಾಸಿಗೆಗಳ ಆಸ್ಪತ್ರೆಯಿದ್ದರೂ ಅದನ್ನು ಅದೇ ರೀತಿ ಉಳಿಸಿಕೊಂಡು ಸೇಡಿಯಾಪು ಜಾಗದಲ್ಲಿಪ್ರತ್ಯೇಕ 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟ ಸಮ್ಮತಿ ನೀಡಿದೆ. ಕೆಲವೇ ದಿನಗಳಲ್ಲಿಆಸ್ಪತ್ರೆಗೆ ಶಿಲಾನ್ಯಾಸ ನಡೆಯಲಿದೆ. ಅನುದಾನವೂ ಮಂಜೂರಾದ ಕಾರಣ ಒಂದು ವರ್ಷದಲ್ಲಿಆಸ್ಪತ್ರೆ ಕಟ್ಟಡ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 2027ರಲ್ಲಿಪುತ್ತೂರಿನಲ್ಲಿಮೆಡಿಕಲ್ ಕಾಲೇಜು ಸ್ಥಾಪನೆ ಆಗುವುದು ಬಹುತೇಕ ಖಚಿತವಾಗಿದೆ.

ಭವಿಷ್ಯದಲ್ಲಿಪುತ್ತೂರು ನಗರದಲ್ಲಿರುವ 100 ಹಾಸಿಗೆಗಳ ಸರಕಾರಿ ಆಸ್ಪತ್ರೆ ಮಂಗಳೂರಿನ ಲೇಡಿಗೋಷನ್ ಮಾದರಿಯಲ್ಲಿಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯಾಗಿ ಬದಲಾಗಲಿದೆ. 1928ರಲ್ಲಿ25 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಗೊಂಡಿತ್ತು. 1942ರಲ್ಲಿ33 ಹಾಸಿಗೆಗಳಿಗೆ ವಿಸ್ತರಣೆಯಾಗಿತ್ತು. 1950ರಲ್ಲಿ53ಕ್ಕೆ ಏರಿತ್ತು. 27 ವರ್ಷಗಳ ಹಿಂದೆ ಅಂದರೆ 2000ದಲ್ಲಿ100 ಹಾಸಿಗೆಗಳ ಆಸ್ಪತ್ರೆಯಾಗಿತ್ತು.

ಬಾಕ್ಸ್

ಮೆಡಿಕಲ್ ಕಾಧಿಲೇಧಿಜು ಹೆಜ್ಜೆಗುರುತು

*2016ರಲ್ಲಿಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆಗೆ ಹೋರಾಟ ಆರಂಭ.

*2017ರಲ್ಲಿಸೇಡಿಯಾಪುವಿನಲ್ಲಿ40 ಎಕರೆ ಜಾಗ ಮಂಜೂರು.

*2018ರಿಂದ 2023ರ ವರೆಗೆ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯಿಂದ ಹಂತ ಹಂತದ ಹೋರಾಟ. ಸಭೆ, ಸಹಿ ಸಂಗ್ರಹ, ಸಿಎಂ ಭೇಟಿ, ಮನವಿ ಸಲ್ಲಿಕೆ.

*2023ರಲ್ಲಿಅಶೋಕ್ ರೈ ಶಾಸಕರಾಗಿ ಗೆದ್ದ ಬಳಿಕ ಪುತ್ತೂರಿಗೆ ಮೆಡಿಕಲ್ ಕಾಲೇಜು ತರುವ ಭರವಸೆ.

*2025ರ ಬಜೆಟ್ ನಲ್ಲಿಪುತ್ತೂರಿಗೆ ಮೆಡಿಕಲ್ ಕಾಲೇಜು ನೀಡುವ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ.

*2025ರ ಅ.20ರಂದು ಪುತ್ತೂರಿನ ನೆಲದಲ್ಲಿನಿಂತು ಇಲ್ಲಿಮೆಡಿಕಲ್ ಕಾಲೇಜು ಸ್ಥಾಪಿಸಿಯೇ ಸಿದ್ಧ ಎಂದು ಮತ್ತೊಮ್ಮೆ ಘೋಷಿಸಿದ ಸಿಎಂ.

*2026ರ ಫೆ.26ರಂದು ನಡೆದ ಸಂಪುಟ ಸಭೆಯಲ್ಲಿ300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ 180 ಕೋಟಿ ಮಂಜೂರು.

ಬಾಕ್ಸ್

ಪ್ರತ್ಯೇಕ ಆಸ್ಪತ್ರೆಯೇ ಸಾಧನೆ

ಸಂಜೀವ ಮಠಂದೂರು ಶಾಸಕರಾಗಿದ್ದಾಗ ಹಾಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಹೆಚ್ಚುವರಿ 50 ಹಾಸಿಗೆಗಳ ಕಟ್ಟಡ ಮಂಜೂರು ಮಾಡುವ ಪ್ರಕ್ರಿಯೆ ನಡೆದಿತ್ತು. ಸಿಎಂ ಸಿದ್ದರಾಮಯ್ಯ ಪುತ್ತೂರು ಮೆಡಿಕಲ್ ಕಾಲೇಜು ಘೋಷಣೆ ಮಾಡಿದ ಮೇಲೂ ಆರೋಗ್ಯ ಇಲಾಖೆ ಹಾಲಿ ಆಸ್ಪತ್ರೆಯನ್ನೇ ಮೇಲ್ದರ್ಜೆಗೇರಿಸುವ ಯತ್ನ ಮಾಡಿತ್ತು. ಇದನ್ನು ಸುತರಾಂ ಒಪ್ಪದ ಶಾಸಕ ಅಶೋಕ್ ರೈ ಸೇಡಿಯಾಪು ಜಾಗದಲ್ಲೇ ನೂತನ ಆಸ್ಪತ್ರೆ ನಿರ್ಮಾಣವಾಗಬೇಕೆಂದು ಹಠಕ್ಕೆ ಬಿದ್ದು ಮಂಜೂರು ಮಾಡಿಸಿದ್ದಾರೆ. ಇದಕ್ಕಾಗಿ ಎಲ್ಲಕಡತಗಳನ್ನು ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾಯಿಸಿದ್ದಾರೆ. ಇದೀಗ ಸೇಡಿಯಾಪುವಿನಲ್ಲೇ ಹೊಸ ಬೋಧನಾ ಆಸ್ಪತ್ರೆ ನಿರ್ಮಾಣವಾಗಲಿರುವುದು ಮೆಡಿಕಲ್ ಕಾಲೇಜು ಸ್ಥಾಪನೆಯಲ್ಲಿಮಹತ್ವದ ಮೈಲುಗಲ್ಲಾಗಲಿದೆ.

ಕೋಟ್

ಪುತ್ತೂರಿನಲ್ಲಿಮೆಡಿಕಲ್ ಕಾಲೇಜು ಸ್ಥಾಪನೆಯಾಗುವುದು ಚಾರಿತ್ರಿಕ ಘಟನೆ. ಜಿಲ್ಲೆಗೆ ನೀಡಲಾದ ಮೆಡಿಕಲ್ ಕಾಲೇಜು ತಾಲೂಕು ಕೇಂದ್ರಕ್ಕೆ ಬರುವುದು ಸಾಮಾನ್ಯ ವಿಚಾರವಲ್ಲ. ನಮ್ಮ ಕಾಂಗ್ರೆಸ್ ಸರಕಾರ ಬಹುದೊಡ್ಡ ಕೊಡುಗೆ ನೀಡಿದೆ. ಶೀಘ್ರದಲ್ಲೇ ನೂತನ ಆಸ್ಪತ್ರೆಗೆ ಶಿಲಾನ್ಯಾಸ ನಡೆಯಲಿದೆ.

-ಅಶೋಕ್ ರೈ, ಶಾಸಕ, ಪುತ್ತೂರು.