5 ರೂ.ಗೆ ತಿಂಡಿ, 8 ರೂ.ಗೆ ಊಟ: ಶಾಸಕ ಎಸ್ .ಎನ್ .ನಾರಾಯಣಸ್ವಾಮಿ
ವಿಕ ಸುದ್ದಿಲೋಕ ಬಂಗಾರಪೇಟೆ
ಮುಂದಿನ ಒಂದು ತಿಂಗಳಲ್ಲಿಕಾಲೇಜಿನಲ್ಲಿಕ್ಯಾಂಟಿನ್ ತೆರೆದು ವಿದ್ಯಾರ್ಥಿಗಳಿಗೆ 5 ರೂ.ಗೆ ತಿಂಡಿ, 8 ರೂ.ಗೆ ಊಟ ನೀಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕ ಎಸ್ .ಎನ್ .ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಕೆಸಿ ರೆಡ್ಡಿ ಕಾಲೇಜಿನಲ್ಲಿನಿರ್ಮಿಸಿರುವ ನೂತನ ಕಟ್ಟಡ ಹಾಗೂ ಗ್ರಂಥಾಲಯ ಲೋಕಾರ್ಪಣೆ ಮಾಡಿ ಮಾತನಾಡಿದರು. ಲಕ್ಷಾಂತರ ರೂ. ಖರ್ಚು ಮಾಡಿದರೂ ಖಾಸಗಿ ಕಾಲೇಜುಗಳಲ್ಲಿಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಆದರೆ ಖರ್ಚಿಲ್ಲದೆ ಉತ್ತಮ ಶಿಕ್ಷಣ ಸರಕಾರಿ ಕಾಲೇಜುಗಳಲ್ಲಿಲಭ್ಯವಿದ್ದು, ಪೋಷಕರು ವಿನಾಕಾರಣ ದುಂದುವೆಚ್ಚ ಮಾಡಿ ಖಾಸಗಿ ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ದಾಖಲಿಸದೆ ಎಲ್ಲಾಅನುಕೂಲಗಳಿರುವ ಸರಕಾರಿ ಕಾಲೇಜುಗಳಿಗೆ ದಾಖಲಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು. ಇಲ್ಲಿಶಿಕ್ಷಣ ಪಡೆದಂತಹ ಮಕ್ಕಳು ಉನ್ನತ ಹುದ್ದೆಗಳನ್ನು ಗಿಟ್ಟಿಸಿಕೊಂಡಿದ್ದಾರೆ ಎಂದರು.
ಈ ಹಿಂದೆ ಕಾಲೇಜಿನಲ್ಲಿಬಿಎ ಮತ್ತು ಬಿಕಾಂ ಕೋರ್ಸ್ ಗಳನ್ನು ಮಾತ್ರ ನಡೆಸುತ್ತಿದ್ದು, ಕೇವಲ 230 ವಿದ್ಯಾರ್ಥಿಗಳು ದಾಖಲಾಗಿದ್ದರು. ಅಂದಿನ ಸಚಿವರಿಂದ ಹೆಚ್ಚುವರಿ ಸೀಟುಗಳಿಗೆ ಅನುಮೋದನೆ ಪಡೆದು ಬಿಎಸ್ಸಿ, ಎಂಎ, ಎಂಕಾಂ ಎಲ್ಲಾಕೋರ್ಸ್ ಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಚೆನ್ನಾಗಿ ಓದುವ ಮೂಲಕ ಐಎಎಸ್ , ಐಪಿಎಸ್ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಕಾಲೇಜಿಗೆ 6.84 ಕೋಟಿ ವೆಚ್ಚದಲ್ಲಿಮಾದರಿ ಆಡಿಟೋರಿಯಂ ನಿರ್ಮಿಸಲಾಗುತ್ತಿದ್ದು, ಅದನ್ನು ಹವಾನಿಯಂತ್ರಿತ ಆಡಿಟೋರಿಯಂ ಆಗಿ ಉನ್ನತೀಕರಿಸಲು ಕನಸು ಕಂಡಿದ್ದೇನೆ. ಕಾಲೇಜಿಗೆ 2.16 ಕೋಟಿ ವೆಚ್ಚದಲ್ಲಿನೂತನ ಗ್ರಂಥಾಲಯ ನಿರ್ಮಿಸಲಾಗಿದ್ದು, ಅದರಲ್ಲಿನೂತನ ತಂತ್ರಜ್ಞಾನಕ್ಕೆ ತಕ್ಕಂತೆ ಕಂಪ್ಯೂಟರ್ ಗಳನ್ನು ಅಳವಡಿಸಿ ವಿಶಿಷ್ಟ ರೀತಿಯಲ್ಲಿಬೋಧನೆಗೆ ವ್ಯವಸ್ಥೆ ಮಾಡಲಾಗುತ್ತದೆ. ಮಕ್ಕಳ ಕಲಿಕೆಗೆ ತೊಂದರೆ ಆಗಬಾರದೆಂದು 3 ಕೋಟಿ ವೆಚ್ಚದಲ್ಲಿನೂತನ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಸರಕಾರದ ಗ್ಯಾರಂಟಿಗಳಲ್ಲಿಒಂದಾದ ಯುವನಿಧಿಯನ್ನು ಅರ್ಹರು ಪಡೆದುಕೊಳ್ಳಬೇಕು ಎಂದರು.
ಕಾಲೇಜಿನ ಮಕ್ಕಳ ಅನುಕೂಲಕ್ಕೆ ವಾರದಲ್ಲಿಕುಡಿಯುವ ನೀರಿನ ಘಟಕವನ್ನು ಅಳವಡಿಸಲಾಗುತ್ತದೆ. ಮಕ್ಕಳು ಖಾಲಿ ಹೊಟ್ಟೆಯಲ್ಲಿಪಾಠ ಕೇಳಬಾರದು ಹಾಗೂ ಕಡಿಮೆ ವೆಚ್ಚದಲ್ಲಿಉತ್ತಮ ಪೌಷ್ಟಿಕ ಆಹಾರವನ್ನು ಒದಗಿಸಲು ಒಂದು ತಿಂಗಳಲ್ಲಿಕ್ಯಾಂಟಿನ್ ಆರಂಭಿಸಲಾಗುತ್ತದೆ. ಅದರ ಮೂಲಕ 5 ರೂಗಳಿಗೆ ತಿಂಡಿ, 8 ರೂಗಳಿಗೆ ಊಟ ನೀಡಲು ಒತ್ತು ನೀಡಲಾಗುತ್ತದೆ. ಕೆಎಸ್ ಆರ್ ಟಿಸಿ ಅಧಿಕಾರಿಗಳ ಜತೆಗೆ ಈಗಾಗಲೇ ಚರ್ಚಿಸಿದ್ದು, ಬಸ್ ನಿಲ್ದಾಣದಿಂದ ಕಾಲೇಜಿಗೆ ವಿದ್ಯಾರ್ಥಿಗಳು ಬರಲು 5 ಬಸ್ ಗಳನ್ನು ಹಾಕುವ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ಭರವಸೆ ನೀಡಿದರು.
ಈ ವೇಳೆ ಕಾಲೇಜಿನ ಪ್ರಾಂಶುಪಾಲೆ ಡಾ.ಶಕುಂತಲ, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್ .ಎ.ಪಾರ್ಥಸಾರಥಿ, ಪುರಸಭೆ ಮಾಜಿ ಅಧ್ಯಕ್ಷರಾದ ಗೋವಿಂದ, ಸುಹೇಲ್ , ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್ .ಮುನಿರಾಜು, ಉದ್ಯಮಿಗಳಾದ ಅನಿಲ್ ಸೇಗು, ಹಿದ್ದು, ವೈ.ವಿ.ರಮೇಶ್ , ಇನ್ಸ್ ಪೆಕ್ಟರ್ ರವಿಕುಮಾರ್ , ಉದ್ಯೋಗÜ ವಿನಿಮಯ ಅಧಿಕಾರಿ ಶ್ರೀನಿವಾಸ್ , ರಾಜನ್ , ವೆಂಕಟರಾಮಣ್ಣ, ಭಾಗ್ಯಮ್ಮ ಇತರರು ಹಾಜರಿದ್ದರು.
2 ಬಂಗಾರಪೇಟೆ: ಪಟ್ಟಣದ ಕೆಸಿ ರೆಡ್ಡಿ ಕಾಲೇಜಿನಲ್ಲಿನಿರ್ಮಿಸಲಾದ ನೂತನ ಕಟ್ಟಡಗಳನ್ನು ಶಾಸಕ ಎಸ್ .ಎನ್ .ನಾರಾಯಣಸ್ವಾಮಿ ಲೋಕಾರ್ಪಣೆ ಮಾಡಿದರು.

