ಹೋಳಿ ಪಾನೀಯಗಳ ಹೊಸ ಸ್ವಾದ
ಲವಲವಿಕೆ ಸುದ್ದಿಲೋಕ
ಇಂಟ್ರೊ: ಹೋಳಿ ಹಬ್ಬದಾಚರಣೆಯಲ್ಲಿ ಸೇವಿಸುವ ಸಾಂಪ್ರದಾಯಿಕ ಪಾನೀಯ ಥಂಡಾಯಿ . ಇದರ ಜೊತೆ ಇನ್ನಷ್ಟು ಹೊಸ ಹಾಗೂ ಆರೋಗ್ಯಕರ ಪಾನೀಯಗಳು ಸೆಳೆಯುತ್ತಿವೆ.
ಸ್ಲಗ್ : ಫೆಸ್ಟಿವ್ ಫ್ಲೇವರ್
ಬಿಸಿಲ ನಡುವಿನ ಬಣ್ಣದೊಕುಳಿಯಲ್ಲಿಮಿಂದೆದ್ದವರ ದಾಹ ತಣಿಸಲು ಹೋಳಿ ಪಾನೀಯಗಳು ಸಜ್ಜಾಗಿವೆ.
ಹೋಳಿ ಹಬ್ಬದಲ್ಲಿಸಾಂಪ್ರದಾಯಿಕವಾಗಿ ಕೆಲವು ಪಾನೀಯಗಳನ್ನು ತಯಾರಿಸುವ ಪದ್ಧತಿ ಇದೆ. ಈಗ ಅವುಗಳಿಗೆ ಇನ್ನಷ್ಟು ಆರೋಗ್ಯಕರ ಹಾಗೂ ಸ್ವಾದದ ಸ್ಪರ್ಶ ಸಿಕ್ಕಿದೆ. ಆಧುನಿಕ ಮತ್ತು ಆರೋಗ್ಯಕರ ಟ್ವಿಸ್ವ್ ಒಳಗೊಂಡ ಪಾನೀಯಗಳ ಬಗ್ಗೆ ವಿವರ ಇಲ್ಲಿದೆ.
ವಿಭಿನ್ನ ಸ್ವಾದ
ಹೋಳಿ ಹಬ್ಬದ ಸಮಯದಲ್ಲಿಗಮನ ಸೆಳೆಯುವ ಹಾಗೂ ಉತ್ತರ ಭಾರತದಲ್ಲಿಖ್ಯಾತವಾಗಿರುವ ಪ್ರಮುಖ ಪಾನೀಯ ಸಾಂಪ್ರದಾಯಿಕ ಥಂಡಾಯಿ ಮತ್ತು ಲಸ್ಸಿ . ಈಗ ಇವು ಜಾಗತಿಕ ಸ್ಪರ್ಶ ಪಡೆದುಕೊಂಡಿವೆ. ಒಂದಷ್ಟು ಟ್ವಿಸ್ಟ್ ನೊಂದಿಗೆ ಹೊಸ ರೂಪ, ಬಣ್ಣ, ರುಚಿ ಪಡೆದಿವೆ. ಸಾಂಪ್ರದಾಯಿಕ ಹಾಲಿನ ಪಾನೀಯಗಳಿಗೆ ಬಬಲ್ ಟೀ ಮಾದರಿಯ ಟ್ಯಾಪಿಯೋಕಾ ಪರ್ಲ್ಸ್ ಸೇರಿಸಲಾಗುತ್ತಿದೆ. ಮ್ಯಾಂಗೋ ಮಿಲ್ಕ…, ಥಾಯ್ ಮಿಲ್ಕ… ಟೀ ಮತ್ತು ನಟ್ , ಕಾಫಿ ಆಧರಿತ ಕ್ರೀಮಿ ಪಾನೀಯಗಳು ಈ ಬಾರಿ ಹಬ್ಬದ ಮೆರುಗು ಹೆಚ್ಚಿಸಿವೆ. ಎಳನೀರು ಪಂಚ್ ಟ್ರೆಂಡಿಂಗ್ ನಲ್ಲಿದ್ದು, ಎಳನೀರಿಗೆ ಪುದೀನಾ ಎಲೆಗಳು, ನಿಂಬೆ ರಸ ಮತ್ತು ಒಂದು ಚಿಟಿಕೆ ಸೈಂಧವ ಲವಣ ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಫ್ಲೇವರ್ಡ್ ಮಜ್ಜಿಗೆ ಶೂಟರ್ಸ್ ಅಂದರೆ ಮಜ್ಜಿಗೆಗೆ ಈಗ ಹಣ್ಣುಗಳ ಮಸಾಲೆಯುಕ್ತ ಟಚ್ ನೀಡಲಾಗುತ್ತಿದೆ. ಉದಾಹರಣೆಗೆ ಸ್ಟ್ರಾಬೆರಿ ಪುದೀನಾ ಮಜ್ಜಿಗೆ, ಮಾವಿನ ಮಜ್ಜಿಗೆ ಇತ್ಯಾದಿ. ಹಸುವಿನ ಹಾಲಿನ ಬದಲಿಗೆ ಓಟ್ಸ್ ಹಾಲು ಅಥವಾ ಗೋಡಂಬಿ ಹಾಲು ಬಳಸಿ ಥಂಡಾಯಿ ತಯಾರಿಸಲಾಗುತ್ತಿದೆ. ನೈಸರ್ಗಿಕ ಬಣ್ಣಗಳ ಹಬ್ಬಕ್ಕೆ ಹೂವಿನ ಸಾರವಿರುವ ಪಾನೀಯಗಳು ಫೇಮಸ್ ಆಗಿವೆ. ದಾಸವಾಳ, ಶಂಖಪುಷ್ಪ, ಗುಲಾಬಿ ದಳಗಳನ್ನು ಸೇರಿಸಿ ನೈಸರ್ಗಿಕ ಬಣ್ಣ ನೀಡಲಾಗುತ್ತಿದೆ. ಫ್ರೂಟ್ ಪಾಪ್ಸಿಕಲ್ ಮಾಕ್ಟೇಲ್ ಅಂದರೆ ಗ್ಲಾಸಿನಲ್ಲಿಎಳನೀರು ಅಥವಾ ಸೋಡಾ ಹಾಕಿ ಅದರೊಳಗೆ ಹಣ್ಣುಗಳಿಂದ ಮಾಡಿದ ಐಸ್ ಕ್ಯಾಂಡಿ ಇಡುವುದು. ಐಸ್ ಕರಗಿದಂತೆ ಪಾನೀಯದ ರುಚಿ ಬದಲಾಗುತ್ತದೆ. ಕೇಸರಿ ಮಾವಿನ ಹಣ್ಣಿನ ಕೋಲ್ಡ… ಬ್ರೂ ರುಚಿಕರ ಪೇಯವಾಗಿದ್ದು, ಇದು ಕಾಫಿ ಪ್ರಿಯರಿಗಾಗಿ ಸಿದ್ಧಪಡಿಸಿದ ವಿಭಿನ್ನ ಪಾನೀಯ. ಅಲ್ಲದೆ ಸಾಂಪ್ರದಾಯಿಕ ಥಂಡಾಯಿಗೆ ಕಾಫಿಯ ಟ್ವಿಸ್ವ್ ನೀಡಲಾಗಿದೆ.
ಬಾಕ್ಸ್
ಆರೋಗ್ಯಕರ ಸ್ಪರ್ಶ
ಸಾಂಪ್ರದಾಯಿಕ ಹೋಳಿ ಪಾನೀಯಗಳಿಗೆ ಈ ಬಾರಿ ಆರೋಗ್ಯದ ಸ್ಪರ್ಶ ನೀಡಲಾಗಿದೆ. ಸಕ್ಕರೆಯ ಬದಲು ಜೇನುತುಪ್ಪ ಅಥವಾ ಬೆಲ್ಲ, ಹಾಲಿನ ಬದಲು ಬಾದಾಮಿ ಅಥವಾ ಸೋಯಾ ಹಾಲನ್ನು ಬಳಸುವ ಮೂಲಕ ಆರೋಗ್ಯಕ್ಕೆ ಒತ್ತು ನೀಡಲಾಗಿದೆ. ಮೊಳಕೆ ಕಾಳುಗಳ ಚಾಟ್ ಮತ್ತು ಹಬೆಯಲ್ಲಿಬೇಯಿಸಿದ ಸ್ನ್ಯಾಕ್ಸ್ ಗೆ ಆದ್ಯತೆ ನೀಡಲಾಗುತ್ತಿದೆ. ಗುಜಿಯಾ ಹೋಳಿ ಹಬ್ಬದ ಸಿಗ್ನೇಚರ್ ಸ್ವೀಟ್ . ಇದನ್ನು ಒಣಹಣ್ಣುಗಳಿಂದ ತುಂಬಿಸಿ ಇನ್ನಷ್ಟು ಆರೋಗ್ಯಕರವಾಗಿಸುವುದರ ಜೊತೆಗೆ ಚಾಕೊಲೆಟ್ , ಸಿರಿಧಾನ್ಯ, ಪಾನ್ , ಮಲ್ಟಿ ಕಲರ್ ಗುಜಿಯಾ ಹೀಗೆ ಹೊಸ ಪ್ರಯೋಗಗಳನ್ನು ಮಾಡಲಾಗುತ್ತಿದೆ.
////////////////

