ಚಂದ್ರ ಗ್ರಹಣದ ಹಿನ್ನೆಲೆ, ದೇವಾಲಯಗಳು ಬಂದ್
ವಿಕಸುದ್ದಿಲೋಕ ವಿಜಯಪುರ
ಹುಣ್ಣಿಮೆಯ ದಿನದಂದು ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿಮಂಗಳವಾರ, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ದೇವಾಲಯಗಳ ಬಾಗಿಲುಗಳನ್ನು ಮುಚ್ಚಲಾಗಿತ್ತು. ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರಲಿಲ್ಲ. ಸಂಜೆ 7ಗಂಟೆಯ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಬೆಳಗ್ಗೆಯಿಂದಲೇ ದೇವಾಲಯಗಳಿಗೆ ಭೇಟಿ ನೀಡಿದ್ದ ಭಕ್ತರು, ಗ್ರಹಣ ಕಾಲ ಆರಂಭವಾಗುವುದಕ್ಕಿಂತ ಮೊದಲೇ ದೇವರ ದರ್ಶನವನ್ನು ಪಡೆದುಕೊಂಡರು. ದೇವರಿಗೆ ಹುಣ್ಣಿಮೆಯ ಅಂಗವಾಗಿ ವಿಶೇಷ ಹೂವಿನ ಅಲಂಕಾರದ ಜತೆಗೆ, ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಅರ್ಚಕ ಮುರಳಿಭಟ್ಟಾಚಾರ್ಯ ಅವರು ಮಾತನಾಡಿ, ಸೂರ್ಯಗ್ರಹಣ, ಹಗಲಿನಲ್ಲಿ, ಚಂದ್ರ ಗ್ರಹಣ ರಾತ್ರಿಯಲ್ಲಿಸಂಭವಿಸುವುದು ವಾಡಿಕೆಯಿತ್ತು. ಈ ಬಾರಿ ಕೇತುಗ್ರಸ್ತ ಚಂದ್ರಗ್ರಹಣ ಸಂಜೆ 4 ಗಂಟೆಯಿಂದ ಆರಂಭವಾಗುವುದರಿಂದ, ನಮ್ಮ ದೇಶದಲ್ಲಿಗೋಚರವಾಗದ್ದರಿಂದ ಗ್ರಹಣದ ಪರಿಣಾಮ ನಮ್ಮ ದೇಶದ ಮೇಲೆ ಆಗುವುದಿಲ್ಲ. ಜನರು, ಯಾವುದೇ ಆತಂಕ ಪಡಬಾರದು. ಯಾವುದೇ ರಾಶಿಗಳ ಮೇಲೂ ಇದರ ಪರಿಣಾಮವಾಗುವುದಿಲ್ಲ. ಧಾರ್ಮಿಕ ನಂಬಿಕೆಯಂತೆ, ಗ್ರಹಣದ ಸಮಯದಲ್ಲಿದೇವಾಲಯಗಳ ಬಾಗಿಲು ಬಂದ್ ಮಾಡುತ್ತೇವೆ ಎಂದರು.
03.ವಿಜಯಪುರ.04: ವಿಜಯಪುರ ಪಟ್ಟಣದಲ್ಲಿ, ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ, ದೇವಾಲಯಗಳ ಬಾಗಿಲು ಮುಚ್ಚಲಾಗಿತ್ತು.

