ಮೂರು ವರ್ಷದ ನಂತರ ಮನೆಕಳ್ಳನ ಬಂಧನ

Contributed bybhrahmanand.arali@timesgroup.com|Vijaya Karnataka

ಕಲಬುರಗಿ ನಗರದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಮಹಾರಾಷ್ಟ್ರದ ಸುರೇಶ ಗಂಗಾರಾಮ ಚವ್ಹಾಣ ಎಂಬಾತನನ್ನು ರಾಘವೇಂದ್ರ ನಗರ ಪೊಲೀಸರು ಮೂರು ವರ್ಷದ ಬಳಿಕ ಬಂಧಿಸಿದ್ದಾರೆ. 2022ರ ಅಕ್ಟೋಬರ್‌ನಲ್ಲಿ ನಡೆದಿದ್ದ ಈ ಕಳ್ಳತನ ಪ್ರಕರಣದಲ್ಲಿ 45 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇನ್ಸ್‌ಪೆಕ್ಟರ್‌ ವಾಜಿದ್‌ ಪಟೇಲ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹಿಡಿದಿದೆ.

arrest of house burglar operation by five police officers after 3 years

ವಿಕ ಸುದ್ದಿಲೋಕ ಕಲಬುರಗಿ ನಗರದ ಮನೆಯೊಂದರಲ್ಲಿಕಳ್ಳತನ ಮಾಡಿದ್ದ ಅಂತಾರಾಜ್ಯ ಕುಖ್ಯಾತ ಕಳ್ಳನನ್ನು ರಾಘವೇಂದ್ರ ನಗರ ಪೊಲೀಸರು ಮೂರು ವರ್ಷದ ನಂತರ ಬಂಧಿಸಿದ್ದಾರೆ. ನಗರದ ಮನೆಯೊಂದರಲ್ಲಿ2022ರ ಅಕ್ಟೋಬರ್ ನಲ್ಲಿಕಳ್ಳತನ ಮಾಡಿದ್ದ ನೆರೆಯ ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಮೈಂದರ್ಗಿ ಗ್ರಾಮದ ಸುರೇಶ ಗಂಗಾರಾಮ ಚವ್ಹಾಣ(38) ಬಂಧಿತ ಆರೋಪಿ. ಬಂಧಿತನಿಂದ 45 ಗ್ರಾಂ. ಬಂಗಾರದ ಆಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ಇನ್ಸ್ ಪೆಕ್ಟರ್ ವಾಜಿದ್ ಪಟೇಲ್ ನೇತೃತ್ವದಲ್ಲಿಎಎಸ್ ಐ ಮಲ್ಲಿಕಾರ್ಜುನ ಜಾನೆ, ಸಿಬ್ಬಂದಿ ಮಲ್ಲನಗೌಡ, ಉಮೇಶ, ಶರಣುಬಸವ, ಅರೇಶ, ಪ್ರಶಾಂತ, ಬಸವರಾಜ ಅವರ ತಂಡ ಆರೋಪಿಯನ್ನು ಬಂಧಿಸಿದೆ.

ಓದಲೇ ಬೇಕಾದ ಸುದ್ದಿ