ಕಾಸರಗೋಡು : ಆಸ್ಪತ್ರೆಯಲ್ಲಿವೈದ್ಯರನ್ನು ನೋಡಲು ಬಂದಿದ್ದ 16 ವರ್ಷದ ಬಾಲಕನ ಮೇಲೆ ಸಲಿಂಗರತಿ ಕಿರುಕುಳ ನೀಡಿದ ದೂರಿನ ಮೇರೆಗೆ ಕಾಸರಗೋಡು ನಗರ ಠಾಣಾ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ತೈಸಿರ್ (23) ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಫೆ. 25ರಂದು ಬಾಲಕ ತನ್ನ ಹತ್ತಿರದ ಸಂಬಂಧಿಯೊಂದಿಗೆ ನಗರದ ಆಸ್ಪತ್ರೆಯಲ್ಲಿವೈದ್ಯರನ್ನು ನೋಡಲು ಬಂದಾಗ ಆರೋಪಿ ಪರಿಚಯಗೊಂಡು ಬಾಲಕನನ್ನು ಕರೆದುಕೊಂಡು ಹೋಗಿ ಸಲಿಂಗರತಿ ನೀಡಿರುವುದಾಗಿ ಪೊಲೀಸರಿಗೆ ಬಂದಿರುವ ದೂರಿನಲ್ಲಿತಿಳಿಸಲಾಗಿದೆ.
ಆರೋಪಿ ತೈಸಿರ್ ವಿರುದ್ಧ ಆದೂರು ಪೊಲೀಸ್ ಠಾಣೆಯಲ್ಲಿಮಾತ್ರ ಪ್ರಸ್ತುತ ಒಂಬತ್ತು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇವುಗಳಲ್ಲಿಐದು ಪೋಕ್ಸೋ ಪ್ರಕರಣಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸ ದೂರಿನ ಆಧಾರದ ಮೇಲೆ ಅವರ ವಿರುದ್ಧ ದಾಖಲಾಗಿರುವ ಆರನೇ ಪೋಕ್ಸೊ ಪ್ರಕರಣ ಇದಾಗಿದೆ.
ಸ್ವೀಕರಿಸಿದ ದೂರಿನ ಆಧಾರದ ಮೇಲೆ ಆರೋಪಿಯ ಪತ್ತೆಗಾಗಿ ತನಿಖೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

