ಮಾ. 8ಕ್ಕೆ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಪ್ರವೇಶ ಪರೀಕ್ಷೆ

Contributed byk.suresh1258@gmail.com|Vijaya Karnataka

ಬೀದರ್‌ನಲ್ಲಿ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಹೆಣ್ಣು ಮಕ್ಕಳಿಗಾಗಿ ಆರಂಭವಾಗಿದೆ. ಮಾ. 8ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. 5ನೇ ತರಗತಿ ಪಠ್ಯಕ್ರಮದ 100 ಅಂಕಗಳ ಪರೀಕ್ಷೆ ಇರುತ್ತದೆ. 20 ಹೆಣ್ಣು ಮಕ್ಕಳಿಗೆ ಮಾತ್ರ ಅವಕಾಶವಿದೆ. 5ನೇ ತರಗತಿ ಪಾಸಾದ ವಿದ್ಯಾರ್ಥಿನಿಯರಿಗೆ 6ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ, ಊಟ, ವಸತಿ ನೀಡಲಾಗುವುದು. ಬಸವಾದಿ ಶರಣ ಸಂಸ್ಕೃತಿಯ ವಿಶೇಷ ಅಧ್ಯಯನ ಮಾಡಿಸಲಾಗುತ್ತದೆ.

entrance exam for anubhava mantapa cultural school on march 8 a great opportunity to empower girl students

ವಿಕ ಸುದ್ದಿಲೋಕ ಭಾಲ್ಕಿ ಹೆಣ್ಣು ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕಾಗಿ ಬೀದರ್ ನಗರದಲ್ಲಿಅನುಭವಮಂಟಪ ಬಸವಕಲ್ಯಾಣದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಆರಂಭಿಸಿದ್ದಾರೆ. ಈ ವಿದ್ಯಾಲಯದ ಪ್ರವೇಶಕ್ಕಾಗಿ ಇದೇ ಮಾ.8 ರಂದು ಬೆಳಗ್ಗೆ 9 ಕ್ಕೆ ಬೀದರ್ ನ ವಿದ್ಯಾನಗರ ಮೈಲೂರು ಕ್ರಾಸ್ ಸಮೀಪದ ಡಾ. ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿಲಿಖಿತ ಪರೀಕ್ಷೆ ನಡೆಸಲಾಗುವುದು. ಈ ಪರೀಕ್ಷೆಯು 5 ನೇ ತರಗತಿಯ ಪಠ್ಯ ಕ್ರಮದ ಇದ್ದು, ಪ್ರಶ್ನೆ ಪತ್ರಿಕೆ 100 ಅಂಕಗಳ ಬಹು ಮಾದರಿಯಲ್ಲಿಇರುತ್ತವೆ. ಪರೀಕ್ಷೆಗೆ ಬರುವಾಗ ವಿದ್ಯಾರ್ಥಿ ಆಧಾರ ಕಾರ್ಡ್ ಜೆರಾಕ್ಸ್ ಪ್ರತಿ, ಮತ್ತು ಎರಡು ಪಾಸ್ ಪೋರ್ಟ್ ಸೈಜ್ ಭಾವಚಿತ್ರ ತಪ್ಪದೆ ತರಬೇಕು. ಈ ವಿದ್ಯಾಲಯದಲ್ಲಿ20 ಹೆಣ್ಣುಮಕ್ಕಳಿಗೆ ಮಾತ್ರ ಅವಕಾಶ ಇರುತ್ತದೆ. ವಿದ್ಯಾರ್ಥಿನಿಯು 5 ನೇ ತರಗತಿ ಪಾಸಾಗಿರಬೇಕು. ಶಿಕ್ಷಣದ ಮಾಧ್ಯಮ ಕನ್ನಡವಾಗಿರುತ್ತದೆ. ಶಾಲೆಯ ಪಠ್ಯದ ಜತೆಗೆ ಬಸವಾದಿ ಶರಣ ಸಂಸ್ಕೃತಿಯ ವಿಶೇಷ ಅಧ್ಯಯನ ಮಾಡಿಸಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿನಿಯರಿಗೆ 6ನೇ ತರಗತಿಯಿಂದ 10ನೇ ತರಗತಿವರೆಗೆ ಉಚಿತವಾಗಿ ಶಿಕ್ಷಣ, ಊಟ ಮತ್ತು ವಸತಿ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ 8050964650, 9448358029ಕ್ಕೆ ಸಂಪರ್ಕಿಸಲು ಶ್ರೀಮಠದ ಪ್ರಕಟಣೆಯಲ್ಲಿತಿಳಿಸಲಾಗಿದೆ.

ಓದಲೇ ಬೇಕಾದ ಸುದ್ದಿ