ಕೆಸ್ತೂರು ಕೊಪ್ಪಲಲ್ಲಿತರಬೇತಿ ಶಿಬಿರ

Contributed byrajendrarao.krn@gmail.com|Vijaya Karnataka

ಕೆಸ್ತೂರು ಕೊಪ್ಪಲಿನಲ್ಲಿ ಔಟ್‌ರೀಚ್‌ ಸಂಸ್ಥೆಯು ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗಾಗಿ ಉದ್ಯಮ ಸ್ಥಾಪನೆ ಕುರಿತು ತರಬೇತಿ ನೀಡಿತು. ಐಟಿಸಿ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಅಣಬೆ ಬೇಸಾಯ, ಬಟ್ಟೆ ತಯಾರಿಕೆ, ಕೋಳಿ ಸಾಕಣೆ ಮುಂತಾದ ಉದ್ಯಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಔಟ್‌ರೀಚ್‌ ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಲಭ್ಯ, ಆರೋಗ್ಯ ಶಿಬಿರ, ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡುತ್ತಿದೆ.

entrepreneurship and health camp a prestigious initiative in kesturu kopplalli

ಕೆಸ್ತೂರು ಕೊಪ್ಪಲಲ್ಲಿತರಬೇತಿ ಶಿಬಿರ

ವಿಕ ಸುದ್ದಿಲೋಕ ಕೃಷ್ಣರಾಜನಗರ

ಔಟ್ ರೀಚ್ ಸಂಸ್ಥೆಯು ಮೈಸೂರು ಮತ್ತು ಹಾಸನ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿಸರಕಾರಿ ಶಾಲೆಗಳಿಗೆ ಮೂಲಸೌಲಭ್ಯ, ಸಾರ್ವಜನಿಕರಿಗೆ ಆರೋಗ್ಯ ಶಿಬಿರ, ಆರ್ಥಿಕ ಸ್ವಾವಲಂಬನೆ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಜನಪರ ಕೆಲಸಗಳನ್ನು ಮಾಡುತ್ತಿದೆ ಎಂದು ಸಂಸ್ಥೆಯ ಕೃಷ್ಣಯ್ಯ ಹೇಳಿದರು.

ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾ.ಪಂ. ಸಭಾಂಗಣದಲ್ಲಿಐಟಿಸಿ ಮತ್ತು ಔಟ್ ರೀಚ್ ಸಂಸ್ಥೆಯ ಸಹಭಾಗಿತ್ವದಲ್ಲಿಏರ್ಪಡಿಸಿದ್ದ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಉದ್ಯಮ ಸ್ಥಾಪನೆಗೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘‘ಔಟ್ ರೀಚ್ ಸಂಸ್ಥೆಯು ಕೃಷ್ಣರಾಜನಗರ, ಸಾಲಿಗ್ರಾಮ, ಹುಣಸೂರು, ಅರಕಲಗೂಡು ತಾಲೂಕುಗಳ ವ್ಯಾಪ್ತಿಯ 72 ಸರಕಾರಿ ಶಾಲೆಗಳಲ್ಲಿಕುಡಿಯುವ ನೀರಿನ ಘಟಕ, ತಡೆಗೋಡೆ ನಿರ್ಮಾಣ, ಹೈಟೆಕ್ ಶೌಚಾಲಯ, ಕೊಠಡಿಗಳು, ಕೈತೊಳೆಯುವ ಘಟಕಗಳನ್ನು ನಿರ್ಮಾಣ ಮಾಡಿ ವಿದ್ಯಾರ್ಥಿಗಳಲ್ಲಿಸ್ವಚ್ಛತೆ ಮತ್ತು ಪರಿಸರ ಕಾಪಾಡುವ ಬಗ್ಗೆ ಜಾಗೃತಿ ಮೂಡಿಸಲಾಗಿದೆ,’’ ಎಂದರು.

‘‘ಗ್ರಾ.ಪಂ.ಗಳಲ್ಲಿಕಸ ಸಂಗ್ರಹಣೆಗಾರರಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು, ಅವರ ಆರ್ಥಿಕ ಸ್ವಾವಲಂಬನೆಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ,’’ ಎಂದು ತಿಳಿಸಿದರು.

‘‘ಹುಣಸೂರು ತಾಲೂಕಿನ 40 ಗ್ರಾ.ಪಂ.ಗಳನ್ನು ಲೈಟ್ ಹೌಸ್ ಇನಿಷಿಯೇಟೀವ್ ಎರಡನೇ ಹಂತದಲ್ಲಿಆಯ್ಕೆಮಾಡಿಕೊಳ್ಳಲಾಗಿದ್ದು, ಇದರಲ್ಲಿ5 ಗ್ರಾ.ಪಂ.ಗಳನ್ನು ಮಾದರಿ ಗ್ರಾ.ಪಂ.ಗಳನ್ನಾಗಿ ಘೋಷಣೆ ಮಾಡುವ ಹಂತದಲ್ಲಿಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ,’’ ಎಂದರು.

‘‘ದೇವಸ್ಥಾನಗಳಿಗೆ ಡ್ರಮ್ ನೀಡುವುದು, ಗಿಡ ನೆಡುವುದು, ಸ್ವಸಹಾಯ ಸಂಘದ ಸದಸ್ಯರಿಗೆ ತರಬೇತಿಯ ಮೂಲಕ ಆರ್ಥಿಕ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಸಹಕಾರ, ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಸಂಬಂಧಪಟ್ಟಂತೆ ಔಟ್ ರೀಚ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ,’’ ಎಂದರು.

ಗ್ರಾ.ಪಂ. ಪಿಡಿಒ ದಿವ್ಯಾ ಮಾತನಾಡಿ, ‘‘ಐಟಿಸಿ ಮತ್ತು ಔಟ್ ರೀಚ್ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಪಂಚಾಯಿತಿ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿಗಳನ್ನು ಕಾಲಕಾಲಕ್ಕೆ ಆಯೋಜನೆ ಮಾಡಿ ಜನತೆಯಲ್ಲಿಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ,’’ ಎಂದರು.

ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ರಮೇಶ್ ಮಾತನಾಡಿ, ‘‘ಅಣಬೆ ಬೇಸಾಯ, ಬ್ಯೂಟಿ ಪಾರ್ಲರ್ ,ಸಿದ್ಧ ಉಡುಪು ತಯಾರಿಕೆ, ಬ್ಯಾಗ್ ತಯಾರಿಕೆ, ಕೋಳಿ ಸಾಕಣೆ ಸೇರಿದಂತೆ ಹಲವು ಸಣ್ಣ ಉದ್ಯಮ ಸ್ಥಾಪನೆ ಸೇರಿದಂತೆ ವಿವಿಧ ಉದ್ಯಮಗಳ ಕುರಿತು ಮಾಹಿತಿ ನೀಡಿದರು.

ಪಂಚಾಯಿತಿ ಕಾರ್ಯದರ್ಶಿ ಬೋರೇಗೌಡ ಎ.ಪಿ. ರಮೇಶ್ , ಎಂಬಿಕೆ ಹೇಮಾ, ಅಶೋಕ್ , ಗುರುಪ್ರಸಾದ್ , ಮಧುಚಂದ್ರ ಹಾಗೂ ಮಹಿಳಾ ಸದಸ್ಯರು, ಪಂಚಾಯಿತಿ ಸಿಬ್ಬಂದಿ ಹಾಗೂ ಸ್ವ ಸಹಾಯ ಸಂಘದ ಮಹಿಳೆಯರು ಪಾಲ್ಗೊಂಡಿದ್ದರು.

ಎಂವೈಎಸ್ 04ಕೆಆರ್ ಎನ್ 3ಸಿ

ಕೃಷ್ಣರಾಜನಗರ ತಾಲೂಕು ಕೆಸ್ತೂರು ಕೊಪ್ಪಲು ಗ್ರಾ.ಪಂ. ಆವರಣದಲ್ಲಿಔಟ್ ರೀಚ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಸಂಸ್ಥೆಯ ಕೃಷ್ಣಯ್ಯ ಉದ್ಘಾಟಿಸಿದರು. ಪಿಡಿಒ ದಿವ್ಯಾ ಇನ್ನಿತರರು ಇದ್ದರು.