ಜೋಡೆತ್ತಿನ ಗಾಡಿ ಓಟದ ಸ್ಪರ್ಧೆ

Contributed bymahadevakon@gmail.com|Vijaya Karnataka

ನೇತ್ರನಹಳ್ಳಿ ಗೊಂಚಿಗಾರ ವಂಶಸ್ಥರ ಕ್ರೀಡಾಂಗಣದಲ್ಲಿ ಭಾನುವಾರ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆ ನಡೆಯಿತು. ಮಾರಮ್ಮ ಜಾತ್ರೆ ಪ್ರಯುಕ್ತ ನಡೆದ ಈ ಸ್ಪರ್ಧೆಯಲ್ಲಿ 24 ಜೋಡೆತ್ತು ಗಾಡಿಗಳು ಪಾಲ್ಗೊಂಡಿದ್ದವು. 250 ಮೀಟರ್‌ ದೂರದ ಓಟದಲ್ಲಿ ಗೆದ್ದವರಿಗೆ ಬಹುಮಾನ ನೀಡಲಾಯಿತು. ದೊರೆಹಟ್ಟಿಯ ರಾಮಾರ್ಜುನ ಜೋಡೆತ್ತುಗಳು ಪ್ರಥಮ ಸ್ಥಾನ ಪಡೆದವು. ಆಂಧ್ರ ಸೇರಿದಂತೆ ನಾನಾ ಕಡೆಯಿಂದ ಜನರು ಆಗಮಿಸಿ ಸ್ಪರ್ಧೆಯನ್ನು ವೀಕ್ಷಿಸಿದರು.

jodetina gaadi oota a grand racing festival

ಜೋಡೆತ್ತಿನ ಗಾಡಿ ಓಟದ ಸ್ಪರ್ಧೆ

ಮೊಳಕಾಲ್ಮುರು: ತಾಲೂಕಿನ ಕೋನಸಾಗರ ಗ್ರಾಪಂ ವ್ಯಾಪ್ತಿಯ ನೇತ್ರನಹಳ್ಳಿ ಗೊಂಚಿಗಾರ ವಂಶಸ್ಥರ ಕ್ರೀಡಾಂಗಣದಲ್ಲಿಭಾನುವಾರ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆ ನಡೆಸಲಾಯಿತು.

ಗ್ರಾಮದ ವಡ್ನಹಳ್ಳಿ ಮಾರಮ್ಮ ಜಾತ್ರೆ ಪ್ರಯುಕ್ತ ಸ್ಥಳೀಯ ಐಪಿಎಲ್ ಬಳಗದಿಂದ ಏರ್ಪಡಿಸಿದ್ದ ಈ ಸ್ಪರ್ಧೆಯಲ್ಲಿಸ್ಥಳೀಯ ನೇತ್ರನಹಳ್ಳಿ, ಮರ್ಲಹಳ್ಳಿ, ಕೂಡ್ಲಿಗಾರನಹಟ್ಟಿ, ಜಂಗ್ಲಿಸೂರಯ್ಯನಹಟ್ಟಿ, ಚಳ್ಳಕೆರೆ ತಾಲೂಕಿನ ಪತ್ರೆ ಮರದಹಟ್ಟಿ, ಪಾವಗಡ ಸೇರಿದಂತೆ ಆಂಧ್ರ ಭಾಗದಿಂದಲೂ ಒಟ್ಟು 24 ಜೋಡೆತ್ತು ಗಾಡಿಗಳು ಪಾಲ್ಗೊಂಡಿದ್ದವು.

ಸ್ಪರ್ಧೆಯಲ್ಲಿ250 ಮೀಟರ್ ದೂರಕ್ಕೆ ಯಾವ ಗಾಡಿ ಮೊದಲು ತಲುಪಲಿದೆಯೋ ಆ ಜೋಡೆತ್ತು ಗಾಡಿ ಪ್ರಥಮ ಸ್ಥಾನ ಪಡೆಯಲಿದೆ ಎನ್ನುವ ನಿಯಮದೊಂದಿಗೆ ಆರಂಭವಾದ ಸ್ಪರ್ಧೆಯು ಸಂಜೆಯವರೆಗೂ ನಡೆಯಿತು.

ಒಂದು ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿಪಾಲ್ಗೊಳ್ಳಲು 1 ಸಾವಿರ ರೂ. ಶುಲ್ಕ ನಿಗಧಿ ಮಾಡಲಾಗಿತ್ತು. ಗೆದ್ದ ಜೋಡಿ ಎತ್ತುಗಳಿಗೆ 20 ಸಾವಿರ ರೂ(ಪ್ರಥಮ), 15 ಸಾವಿರ ರೂ(ದ್ವಿತೀಯ), 5001 ಸಾವಿರ ರೂ(ತೃತೀಯ) ಹಾಗೂ ನಾಲ್ಕನೇ ಬಹುಮಾನವಾಗಿ 2501 ರೂ. ನೀಡಲಾಯಿತು.

ಪ್ರಥಮ ಸ್ಥಾನವನ್ನು ನಂದಿವಾಳ ಸಮೀಪದ ದೊರೆಹಟ್ಟಿಯ ರಾಮಾರ್ಜುನ ಜೋಡೆತ್ತುಗಳು, ದ್ವಿತೀಯ ಸ್ಥಾನವನ್ನು ಮತ್ರೆಮರದಹಟ್ಟಿಯ ಸಣ್ಣೋಬಯ್ಯ ಜೋಡೆತ್ತಿನ ಗಾಡಿ ಪಡೆಯಿತು.

ಸ್ಪರ್ಧೆಯನ್ನು ವೀಕ್ಷಿಸಲು ನೆರೆಯ ಆಂಧ್ರಾ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಿಂದ ಜನರು ಆಗಮಿಸಿದ್ದರು. ಎತ್ತುಗಳು ಗಾಡಿ ಎಳೆಯಲು ಮುಂದಾಗುತ್ತಿದ್ದಂತೆ, ಸುತ್ತಲೂ ಸೇರಿದ್ದ ಜನರು ಕೇಕೆ, ಶಿಳ್ಳೆ ಹಾಗೂ ಚಪ್ಪಾಳೆ ತಟ್ಟುತ್ತಾ ಎತ್ತುಗಳಿಗೆ ಹುರಿದುಂಬಿಸುತ್ತಿದ್ದರು.

ಸ್ಥಳದಲ್ಲಿದ್ರಾಕ್ಷಿ ರಸ ಮತ್ತು ವೈನ್ ಬೋರ್ಡ್ ನಿಗಮ ರಾಜ್ಯಾಧ್ಯಕ್ಷ ಡಾ.ಬಿ.ಯೋಗೇಶ್ ಬಾಬು, ಮುಖಂಡರಾದ ಕೆ.ಸೂರಯ್ಯ, ಕೆ.ಟಿ.ತಿಪ್ಪಮ್ಮ, ಪಿ.ಮಲ್ಲಯ್ಯ, ಶಕುಂತಲಮ್ಮ, ಕೊಲ್ಲಾರಪ್ಪ, ಜಿ.ಎನ್ .ಜಗದೀಶ್ , ಪಿ.ಮಂಜಣ್ಣ, ಕಾಮಯ್ಯ, ಜೆ.ಸಿ.ತಿಪ್ಪೇಸ್ವಾಮಿ, ಮಹೇಶ್ , ಸೂರೆಪಾಪಯ್ಯ, ಜೆ.ದಡ್ಡಯ್ಯ, ಕೃಷ್ಣಮೂರ್ತಿ, ಬಳ್ಳಾರಿ ಶಿವು, ಪೂಜಾರ ಪಾಲಯ್ಯ, ಗೋವಿಂದ, ಈರಣ್ಣ, ಕಾಮಯ್ಯ, ತಿಪ್ಪೇಸ್ವಾಮಿ ಕೋಲಂ ಇದ್ದರು.

2 ಎಂಎಲ್ ಕೆ ಪಿ 1

ಮೊಳಕಾಲ್ಮುರು ತಾಲೂಕು ನೇತ್ರನಹಳ್ಳಿ ಗೊಂಚಿಗಾರ ವಂಶಸ್ಥರ ಕ್ರೀಡಾಂಗಣದಲ್ಲಿಭಾನುವಾರ ಜೋಡೆತ್ತು ಗಾಡಿ ಓಟದ ಸ್ಪರ್ಧೆಯಲ್ಲಿಜೋಡೆತ್ತಿನ ಗಾಡಿಯೊಂದರ ಓಟ ಗಮನ ಸೆಳೆಯಿತು.